29/01/2026
IMG-20251229-WA0007

ಬೆಳಗಾವಿ-29 : ಜಿಲ್ಲಾದ್ಯಂತ ಅಕ್ರಮ ಮಧ್ಯ ಮಾರಾಟಕ್ಕೆ ಸಂಬಂಧಿಸಿದಂತೆ 9 ತಿಂಗಳಲ್ಲಿ ಒಟ್ಟು 1294 ಪ್ರಕರಣಗಳನ್ನು ದಾಖಲಿಸಿಕೊಂಡ ಬೆಳಗಾವಿ ಅಬಕಾರಿ ಇಲಾಖೆಯೂ 2 ಕೋಟಿ 98 ಲಕ್ಷದ ಮದ್ಯ ವಶಕ್ಕೆ ಪಡೆದುಕೊಳ್ಳಲಾಗಿದೆ.
ರಾಯಬಾಗದಲ್ಲಿ 5 ವರ್ಷದ ಮಗುವಿಗೆ ಮದ್ಯ ಕುಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಜಂಟಿ ಆಯುಕ್ತ ಫಕೀರಪ್ಪ ಚಲವಾದಿ ಅವರು ತಿಳಿಸಿದರು.
ಸೋಮವಾರ  ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು, ಅಬಕಾರಿ ಇಲಾಖೆ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗದಲ್ಲಿ ಕಳೆದ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ತೀವು ಕಾರ್ಯಾಚರಣೆ ನಡೆಸಿ ಒಟ್ಟು 1294 ಪ್ರಕರಣಗಳನ್ನ ದಾಖಲಿಸಿಕೊಳ್ಳಲಾಗಿದೆ. ಇದರಲ್ಲಿ 2 ಕೋಟಿ 28 ಲಕ್ಷ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಗ್ರಾಮೀಣ ಭಾಗದ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ 783 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಕ್ರಮಕೈಗೊಳ್ಳಲಾಗುವುದು. ಬೀಟ್ ಪೊಲೀಸರು ಕಳ್ಳಭಟ್ಟಿಗೆ ತರಾರಿಸುಬ ಘಟಕಗಳ ಮೇಲೆ ನಿಗಾವಹಿಸುತ್ತಿದ್ದಾರೆ. ಢಾಭಾಗಳ ಮೇಲೂ ದಾಳಿ ನಡೆಸಲಾಗುತ್ತಿದೆ. ಅಬಕಾರಿ ಕೈಪಿಡಿಯಂತೆ ಪ್ರತಿ ತಿಂಗಳು ಗ್ರಾಮಸಭೆಗಳನ್ನು ನಡೆಸಲಾಗುತ್ತಿದೆ. ಚುನಾವಣೆ ವೇಳೆ ಆರಂಭಸಿದ ಸಹಾಯವಾಣಿಯನ್ನು ಸಕ್ರಿಯಗೊಳಿಸಲಾಗುವುದು ಎಂದರು.
ಅದರಂತೆಯೇ ನಮ್ಮಲ್ಲಿಯೂ ಸಿಬ್ಬಂದಿ ಕೊರತೆಯಿದೆ. ಶೇ.30 ರಷ್ಟು ಪೇದೆಗಳಿದ್ದಾರೆ. ಅವರುಗಳನ್ನೇ ಬಳಸಿ ಕಾರ್ಯನಿರ್ವಹಿಸಲಾಗುತ್ತಿದೆ. ಹೊಸ ವರ್ಷಾಚರಣೆಯ ವೇಳೆ ಇಂತಿಷ್ಟೇ ಮದ್ಯ ಮಾರಾಟ ಮಾಡಬೇಕೆಂದು ಲೈಸೆನ್ಸಧಾರಕ ಮಾರಾಟಗಾರರಿಗೆ ಯಾವುದೇ ಟಾರ್ಗೆಟ್ ನೀಡಿಲ್ಲ. ಇನ್ನು ಕುಡಿದು ವಾಹನ ಚಲಾವಣೆ ತಪ್ಪು ಎಂದರು. ಇನ್ನು ರಾಯಬಾಗನಲ್ಲಿ ಐದು ವರ್ಷದ ಮಗುವಿಗೆ ಮದ್ಯ ಸೇವನೆಗೆ ಬಾರ್ ನಲ್ಲಿ ಅವಕಾಶ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದರು.

ಈ ವೇಳೆ ಅಬಕಾರಿ ಇಲಾಖೆಯ ಅಧಿಕಾರಿ ಜಗದೀಶ್ ಎನ್.ಕೆ., ನಿಂಗನಗೌಡ ಪಾಟೀಲ್, ವಿಜಯ ಹಿರೇಮಠ ಸೇರಿದಂತೆ ಹಲವು ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!