29/01/2026
IMG-20260117-WA0000

ಪಳೆಯುಳಿಕೆ ಇಂಧನಕ್ಕೆ ಪರ್ಯಾಯವಾಗಿ ಹಸಿರು ಇಂಧನ ಬಳಕೆ ಅನಿವಾರ್ಯ ವೆಂಬ ವಾಸ್ತವದ ಕುರಿತು ಸಮಾಜದಲ್ಲಿ ಅರಿವು ಮೂಡಿಸುವ ಮೂಲ ಉದ್ದೇಶದಿಂದ ಆಯೋಜಿಸಲಾಗಿರುವ ಈ ಅಭಿಯಾನವನ್ನು ಜಂಟಿಯಾಗಿ ಹುಟ್ಟು ಹಾಕಿರುವುದು ರಾಮದುರ್ಗದ ದಾಕ್ಷಾಯಿಣಿ ಭಾ ಜಾಬಶೆಟ್ಟಿ ಫೌಂಡೇಶನ್ ಹಾಗೂ ಗ್ರೀನಲ್ಯಾಂಡ ಬಯೋಟೆಕ್.

ಪುನರ್ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಇತ್ತೀಚಿನ ಸಂಶೋಧನೆಗಳಿಂದಾಗಿ ಹೆಚ್ಚುತ್ತಿರುವ ಕಾರ್ಯಕ್ಷಮತೆಯಿಂದ ಕಡಿಮೆ ವೆಚ್ಚದಲ್ಲಿ ಜನ ಸಾಮಾನ್ಯರೂ ಸಹ ಹಸಿರು ವಿದ್ಯುತ್ ಉತ್ಪಾದಿಸುವ
ಸುಲಭ ತಂತ್ರಜ್ಞಾನಗಳನ್ನು ಪ್ರಚುರಪಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಪ್ರಧಾನ ಮಂತ್ರಿ ಸೌರ ಘರ ಮುಫ್ತ ಬಿಜಲೀ ಯೋಜನೆಯಡಿಯಲ್ಲಿ ಮನೆ ಮೇಲ್ಛಾವಣಿ ಮೇಲೆ ಸೌರ ವಿದ್ಯುತ್ ಉತ್ಪಾದನಾ ಘಟಕ ಅಳವಡಿಸುವದರಿಂದ ಸರಕಾರದಿಂದ ದೊರೆಯುವ ಸಬ್ಸಿಡಿ ಸೌಲಭ್ಯಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಹೆಚ್ಚುವರಿ ಉತ್ಪಾದಿತ ವಿದ್ಯುಚ್ಛಕ್ತಿಯನ್ನು ಹೆಸ್ಕಾಮ್ ಗೆ ರವಾನಿಸಿ ಹಣ ಗಳಿಸಬಹುದಾದ ಅವಕಾಶಗಳ ಕುರಿತು ಜಾಗೃತಿ ಉಂಟು ಮಾಡಲಾಗುವುದು.

ಕೃಷಿ ಕ್ಷೇತ್ರದಲ್ಲಿ ಜಲ ಸ್ವಾತಂತ್ಯ ಸಂಭ್ರಮಕ್ಕಾಗಿ ಸೋಲಾರ ಪಂಪಸೆಟ್ ಗಳನ್ನು ಅಳವಡಿಸಿ ಸುಸ್ಥಿರ ನೀರಾವರಿ ಸೌಲಭ್ಯದಿಂದ ಅಧಿಕ ಉತ್ಪಾದನೆ ಪಡೆಯಲು ಮತ್ತು ವಿದ್ಯುತ್ ಸ್ವಾವಲಂಬಿಯಾಗಲು ರೈತರನ್ನು ಪ್ರೇರೇಪಿಸುವ ಗುರಿ ಹೊಂದಲಾಗಿದೆ.

ವಿದ್ಯುಚ್ಛಕ್ತಿ ಯನ್ನು ಹಿತಮಿತವಾಗಿ ಬಳಸಲು ಪ್ರೇರೇಪಿಸಿ ವಿದ್ಯುಚ್ಛಕ್ತಿ ಉಳಿತಾಯ ಮಾಡುವಂತೆ ಸ್ವಯಂಪ್ರೇರಣೆಗೊಳ್ಳುವಂತೆ ಸಮುದಾಯವನ್ನು ಸಿದ್ದಗೊಳಿಸುದು.

ವಿದ್ಯುತ್ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವದು

ಪ್ರಸ್ತುತ ಪ್ರಥಮ ಹಂತದಲ್ಲಿ ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಲ್ಲಿನ ಪ್ರಮುಖ ವೃತ್ತಗಳಲ್ಲಿ, ವಿವಿಧ ವಿಶ್ವ ವಿದ್ಯಾಲಯಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳ ಆವರಣಗಳಲ್ಲಿ ಸೌರ ವಿದ್ಯುಚ್ಛಕ್ತಿ ಉತ್ಪಾದನಾ ತಂತ್ರಜ್ಞಾನಗಳ ಕಾರ್ಯಾಗಾರ ಹಾಗೂ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗುವುದು.

ಹುಬ್ಬಳ್ಳಿಯ ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರಕಾಶ ತೆವರಿಯವರು ಶನಿವಾರ ದಿನಾಂಕ 17/1/2026 ರಂದು ಬೆಳಿಗ್ಗೆ ಹತ್ತು ಘಂಟೆಗೆ ಹಸಿರು ನಿಶಾನೆ ತೋರಿಸಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಧಾರವಾಡದ ರೋಟರಿ ಕ್ಲಬ್ ಹಾಗೂ ಪರಿಸರ ಬಳಗದ ಸಹಯೋಗದಲ್ಲಿ ವಿವಿಧ ಸ್ಥಳಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗುವುದು.

ಹೆಚ್ಚಿನ ವಿವರಗಳಿಗೆ ಭಾಲಚಂದ್ರ ಜಾಬಶೆಟ್ಟಿ ಇವರನ್ನು 9741888365 ರಲ್ಲಿ ಸಂಪರ್ಕಿಸಿರಿ

Leave a Reply

Your email address will not be published. Required fields are marked *

error: Content is protected !!