filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46;
ಬೆಳಗಾವಿ-23 : ಧಾರವಾಡದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ ನಾರಾಯಣ ಬರ್ಮಾನಿ ಅವರ ಮೇಲೆ ಮುಖ್ಯಮಂತ್ರಿ ಕೈ ಎತ್ತಿದ ಘಟನೆಯನ್ನು ಖಂಡಿಸಿ ಭೀಮಪ್ಪ ಗಡಾದ್ ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
ಸೋಮವಾರ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು. ಪೊಲೀಸ್ ಇಲಾಖೆಯ ಪಾತ್ರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ರ್ಯಾಲಿಯಲ್ಲಿ ಭಾಷಣ ಮಾಡುವಾಗ ಮುಖ್ಯಮಂತ್ರಿ ನಾರಾಯಣ ಬರ್ಮಾನಿ ಅವರಿಗೆ ಕೈ ಎತ್ತುವ ಮೂಲಕ ಬೆದರಿಕೆ ಹಾಕಿದ್ದರು, ಇದು ಕಾನೂನಿನ ಉಲ್ಲಂಘನೆಯಾಗಿದೆ. ಸರಕಾರಿ ಅಧಿಕಾರಿಯ ವಿರುದ್ಧ ಕೈ ಎತ್ತುವುದಕ್ಕೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಅವಕಾಶವಿದ್ದರೂ, ಪೊಲೀಸರು ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳದೆ ಪ್ರಕರಣ ದಾಖಲಿಸಿದ್ದಾರೆ ಅಸಮಾಧಾನ ಹೋರ ಹಾಕಿದರು.
ಘಟನೆಯಿಂದ ನೊಂದಿದ್ದ ಬರ್ಮಾನಿ ಸ್ವಯಂಪ್ರೇರಿತ ನಿವೃತ್ತಿ ಪಡೆಯಲು ಸಿದ್ಧರಿರುವುದಾಗಿ ವ್ಯಕ್ತಪಡಿಸಿದ್ದರು, ಆದರೆ ಅವರನ್ನು ಮನವೊಲಿಸಿ ಜಿಲ್ಲಾಧಿಕಾರಿ ಹುದ್ದೆಗೆ ಬಡ್ತಿ ನೀಡಲಾಯಿತು. ಐಪಿಎಸ್ ಅಥವಾ ಕೆಎಎಸ್ ಶ್ರೇಣಿಯ ಅಧಿಕಾರಿಗಳಿಗೆ ಇರುವ ಈ ಹುದ್ದೆಗೆ ನೇಮಕಾತಿ ಕಾನೂನುಬದ್ಧವಾಗಿದೆ ಮತ್ತು ಕೆಳ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿರುವುದರಿಂದ, ಅವರು ಈಗ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾಡ ತಿಳಿಸಿದರು.
