29/01/2026
IMG-20251230-WA0028

ಹೊಸ ವರ್ಷಾಚರಣೆ ಭರಮಾಡಿಕೊಳ್ಳುವುದಕ್ಕೆ ಸಿದ್ದಗೊಂಡ ಕುಂದಾನಗರಿ ಜನತೆ

ಬೆಳಗಾವಿ-30 : ನಾಳೆ ಡಿಸೆಂಬರ್ 31 ರಂದು, ವಿಶೇಷವಾಗಿ ಗೋವಾ ಮತ್ತು ಬೆಳಗಾವಿಯಂತಹ ಸ್ಥಳಗಳಲ್ಲಿ, ಹಳೆಯ ವರ್ಷವನ್ನು ಪ್ರತಿನಿಧಿಸುವ ಓಲ್ಡ್ ಮ್ಯಾನ್ (ಹಳಸು ಮನುಷ್ಯ) ದೊಡ್ಡ ದಿನ್ನಿಗಳನ್ನು ತಯಾರಿಸಿ, ಮಧ್ಯರಾತ್ರಿಯಲ್ಲಿ ಬೀದಿಗಳಲ್ಲಿ ಪ್ರದರ್ಶನಕ್ಕಿಟ್ಟು, ಹಣ ಸಂಗ್ರಹಿಸಲಾಗುತ್ತದೆ. ಮಧ್ಯರಾತ್ರಿ (12 ಗಂಟೆಗೆ) ಈ ದಿನ್ನಿಗಳನ್ನು ಬೆಂಕಿ ಹಚ್ಚಿ ಸುಡಲಾಗುತ್ತದೆ, ಇದು ಹೊಸ ವರ್ಷದ ಶುಭಾರಂಭವನ್ನು ಸೂಚಿಸುವ ಸಂಪ್ರದಾಯವಾಗಿದೆ.
ಈ ಸಂಪ್ರದಾಯವು ಬೆಳಗಾವಿಯಲ್ಲಿ ಇದು ಗೋವಾ ಮತ್ತು ಮುಂಬೈ ಸಂಸ್ಕೃತಿಯ ಪ್ರಭಾವದಿಂದಾಗಿ ಜನಪ್ರಿಯವಾಗಿ ಬೆಳೆದು ಇದೀಗ ದೇಶವ್ಯಾಪ್ತಿ ಈ ಓಲ್ಡ್ ಮ್ಯಾನ್ ಆಚರಣೆ ಮಾಡಲಾಗುತ್ತದೆ.
ಹಿಂದಿನ ವರ್ಷದ ಕಹಿ ನೆನಪುಗಳನ್ನು “ಓಲ್ಡ್ ಮ್ಯಾನ್” ರೂಪದಲ್ಲಿ ಸುಟ್ಟು ಹಾಕಿ ಇಲ್ಲಿನ ಜನರು ವಿಶಿಷ್ಟ ರೀತಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಿ, ಸಂಭ್ರಮಿಸುತ್ತಾರೆ. ನಗರದ ಕ್ಯಾಂಪ್ ಪ್ರದೇಶದಲ್ಲಿ “ಓಲ್ಡ್ ಮ್ಯಾನ್” ಪ್ರತಿಕೃತಿಗಳನ್ನು ತಯಾರಿಸುವಲ್ಲಿ ಕಲಾವಿದರು ನಿರತರಾಗಿದ್ದು, ಅವುಗಳಿಗೆ ಬಣ್ಣ ಬಳಿಯುವುದು ಸೇರಿ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.
ಹಳೆ ವರ್ಷದ ಕಹಿ ಘಟನೆಗಳು, ಕಾಮ-ಕ್ರೋಧ-ಮದ-ಮತ್ಸರಗಳನ್ನು ಓಲ್ಡ್ ಮ್ಯಾನ್ ರೂಪದಲ್ಲಿ ಸುಟ್ಟು ಹಾಕುವ ಯುವಕರು, ಮಕ್ಕಳು ಹೊಸ ವರ್ಷವನ್ನು ಸ್ವಾಗತಿಸುವುದಕ್ಕೆ ಸಿದ್ದರಾಗಿದ್ದಾರೆ.
ಡಿಸೆಂಬರ್ 31 ರಂದು ಬೆಳಗಾವಿಯಲ್ಲಿ ದೊಡ್ಡ ಮಟ್ಟದ ಹೋಟೆಲ್-ರೆಸಾರ್ಟ್ಗಳಲ್ಲಿ ಮಧ್ಯರಾತ್ರಿ ಹೊಸ ವರ್ಷಾಚರಣೆಗೆ ಯುವಕರ, ಯುವತಿಯರು ಸೇರಿ ವರ್ಷಾಚರನೆಗೆ ಸಿದ್ದತೆ ಮಾಡಿಕೊಳುತ್ತಿದ್ದಾರೆ. ಈಗಾಗಲೇ ಹೋಟೆಲ್-ರೆಸಾರ್ಟ್ಗಳಲ್ಲಿ ಬುಕ್ಕಿಂಗ್ ಪ್ರಕ್ರಿಯೆ ನಡೆದಿದೆ.
ಬೆಳಗಾವಿ ನಗರಾಧ್ಯಂತ ಅದ್ದೂರಿಯಾಗಿ ಓಲ್ಡ್ ಮ್ಯಾನ್ ಆಚರಣೆಯ ಬಂದೂಬಸ್ತ್ ಗೆ ಪೊಲೀಸ್ ಇಲಾಖೆಯು ಎಲ್ಲ ರೀತಿಯಲ್ಲಿ ಸಿದ್ದತೆಗಳನ್ನು ಮಾಡಿಕೊಂಡು. ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ನೋಡಿಕೊಳ್ಳಲಿದೆ. ಹಾಗೂ ವರ್ಷಾಚರಣೆಗೆ ಆಗಮಿಸಲಿರುವ ನಗರದ ಜನತೆಗೆ, ಪಾರ್ಕಿಂಗ್ ವ್ಯವಸ್ಥೆ ಹಾಗೂ ಎಂಜಾಯ್ಮೆಂಟ್ ಸ್ಥಳದಲ್ಲಿ ಸಿಸಿಟಿವಿ ಅಳವಡಿಸಿಕೊಂಡು, ಅಶಾಂತಿ ಮೂಡಿಸುವವರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಪೊಲೀಸ್ ಇಲಾಖೆಯು ಎಲ್ಲ ರೀತಿಯ ಈಗಾಗಲೇ ಮಾಡಿಕೊಂಡಿದೆ.
ಒಟ್ಟಾರೆಯಾಗಿ ಕುಂದಾನಗರಿಯಲ್ಲಿ ಅದ್ಧೂರಿಯಾಗಿ ಓಲ್ಡ್ ಮ್ಯಾನ್ ಆಚರಣೆಗೆ ಸರ್ವ ರೀತಿಯಲ್ಲೂ ಸನ್ನದ್ಧಗೊಂಡಿದೆ.

 

error: Content is protected !!