ಬೆಳಗಾವಿ-22 : ಮಹಾರಾಷ್ಟ್ರದ ನಾಯಕರು ಕಳೆದ ಐವತ್ತು ವರ್ಷಗಳಿಂದ ಬೆಳಗಾವಿಯಲ್ಲಿ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಭಾಷಾ ವೈಷಮ್ಯದ ವಿಷ ಬೀಜ ಬಿತ್ತುವ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.
ಕರುನಾಡಿನ ಜನತೆ ರಾಜ್ಯೋತ್ಸವ ಆಚರಣೆ ಮಾಡುವ ಸಂಧರ್ಭದಲ್ಲಿ ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಮಾಡುವದು, ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗ ಮರಾಠಿ ಮೇಳಾವ್ ಮಾಡುವ ನಾಡದ್ರೋಹಿ ಎಂಇಎಸ್ ನಾಯಕರು ಮಹಾರಾಷ್ಟ್ರದ ನಾಯಕರನ್ನು ಬೆಳಗಾವಿಗೆ ಕರೆಯಿಸಿ ಅವರಿಂದ ಪ್ರಚೋದನಕಾರಿ ಭಾಷಣ ಮಾಡಿಸಿ, ಬೆಳಗಾವಿಯ ಭಾಷಾ ಬಾಂಧವ್ಯಕ್ಕೆ ಧಕ್ಕೆ ತರುವಂತೆ ಕಳೆದ ಹಲವು ದಶಕಗಳಿಂದ ಮಾಡಿಕೊಂಡು ಬರುತ್ತಿದ್ದಾರೆ ಎಂದು ಸೋಮವಾರ ಸಂಸದ ಜಗದೀಶ್ ಶೆಟ್ಟರ್ ಅವರಿಗೆ ಕರವೇ ಕಾರ್ಯಕರ್ತುರು ಘಟನೆ ಬಗ್ಗೆ ವಿವರಿಸಿ ಅಸಮಾಧಾನ ಹೋರ ಹಾಕಿದರು.
ಮಹಾರಾಷ್ಟ್ರದಿಂದ ಕರ್ನಾಟಕ ರಾಜ್ಯಕ್ಕೆ ಬಂದು ಇಲ್ಲಿಯ ಭಾಷಾ ಬಾಂಧವ್ಯಕ್ಕೆ ಧಕ್ಕೆ ತಂದು ಭಾರತದ ಒಕ್ಕೂಟದ ವ್ಯವಸ್ಥೆಯನ್ನೇ ಹಾಳು ಮಾಡುತ್ತಿರುವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಸಂಸದ ಧೈರ್ಯಶೀಲ ಮಾನೆ ವಿರುದ್ಧ ಕೇಂದ್ರ ಸರಕಾರ ಕೂಡಲೇ ಕ್ರಮ ಕೈಗೊಳ್ಳುವಂತೆ ಬೆಳಗಾವಿಯ ಸಂಸದರಾದ ತಾವು ಸಂಸತ್ತಿನಲ್ಲಿ ಈ ಕುರಿತು ಧ್ವನಿ ಎತ್ತಿ ಕೇಂದ್ರ ಸರಕಾರದ ಗಮನ ಸೆಳೆಯುವ ಜೊತೆಗೆ ಕೇಂದ್ರದ ಗೃಹ ಮಂತ್ರಿಗಳಿಗೆ ತಾವು ಲಿಖಿತ ದೂರು ಸಲ್ಲಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ನೇತ್ರತ್ವದಲ್ಲಿ ಮನವಿ ಸಲ್ಲಿಸಿದರು.
ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾವುಗಳು ಸಂಸತ್ತಿನಲ್ಲಿ ಧ್ವನಿ ಎತ್ತದಿದ್ದರೆ, ಕೇಂದ್ರದ ಗೃಹ ಸಚಿವರಿಗೆ ಈ ಕುರಿತು ಲಿಖಿತ ದೂರು ನೀಡದಿದ್ದರೆ. ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಸಂಸದ ಜಗದೀಶ್ ಶೆಟ್ಟರ್ ಕಚೇರಿಯ ಎದುರು ಧರಣಿ ಸತ್ಯಾಗ್ರಹ ನಡೆಸುವದು ಅನಿವಾರ್ಯವಾಗುತ್ತದೆ. ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಳಗಾವಿಯ ಗಡಿ ವಿಚಾರ ಬಂದಾಗ, ಭಾಷೆಯ ವಿಚಾರ ಬಂದಾಗ ಮಹಾರಾಷ್ಟ್ರದ ನಾಯಕರು ಪಕ್ಷಾತೀತವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತುತ್ತಾರೆ. ಆದರೆ ನಮ್ಮ ನಾಡಿನ ಸಂಸದರು ಮೌನವಹಿಸುತ್ತಾರೆ. ಮಹಾರಾಷ್ಟ್ರದ ನಾಯಕರಿಗೆ ಪ್ರತ್ಯುತ್ತರ ನೀಡುವದು ನಿಮ್ಮ ಜವಾಬ್ದಾರಿಯಾಗಿದ್ದು ಈ ಬಾರಿಯೂ ತಾವು ಮೌನ ವಹಿಸಿದರೆ ಸಮಸ್ತ ಕನ್ನಡಿಗರು ನಿಮ್ಮ ವಿರುದ್ಧ ಜನಾಂದೋಲನ ನಡೆಸಬೇಕಾಗುತ್ತದೆ ಎಂದರು ಕರವೇ ಎಚ್ಚರಿಕೆ ನೀಡಿದೆ.
ನೆಲ,ಜಲ,ಭಾಷೆ,ಸಂಸ್ಕೃತಿಯ ವಿಚಾರ ಬಂದಾಗ ನಮ್ಮ ಭಾಗದ ಸಂಸದರಾದ ತಾವು ನಮ್ಮ ನಾಡಿನ ಪರವಾಗಿ,ಕನ್ನಡಿಗರ ಪರವಾಗಿ ಧ್ವನಿ ಎತ್ತಬೇಕೆಂದು ಶೆಟ್ಟರ ಅವರಿಗೆ ಆಗ್ರಹಿಸಿದರು.
ಈ ವೇಳೆ ಕರವೇ ಜಿಲ್ಲಾಧ್ಯಕ್ಷರಾದ ದೀಪಕ ಗುಡಗನಟ್ಟಿ, ಸುರೇಶ ಗವಣ್ಣವರ, ಗಣೇಶ ರೋಕಡೆ, ರಾಜು ನಾಶಿಪುಡಿ , ಹೊಳೆಪ್ಪಾ ಸುಳದಾಳ, ಅಡಿವೆಪ್ಪ ತಲ್ಲೂರಿ, ಬಸವರಾಜ ಅವರೊಳ್ಳಿ, ಪ್ರಕಾಶ ಲಮಾಣಿ , ಸತೀಶ್ ಗುಡದವರ, ವಿಠ್ಠಲ್ ಹಿಂಡಲ್ಕರ, ಮಂಜುನಾಥ್ ರಾಥೋಡ್, ಲೋಕೇಶ ರಾಥೋಡ್, ರಮೇಶ್ ವಾಲಿ , ರಮೇಶ್ ಹಳೆಮಣಿ , ಅರ್ಜುನ ಕಾಂಬಳೆ, ವಿನಾಯಕ್ ಕೋಳಿ, ರಮೇಶ ಯರಗನ್ನವರ , ಇಸ್ಮಾಯಿಲ್ ಮುಲ್ಲಾ, ರೇಖಾ ಲೋಕರಿ, ಶಾಂತ ಹಣಬರ, ತೇಜಸ್ವಿನಿ ಮಾನೆ, ಮಾರುತಿ ಮಸ್ತಿ, ವಿನಾಯಕ ಭೋವಿ, ಸಂತೋಷ ಚಕ್ರಾಯಿ, ಚೇತನ ಮಾಸ್ತಿಹೋಳಿ, ನಾಗರಾಜ ಲಕ್ಕಪಗೋಳ, ಬಸವರಾಜ ದನದವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
