29/01/2026
IMG-20251223-WA0008

ಬೆಳಗಾವಿ-24 : ಸವದತ್ತಿ ಯಲ್ಲಮ್ಮನ ದೇವಸ್ಥಾನದಲ್ಲಿ ಸಿಬ್ಬಂದಿಯ ಭ್ರಷ್ಟಾಚಾರ ದೌರ್ಜನ್ಯ ಮತ್ತು ಭಕ್ತರಗೆ ಅನ್ಯಾಯಕ್ಕೆ ತುರ್ತು ವಿಚಾರಣೆ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಜೈ  ಭೀಮ್  ಭಾರತೀಯ ಹಿಂದು ಡೋರ ಸಮಾಜ ಸೇವಾ ಸಮೀತಿ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಮಂಗಳವಾರ ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿನ ದೇವಸ್ಥಾನಲ್ಲಿ ಭಾರೀ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾರ ಯಾಗುತ್ತಿದೆ ಎಂದು ಆರೋಪಿ ಪ್ರತಿಭಟನೆ ನಡೆಸಿದರು.
ಕಲಂ 50 ರ ಪ್ರಕಾರ ದೇವಸ್ಥಾನದಲ್ಲಿ ಆಸ್ತಿ ಆದಾಯ ದುರ್ಬಳಕೆಯಿಂದ ಮಾಡಲಾಗುತ್ತಿದೆ. ವಿಶೇಷ ದರ್ಶನಕ್ಕೆ ಪ್ರತಿ ಭಕ್ತಿರಿಂದ 200 ರಿಂದ 2000 ರೂ ತೆಗೆದುಕೊಂಡು ದರ್ಶನಕ್ಕೆ ಬಿಡುತ್ತಿದ್ದಾರೆ. ದಲಿತ ಬಡ ಭಕ್ತರ ಮೇಲೆ ದೈಹಿಕ ಹಿಂಸೆ, ಮಹಿಳೆಯರ ಅಪಮಾನ, ವೃದ್ದರು ಮಾತೃಗಳು ಹಾಗೂ ಶಿಶುಗಳಿಗೆ ಪ್ರತ್ಯೇಕ ದರ್ಶನದ ಸಾಲಿಲ್ಲಇನ್ನು ಹಲವು ದೇವಸ್ಥಾನದಲ್ಲಿ ಭ್ರಷ್ಟಾಚಾರ ಮಾಡುತ್ತಿರುವವರು ವಿರುದ್ದ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆಯಲ್ಲಿ ಆಗ್ರಹಿಸಿದರು.
ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ಭ್ರಷ್ಟಾಚಾರ ಮಾಡುತ್ತಿರುವವರ ವಿರುದ್ದ ಕೂಡಲೇ ಕಾನೂನಿನ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಭ್ರಷ್ಟಾಚಾರಿಗಳ ವಿರುದ್ದ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನೆಯಲ್ಲಿ ಎಚ್ಚರಿಸಿದ್ದಾರೆ.
ಈ ವೇಳೆ ರಾಜು ಸತೀಶ್ ಟೊಂಬರೆ, ಗೊಪಾಲ ಪಿಂಪರೆ, ಅನೀಲ ಚೌಗಲಾ, ಶ್ರೀಕಂತ ಟಿಂಪರೆ, ಶಿವಕುಮಾರ ಹೂಲಿ, ಚರನಸಿಂಗ್ ಧಾಮನೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು..

error: Content is protected !!