ಬೆಳಗಾವಿ-17 : ಇದೇ ಜನವರಿ 18 ರಂದು ಬೆಳಗಾವಿಯ ಕಪಿಲೇಶ್ವರ ಭಾಗದಲ್ಲಿ ನಡೆಯಲಿರುವ ವಿರಾಟ್ ಹಿಂದೂ ಸಮ್ಮೇಳನದ ಅಂಗವಾಗಿ ಬೆಳಗಾವಿ ನಗರದಲ್ಲಿ ಬೃಹತ್ ಬೈಕ್ ರ್ಯಾಲಿಯನ್ನು ಆಯೋಜಿಸಲಾಯಿತು.
ಶುಕ್ರವಾರ ನಗರದ ಟಿಳಕ್ ಚೌಕನಿಂದ ರ್ಯಾಲಿ ಆರಂಭಗೊಂಡು, ಕೋನವಾಳ ಗಲ್ಲಿ, ಇಸ್ಲಾಮಿಯಾ ಶಾಲೆ ಪೆಟ್ರೋಲ್ ಪಂಪ್, ಚರ್ಚ್ ಸ್ಟ್ರೀಟ್, ಹೈಯರ್ ಸ್ಟ್ರೀಟ್ ಮತ್ತು ಗ್ಲೋಬ್ ಟಾಕೀಸ್ ಮೂಲಕ ಸಾಗಿತು.
ಬಳಿಕ ಅಂಬಾಭುವನ, ಛತ್ರಪತಿ ಶಿವಾಜಿ ರೋಡ್, ಗಿಜರೆ ಹಾಸ್ಪಿಟಲ್ ಹಾಗೂ ಶೇರಿ ಗಲ್ಲಿಯನ್ನು ದಾಟಿ ಮಠ ಗಲ್ಲಿ, ಕಲ್ಮಠ ರೋಡ್ ಮತ್ತು ಕುಲಕರ್ಣಿ ಗಲ್ಲಿಯನ್ನು ಪ್ರವೇಶಿಸಿತು. ಮುಂದುವರಿದು ಅನಂತಶಯನ ಗಲ್ಲಿ, ಬಸವಣ ಗಲ್ಲಿ, ಮಾರುತಿ ಮಂದಿರ ಹಾಗೂ ಮಾರುತಿ ಗಲ್ಲಿಯ ಮೂಲಕ ಸಾಗಿ ಕಿರ್ಲೋಸ್ಕರ ರೋಡ್ ತಲುಪಿತು.
ನಗರದ ಬೋಗಾರ್ವೆಸ್ ವೃತ್ತದಲ್ಲಿರುವ ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜ್ , ಛತ್ರಪತಿ ಸಂಭಾಜಿ ಮಹಾರಾಜರ ಮೂರ್ತಿಗೆ ಪೂಜೆ ಸಲ್ಲಿಸಿ ರ್ಯಾಲಿಯನ್ನು ಸಮಾರೋಪಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಾವಿರಾರು ಹಿಂದೂಪರ ಕಾರ್ಯಕರ್ತರು ವಿರಾಟ್ ಹಿಂದೂ ಸಮ್ಮೇಳನದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಕರೆ ನೀಡಿದರು.
ಈ ವೇಳೆ ಸಾವಿರಾರು ಹಿಂದೂಪರ ಕಾರ್ಯಕರ್ತರು ಸೇರಿದಂತೆ ಬಿಜೆಪಿಯ ಪ್ರಮುಖಕರು ಬೈಕ ಹಾಜರಿದ್ದರು.
