ಬೆಳಗಾವಿ-07 : 2026 ರ ಹೊಸ ವರ್ಷದ ಮೊದಲ ಅಂಗಾರಿಕಾ ಸಂಕಷ್ಟ ಚತುರ್ಥಿಯಲ್ಲಿ ಬೆಳಗಾವಿಯ ಜನತೆಯು ಅತ್ಯಂತ ಭಕ್ತಿಯಿಂದ ವಿಷೇಶ ಪೂಜೆ ಮಾಡುವುದರ ಮೂಲಕ ಅಂಗಾರಿಕ ಸಂಕಷ್ಟಿ ಚತುರ್ಥಿ ನಡೆಯಿತು
ಹೊಸ ವರ್ಷದ ಮೊದಲ ಅಂಗಾರಿಕಾ ಸಂಕಷ್ಟ ಚತುರ್ಥಿಯ ಅಂಗವಾಗಿ ಮಂಗಳವಾರ ಬೆಳಗಾವಿ ನಗರದ ಪ್ರಸಿದ್ಧ ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಶ್ರೀಗಣೇಶ ಮಂದಿರದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮುಂಜಾನೆಯಿಂದಲೇ ಗಣೇಶನಿಗೆ ವಿಶೇಷ ಅಭಿಷೇಕ, ಪಂಚಾಮೃತ ಸೇವೆ ಹಾಗೂ ಆಕರ್ಷಕ ಪುಷ್ಪಾಲಂಕಾರದೊಂದಿಗೆ ಪೂಜೆ ಸಲ್ಲಿಸಲಾಯಿತು. ಮಂಗಳವಾರ ದಿನವೇ ಸಂಕಷ್ಟಿ ಬಂದಿರುವುದರಿಂದ ಇದು ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿದ್ದು ನಗರದ ಮೂಲೆ ಮೂಲೆಗಳಿಂದ ಆಗಮಿಸಿದ ಭಕ್ತರು, ವಿಘ್ನನಿವಾರಕನ ದರ್ಶನ ಪಡೆದುಕೊಂಡರು.
ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಭಕ್ತರ ದಟ್ಟಣೆ ಕಂಡುಬಂದಿದ್ದು, ಗಣೇಶನ ದರ್ಶನಕ್ಕಾಗಿ ಉದ್ದನೆಯ ಸರತಿ ಸಾಲು ನಿರ್ಮಾಣವಾಗಿತ್ತು. ಭಕ್ತರಿಗಾಗಿ ದೇವಸ್ಥಾನ ಸಮಿತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಪ್ರಸಾದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಈ ವೇಳೆ ಗಣೇಶ ದೇವಸ್ಥಾನದಲ್ಲಿ ಸಾವಿರಾರು ಭಕ್ತಿರು ಆಗಮಿಸಿ ಗಣೇಶನ ಭಕ್ತಿ ಪೂರ್ವಕವಾಗಿ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡರು.
