29/01/2026
IMG-20260106-WA0003

ಕೌಜಲಗಿ-06 : ಸಾಮಾನ್ಯ ರೈತ ಕುಟುಂಬದಿಂದ ಹುಟ್ಟಿ ಬೆಳೆದು ಬಂದ ಸಿದ್ದರಾಮಯ್ಯನವರು ತಮ್ಮ ಕುಟುಂಬ ಮತ್ತು ತಮ್ಮ ಹುಟ್ಟೂರನ್ನು ಮುನ್ನಡೆಸಿಕೊಂಡು ಬಂದ ಅನುಭವ ಇಂದು ಸಮಸ್ತ ಕರ್ನಾಟಕವನ್ನೇ ಮುನ್ನಡೆಸಿಕೊಂಡು ನಡೆಯುವಷ್ಟು ಸುಧೀರ್ಘ ಪಯಣ ನಡೆಸಿದ್ದಾರೆ. ಅವರಲ್ಲಿ ಅಗಾಧ ಶಕ್ತಿ, ತಾಳ್ಮೆ, ಸಂಘಟನಾ ಚಾತುರ್ಯ, ಮುಂದಾಲೋಚನೆಯ ಕ್ರಮಗಳು ಸಿದ್ದರಾಮಯ್ಯ ಅವರನ್ನು ರಾಜ್ಯ ಕಂಡ ಅತ್ಯಂತ ಸುದೀರ್ಘ ಸೇವೆ ಸಲ್ಲಿಸುವ ಮುಖ್ಯಮಂತ್ರಿಯಾಗಿ ಬೆಳೆಯಲೆಂದು ಕೌಜಲಗಿ ವಿಠ್ಠಲ ಬೀರದೇವರ ದೇವರ್ಷಿ ವಿಠಲ ಮಹಾಸ್ವಾಮೀಜಿಯವರು ಅಭಿನಂದನ ಪರ ಆಶೀರ್ವಚನ ನೀಡಿದರು.

IMG 20260106 WA0002 - IMG 20260106 WA0002

ಕೌಜಲಗಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾರದಂದು ಅತ್ಯಂತ ಸರಳ ಸಂಭ್ರಮದಿಂದ ನಡೆದ ಅತಿ ದೀರ್ಘಾವಧಿ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿರುವ ಸಿದ್ದರಾಮಯ್ಯನವರ ಅಭಿನಂದನಾಪರ ಕಾರ್ಯಕ್ರಮದಲ್ಲಿ ವಿಠ್ಠಲ ದೇವರ್ಷಿಗಳು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಪಟ್ಟಣದ ಗಣ್ಯಮಾನ್ಯ ಪ್ರಮುಖರು ಮುಖ್ಯಮಂತ್ರಿಗಳು ದೇವರಾಜ್ ಅರಸರ ದಾಖಲೆಯನ್ನು ಸರಿಗಟ್ಟಿ ಮುನ್ನಡೆದಿದ್ದಾರೆ. ಇನ್ನು ಹೆಚ್ಚಿನ ಸೇವೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಈ ರಾಜ್ಯಕ್ಕೆ ಒದಗಿ ಬರಬೇಕೆಂದು ಅಭಿನಂದನೆಗಳನ್ನು ಸಮರ್ಪಿಸಿದರು.
ವೇದಿಕೆಯಲ್ಲಿ ರಾಮಣ್ಣ ಈಟಿ, ಮಲ್ಲಪ್ಪ ದಳವಾಯಿ, ಎ ಎಂ ಮೋಡಿ, ಎಸ್ ಬಿ ಹಳ್ಳೂರ, ನೀಲಪ್ಪ ಕೇವಟಿ, ಮಂಜುನಾಥ್ ಸಣ್ಣಕ್ಕಿ, ಶಂಕರ ಜೊತೆನ್ನವರ, ಶಂಕರ ದಳವಾಯಿ, ಬಿ ಎಲ್ ಹುಂಡರದ, ಬಸವರಾಜ ಜೋಗಿ, ಹಾಸಿನಸಾಬ ನಗಾರ್ಚಿ, ಲಾಡಸಾಬ ಮುಲ್ತಾನಿ, ಶಿವಪ್ಪ ಭಜಂತ್ರಿ, ಮಾಲತೇಶ ಸನ್ನಕ್ಕಿ ಅಣ್ಣಪ್ಪ ನಾಡಗೌಡ ಮುಂತಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!