29/01/2026
IMG-20260118-WA0000

ಬೆಳಗಾವಿ-18: ಗಡಿ ಭಾಗದಲ್ಲಿ ಕನ್ನಡ ಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ದಿನನಿತ್ಯ ಯಾಗುತ್ತವೆ. ಗಡಿ ಭಾಗದಲ್ಲಿನ ಕನ್ನಡಿಗರಿಗೆ ಮೊದಲು ಆಧ್ಯೆತೆ ನೀಡಬೇಕೆಂದು, ಆಗ್ರಹಸಿ ಕಿತ್ತೂರು ಕರ್ನಾಟಕ ಯು ಘಟಕ ಸೇನೆ ಪ್ರತಿಭಟನೆ ನಡೆಸಿದರು.
ಶನಿವಾರ ನಗರದ ಚನ್ನಮ್ಮ ವೃತ್ತದಲ್ಲಿ ನಡೆದ ಕಿತ್ತೂರು ಕರ್ನಾಟಕ ಯುವ ಸೇನೆಯ ಯುವ ಘಟಕ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳಿ ಮನವಿ ಸಲ್ಲಿಸಿದರು.
ಪ್ರತಿಭಟನೆಯ ವೇಳೆ ಗಡಿಭಾಗದಲ್ಲಿ ರಾಜ್ಯದಲ್ಲಿ ದಕ್ಷಿಣ ಪಥೇಶ್ವರ ನೌಕಾಪಡೆಯ ಪಿತಾಮಹ ಇಮ್ಮಡಿ, ಪುಲಕೇಶಿ ಇತಿಹಾಸ ಪುರುಷನ ಮೂರ್ತಿ ಪ್ರತಿಷ್ಠಾಪಣೆ ಮುಖ್ಯ ವೃತ್ತದಲ್ಲಿ ದೊಡ್ಡ ಪ್ರಮಾಣ ಸುಮಾರು 40 ರಿಂದ 60 ಅಡಿಯಷ್ಟು ಎತ್ತರದ ಮೂತ್ರಿಯನ್ನು ಸ್ಥಾಪಿಸಬೇಕು, ಹಾಗೂ ಚಿತ್ರದುರ್ಗ ಕೋಟೆಯ ಅರಸ ರಾಜವೀರ ಮದಕರಿನಾಯಕರ ಮತ್ತು ಬೆಳಗಾವಿಯ ರಾಣಿ ಪಾರ್ವತಿದೇವಿ ಕಾಲೇಜಿನ ಮುಂಭಾಗದಲ್ಲಿ ಇರುವ ಖಾಲಿ ವೃತ್ತಕ್ಕೆ ಮದಕರಿ ನಾಯಕರ ಪುತ್ಥಳಿ ಸ್ಥಾಪನೆ ಮಾಡಬೇಕು,
ಗಡಿ ಭಾಗದಲ್ಲಿನ ಗ್ರಾಮಗಳಲ್ಲಿ ವೀರ ಪುರುಷ ಅಮಟೂರು ಬಾಳಪ್ಪ ಮತ್ತು ವೀರ ವನಿತೆ, ಬೆಳವಡಿ ಮಲ್ಲಮ್ಮನ ಮೂರ್ತಿಗಳು ಹಾಗೂ ರಾಜ್ಯದಲ್ಲಿನ ಮುಖ್ಯ ಸ್ಥಳಗಳಿಗೆ ಹೆಸರು ನಾಮಕರಣ ಜೊತೆಗೆ ಮೂರ್ತಿ ಪ್ರತಿಷ್ಠಾಪಣೆ ಆಗಲೇಬೇಕೆಂದು ಆಗ್ರಹಸಿದರು.
ಇದೇ ಸಂದರ್ಭದಲ್ಲಿ ಕಿತ್ತೂರು ಕರ್ನಾಟಕ ಸೇನೆ ಯುವಘಟಕದ ರಾಜ್ಯಾಧ್ಯಕ್ಷ ಮಹೇಶ ಶೀಗಿಹಳ್ಳಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ಬೆಳಗಾವಿ ಗಡಿಭಾಗದಲ್ಲಿ ನಾಡದ್ರೋಹಿಗಳಿಂದ ಕನ್ನಡಿಗರ ಸ್ವಾಭಿಮಾನಕ್ಕೆ ಪದೇ ಪದೇ ಧಕ್ಕೆಯಾಗುತ್ತಿದ್ದು, ಕನ್ನಡಿಗರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿರುವ ಕೆಲವು ನಾಡದ್ರೋಹಿ ಪುಂಡರಲ್ಲಿ ಮೊದಲನೆಯವನಾದ ಶುಭಂ ಶೆಳಕೆ ಮತ್ತು ಸಂಗಡಿಗರನ್ನು ಬೆಳಗಾವಿಯಿಂದ ಶಾಶ್ವತವಾಗಿ ಗಡಿಪಾರು ಮಾಡಬೇಕು,
ಬೆಳಗಾವಿಯಲ್ಲಿ ನಗರದ ಹಾಗೂ ಗಡಿ ಭಣಾಗದಲ್ಲಿರುವ ಮುಗ್ಧ ಕನ್ನಡಿಗರು ಮರಾಠಿಗರ ನೆಮ್ಮದಿ ಕಾಪಾಡಿ ಬೆಳಗಾವಿಯಲ್ಲಿ ಶಾಂತತೆಯ ವಾತಾವರಣ ನಿರ್ಮಾಣ ಮಾಬೇಕು, ಕನ್ನಡ ನೆಲ, ಜಲ, ಭಾಷೆಗಾಗಿ ಹೋರಾಟ ಮಾಡುವ ಕನ್ನಡ ಹೋರಾಟಗಾರರಿಗೆ ಯಾವುದೇ ನಿರ್ಬಂಧ ಹೇರುವ ಪ್ರಯತ್ನ ಹಾಗೂ ಸುಳ್ಳು ಹೋರಾಟಗಾರರನ್ನು ಅಗೌರವ ತೋರುವ ಪ್ರಯತ್ನಗಳು ನಡೆಯಬಾರದು. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡರು.
ಈ ವೇಳೆ ಕಿತ್ತರೂರು ಕರ್ನಾಟಕ ಯುವ ಘಟಕ ರಾಜ್ಯಾಧ್ಯಕ್ಷರಾದ ಮಹೇಶ ಶೀಗೆ ಹಳ್ಳಿ, ರಾಜ್ಯ ಯುವ ಘಟಕ ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಕಾರ್ಯರ್ತರು ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!