ಬೆಳಗಾವಿ-15 : ಯಲ್ಲಾಪುರದಲ್ಲಿ ದಲಿತ ಮಹಿಳೆಯಾದ ರಂಜಿತಾ ಬನ್ಸೋಡೆ ಹತ್ಯೆಯನ್ನು ಖಂಡಿಸಿ ಬೆಳಗಾವಿ ನಗರದಲ್ಲಿವ, ಡಾ ಬಾಬಾಸಾಹೇಬ ಅಂಬೇಡ್ಕರ ಪ್ರತಿಮೆಯ ಎದರು ಧರಣಿ ಪ್ರತಿಭಟನೆಯ ನಡೆಸಿ ಶ್ರದ್ಧಾಂಜಲಿ ಅರ್ಪಿಸಿದ ಜೈ ಭೀಮ್ ಘರ್ಜನ ಯುವಶಕ್ತಿ ಮಂಡಳ ಮತ್ತು ಶ್ರೀಮಾತಾ ರಮಾಬಾಯಿ ಮಹಿಳಾ ಮಂಡಳ ಸಂಘಟನೆಯ ಕಾರ್ಯಕರ್ತರು.
ಬುಧವಾರ ನಗರದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಉದ್ಯಾನ ವನದಲ್ಲಿ ಶ್ರದ್ದಾಕಜಂಲಿ ಸಲ್ಲಿಸಿ ಧರಣಿ ಪ್ರತಿಭಟನೆಯನ್ನು ಆರ್ ಎಸ್ ಎಸ್ ಮುಖಂಡ ಕೃಷ್ಣ ಭಟ್ ನೇತ್ರತ್ವದಲ್ಲಿ ನಡೆಸಲಾಯಿತು.
ರಂಜಿತಾ ಬನ್ಸೋಡೆ ಅವರಿಗೆ ಯಾದ ಅನ್ಯಾಯ ಇನ್ಮೇಲೆ ಯಾವುದೇ ದಲಿತ ಮಹಿಳೆಗೆ ಯಾಗಲಿ ಹಾಗೂ ಯಾವುದೇ ಮಹಿಳೆಯ ಮೇಲೆ ಈ ರೀತಿ ಅನ್ಯಾಯ ಯಾಗುವುದಕ್ಕೆ ಯಾವುದೇ ಕಾರಣಕ್ಕೂ ಬೀಡುವುದಿಲ್ಲ, ಅತ್ಯಾಚಾರ , ಲವ್ ಜಿಹಾದಿಗೆ ಬಲಿಯಾಗದಂತೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ನಮ್ಮ ದಲಿತ ಸಮುದಾಯ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ರಾಜ್ಯ ಸರಕಾರದ ಮೂಲಕ ಅತ್ಯಾಚಾರಿಗಳು ಎಚ್ಚರಿಕೆಯನ್ನು ನೀಡಿದರು.
ಬಳಿಕ ಅಂಬೇಡ್ಕರ್ ಉದ್ಯಾನ ವನದಿಂದ ಜಿಲ್ಲಾಧಿಕಾರಿಗಳ ಅಛೇರಿ ವರೆಗೆ ಪ್ರತಿಭಟನಾ ರ್ಯಾಲಿ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳು ಪ್ರತಿಭಟನಾಕಾರರು ಯಲ್ಲಾಪುರದಲ್ಲಿ ದಲಿತ ಮಹಿಳೆಯ ಹತ್ಯೆಯ ಬಗ್ಗೆ ತಿಳಿಸಿ ಅಸಮಾಧಾನ ಹೋರೆ ಹಾಕಿ ಆರೋಪಿಗಳ ವಿರುದ್ದ ಕಾನೂನಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮತ್ತು ರಾಷ್ಟ್ರ ಪತಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಆರ್ ಎಸ್ ಎಸ್ ಮುಖಂಡ ಕೃಷ್ಣ ಭಟ್, ಶಾಂತಾ ತಾಯಿ ಭಂಡಾರಿ, ರಂಜನಾ ಕಾಂಬಳೆ, ಮಾಜಿ ಮಹಾಪೌರ ಸವಿತಾ ಕಾಂಬ್ಳೆ, ಮುನಿಸ್ವಾಮಿ ಭಂಡಾರಿ, ದೀಪಕ ವಾಘೇಲಾ, ವಿಜಯ ನೀರಗಟ್ಟಿ, ಮಂಜುನಾಥ ಉಪ್ಪಾರ್, ಅಶೋಕ ಕಾಂಬಳೆ ಸಂಗಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.
