– ಆಧ್ಯಾತ್ಮಿಕ ಮೌಲ್ಯ ಸಂದೇಶವಿರುವ ಕವನ ಸಂಕಲನಗಳು ಇಂದು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಣೆಯಾಗಿವೆ-ಸಂಜೀವ ಪತ್ತಾರ್ ಅವರ ಅಭಿಮತ
ಹೊಸಪೇಟೆ-24: ಕವಿ, ಸಾಹಿತಿ ದೀಪಕ ಬಿಳ್ಳೂರ ರಚಿಸಿದ ೧, ಬೆಳಕು ತೂರಿದೆ ೨, ಸತ್ಯ ಸಾಧನೆ ೩, ಸೌಂದರ್ಯದ ಗಣಿತಕಾರ ೪, ಸಪ್ತರಂಗಿನ ಹೊಂಬೆಳಕು ೫, ಜಗವೆಲ್ಲ ದಿಗಂಬರ ಕವನ ಸಂಕಲನಗಳ ಲೋಕಾರ್ಪಣೆ
ಕಾರ್ಯಕ್ರಮ ಮಂಗಳವಾರ ದಿ. 23 .12. 2025 ರಂದು ಹೊಸಪೇಟೆಯ ಎಸ್ , ಎಲ್, ಆರ್, ಮೆಟಾಲಿಕ್ಸ ಲಿಮಿಟೆಡ ಕಂಪನಿಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಜೀವ ಪತ್ತಾರ್ ಅವರು ೫ ಕವನ ಸಂಕಲನಗಳ ಲೋಕಾರ್ಪಣೆ ಮಾಡಿ ಮಾತನಾಡಿ ಸಾಹಿತಿ , ಕವಿ ದೀಪಕ ಬಿಳ್ಳೂರ ಇವರು ಬೆಳಗಾವಿ ಜಿಲ್ಲೆಯ ಅಥಣಿಯವರು, ಬಿ.ಇ, ಶಿಕ್ಷಣ ಪಡೆದ ಇವರು ವೃತ್ತಿಯಿಂದ ಮೆಕ್ಯಾನಿಕಲ್ ಇಂಜಿನಿಯರ್ ಆದರೂ ಪ್ರವರ್ತಿಯಿಂದ ಕವಿ ಸಾಹಿತಿಗಳು. ಇವರು ಬರೆದಂತಹ ಕವಿತೆಯ ರಚನೆಯಲ್ಲಿ ಸರಳ ಹಾಗೂ ಎಲ್ಲರಿಗೂ ಅರ್ಥವಾಗುವಂತೆ ರಚಿಸಿದ್ದಾರೆ.ಅಲ್ಲಲ್ಲಿ ಉಪಮೇಗಳೊಂದಿಗೆ ಕವಿತೆಗಳನ್ನು ಹೆಣೆದಿರುವುದು ಕಂಡು ಬರುತ್ತದೆ.ಕೆಲ ಸಂದರ್ಭದಲ್ಲಿ ಕವಿತೆಯ ಸಾಲುಗಳಲ್ಲಿ ಬರುವ ಶಬ್ದಗಳ ಗೂಡಾರ್ಥಗಳು ಓದುಗರಿಗೆ ಸವಾಲಿನಂತೆ ಚಿತ್ರಿಸಿರುವುದು ಕವಿಯ ಭಾಷೆಯ ಪ್ರೌಢಮೆ ಮತ್ತು ಜಾನ್ಮೆ ಎದ್ದು ಕಾಣುತ್ತದೆ. ಇವರು ತಮ್ಮ ಕವನಗಳ ಮೂಲಕ ಜೀವನದ ಮೌಲ್ಯಗಳನ್ನು ಮಹತ್ವವನ್ನು ಸಮಾಜ ಸಮುದಾಯದ ಉತ್ತಮ ಅಭಿವೃದ್ಧಿಯನ್ನು ಅವರ ಅಂತರಾಳದ ಭಾವ ಚಿಂತನ ಮಂಥನದ ನವೀನ ಭಾವನೆಗಳಿಂದ ಮೇಳಯಿಸುವ ಕೃತಿಕಾರ ಎಂದರೆ ಅತಿಶಯೋಕ್ತಿ ಆಗಲಾರದು ಎಂಬ ಅಭಿಪ್ರಾಯ ಪಟ್ಟರು.
ಇದೇ ಸಂದರ್ಭದಲ್ಲಿ ಸಾಹಿತಿ ನಾಗರಾಜ ಜಲ್ಲಿ ಅವರು ಮಾತನಾಡಿ, ಶ್ರೀ ದೀಪಕ ಬಿಳ್ಳೂರ ಅವರ ಕವಿತೆಗಳು ಮನುಷ್ಯನ ಕನಸು ,ವ್ಯಕ್ತಿತ್ವ ,ನಾಡು ,ದೇಶ ,ಶಿಲ್ಪ ,ಪ್ರಕೃತಿ ,ಅಭಿವೃದ್ಧಿ ಮತ್ತು ಅದರ ಹಿನ್ನಡೆ ಸಮಕಾಲಿನ ರಾಜಕೀಯ ,ಮನುಷ್ಯನ ವಿವಿಧ ಬಗೆಯ ರಾಗ ದ್ವೇಷಗಳು, ಯೋಧರು ,ಮಾತು, ನಡೆ ನುಡಿ, ಮನೆ, ಕುಟುಂಬ, ಒಮ್ಮೆ ವೈರಾಗ್ಯ ಹೀಗೆ ಹಲವು ಭಾವಗಳುಳ್ಳ ಕವಿತೆಗಳನ್ನು ರಚಿಸಿದ್ದಾರೆ. ಅಧಿಕಾರ ಹಾಗೂ ಅಹಂಕಾರಕ್ಕಿಂತ ಮಾನವೀಯತೆ ಸಮಾಜದಲ್ಲಿ ನೆಲೆಗೊಳ್ಳಬೇಕು ಅನ್ನುವ ಸಾರವನ್ನು ಇವರ ಕವಿತೆಗಳು ಎತ್ತಿ ಹಿಡಿಯುತ್ತವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ , ರಜನಿ ದೇಸಾಯಿ, ಬಸವರಾಜ್ ಜವಲಿ,ರಾಘವೇಂದ್ರ, ಸೇರಿದಂತೆ ಅನೇಕ ಸಾಹಿತ್ಯಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ರಜನಿ ದೇಸಾಯಿ ಸ್ವಾಗತಿಸಿದರು. ರಾಘವೇಂದ್ರ ಕೃತಿಕಾರರನ್ನು ಪರಿಚಯಿಸಿದರು, ಜವಲಿ ಅವರು ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ಶ್ರೀ ವೆಂಕಟೇಶ್ ಬಡಿಗೇರ್ ಜಿಲ್ಲಾಧ್ಯಕ್ಷರು ಮಕ್ಕಳ ಸಾಹಿತ್ಯ ಪರಿಷತ್ತು ಹಾಗೂ ಸಂಚಾಲಕರು ಚಕೋರ ವಿಚಾರ ಸಾಹಿತ್ಯ ವೇದಿಕೆ. ವಿಜಯನಗರ ಜಿಲ್ಲೆ ಡಾ.ದಯಾನಂದ ಕಿನ್ನಾಳ. ಚಂದ್ರಶೇಖರ್ ರೋಣದ ಮಠ.ಸೋಧ ವಿರುಪಾಕ್ಷಗೌಡ. ಟಿ ಬಸವರಾಜ್. ವಿರುಪಾಕ್ಷಯ್ಯ ಸ್ವಾಮಿ. ಶ್ರೀ ಮುದೇನೂರು ಉಮಾಮಹೇಶ್ವರ ಶುಭ ಹಾರೈಸಿದ್ದಾರೆ
