ಬೆಳಗಾವಿ-10 : ಮಹಾರಾಷ್ಟ್ರದ ಮಾಜಿ ಸಿಎಂ ಹಾಗೂ ಪ್ರಸ್ತುತ ಉಪ ಮುಖ್ಯ ಮಂತ್ರಿ ಏಕನಾಥ ಸಿಂಧೆ ನೇತೃತ್ವದ ಶಿವಸೇನೆಯನ್ನು, ಶಿವಸೇನೆ ಕರ್ನಾಟಕ ಎಂಬ ಹೆಸರಿನಿಂದ ರಾಜ್ಯದ 11 ಜಿಲ್ಲೆಗಳಲ್ಲಿ ಅಸ್ತಿತ್ವಕ್ಕೆ ತಂದಿದ್ದು, 11 ಜಿಲ್ಲೆಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಈ ಪಕ್ಷ ಕರ್ನಾಟಕ ಮತ್ತು ಕನ್ನಡ ಪರವಾಗಿ ಕೆಲಸ ಮಾಡುವ ಪಕ್ಷ ಅಗಿದ್ದು, ಕನ್ನಡ, ಕರ್ನಾಟಕ ವಿರೋದಿಸುವ ಪಕ್ಷ ಉಧವ ಥಾಕ್ರೆ ನೇತೃತ್ವದ ಶಿವಸೇನೆ ಆಗಿದ್ದು, ನಾವು ಗಡಿ ವಿಚಾರದಲ್ಲಿ ಸುಪ್ರೀಮ್ ಕೋರ್ಟ್ ತೀರ್ಮಾನಕ್ಕೆ ಬದ್ದವಾದ ಪಕ್ಷ ಎಂದು ಶಿವಸೇನೆ ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಶುಕ್ರವಾರ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಕೋಗಿಲ ಕ್ರಾಸ್ ಬಾಳಿ ಅಕ್ರಮ ಬಾಂಗ್ಲಾ, ರೋಹಿಂಗ್ಯಾ ಮುಸ್ಲಿಂ ಜನಾಂಗ ಅಕ್ರಮವಾಗಿ ವಾಸ ಮಾಡುತ್ತಿದ್ದು ಕೆರಳದ ಸಿ ಎಮ್ ಪಿನರಾಯಿ ಹಾಗೂ ಎ ಐ ಸಿ ಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರ ಆಜ್ಞೆಯ ಮೇರೆಗೆ ಜಾಗೆ ನೀಡಲು ಸರಕಾರ ನಿರ್ಧಾರ ಮಾಡಿದ ಹಾಗಿದೆ. ಬಾಂಗ್ಲಾ, ರೋಹಿಂಗ್ಯಾ ಮುಸ್ಲಿಂರಿಂದ ಬೆಂಗಳೂರು ಬೆಳೆದಿಲ್ಲ ಬದಲಾಗಿ ಉತ್ತರ ಕರ್ನಾಟಕ ಅನೇಕ ಕಾರ್ಮಿಕರು ಬೆಂಗಳೂರಿಗೆ ಹೋಗಿ ಅಭಿವೃದ್ಧಿಗೆ ಶ್ರಮಿಸಿ ನೆಲೆ ಇಲ್ಲದೆ ಪುಟಪಾತ ಮೇಲೆ ಮಲಗುವ ಪರಿಸ್ಥಿತಿ ಇದೆ, ಇವರಿಗೆ ಮೊದಲು ವಸತಿ ಕಲ್ಪಿಸುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.
ಶಿವಸೇನೆ ಕರ್ನಾಟಕ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ಮಾತನಾಡಿ ಕಾಶ್ಮೀರ ಹಿಂದೂಗಳ ಹಕ್ಕಿಗಾಗಿ ಪ್ರತಿವರ್ಷ ಪಕ್ಷ ಪಾಲ್ಗೊಳ್ಳುತ್ತಿದ್ದು ಈ ವರ್ಷ ಜನೆವರಿ 16 ರಿಂದ 19 ರವರೆಗೆ ಜಮ್ಮುವಿನಲ್ಲಿ ನಡೆಯುವ ಅಧಿವೇಶದಲ್ಲಿ ಪಕ್ಷ ಭಾಗಿ ಆಗಲಿದೆ ಎಂದರು.
ರಾಜ್ಯ ವಕ್ತಾರ ಎಸ್ ಭಾಸ್ಕರನ ಮಾತನಾಡಿ ಪ್ರಸಿದ್ಧ ದೇವಸ್ಥಾನ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಲಕ್ಷಾಂತರ ಜನ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಮತ್ತು ಅನೇಕ ರಾಜ್ಯಗಳಿಂದ ಬಂದರು ಅಲ್ಲಿನ ಮೂಲಭೂತ ಸೌಕರ್ಯ ವ್ಯವಸ್ಥೆ ಇಲ್ಲಾ, ಕೇಂದ್ರ 90 ಕೋಟಿ, 8 ಲಕ್ಷ, ರಾಜ್ಯ ಸರ್ಕಾರದ 100 ಕೋಟಿ ಅನುಧಾನ ನೀಡಿದ್ದರು ಕೂಡಾ ಇನ್ನೂ ಕಾಮಗಾರಿ ಪ್ರಾರಂಭ ಆಗಿಲ್ಲ ಇಲ್ಲಿಯೂ ಕೂಡಾ ಭ್ರಷ್ಟಾಚಾರ ವಾಸನೆ ಕೇಳಿಬರ್ತಾ ಇದೆ ಎಂದರು. ಮುಂದಿನ 45 ದಿನಗಳಲ್ಲಿ ಜಿಲ್ಲಾ ಸಹಕಾರಿ ಸಂಘದ ಭ್ರಷ್ಟಾಚಾರದ ಕುರಿತು ಹೋರಾಟ ಮಾಡಲಾಗುವದು ಎಂದರು.
ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅಮರನಾಥ, ಬೆಳಗಾವಿ ಜಿಲ್ಲಾ ನೂತನ ಅಧ್ಯಕ್ಷ ಶಿವಾನಂದ ಹಿರೇಮಠ ಸೇರಿದಂತೆ ಶಿವಸೇನೆಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
