ಬೆಳಗಾವಿ-17 : ಬಾರ್ ಅಸೋಸಿಯೇಷನ್ನ ಅಧ್ಯಕ್ಷರಾಗಿ ಎಸ್.ಎಸ್.ಕಿವಡಸಣ್ಣವರ ಮರು ಆಯ್ಕೆಗೊಂಡಿದ್ದಾರೆ. ಸಾಮಾನ್ಯ ಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಯಾದ ಹಿನ್ನೆಲೆ ಎಸ್.ಎಸ್.ಕಿವಡಸಣ್ಣವರ ಅವರನ್ನು ಸ್ಥಾನದಿಂದ ವಜಾಗೊಳಿಸಲಾಗಿತ್ತು. ಆದರೇ, ಈಗ ಅವಿಶ್ವಾಸ ನಿರ್ಣಯ ಹಿಂಪಡೆದ ಹಿನ್ನೆಲೆ ಸಾಮಾನ್ಯ ಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡನೆಯಾದ ಯಾದ ಬಳಿಕ ಮತ್ತೆ ಅವರನ್ನೇ ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡಾ. ಬಾಬಾಸಾಹೇಬ ಅಂಬೇಡ್ಕರರು ಬರೆದಿರುವ ಭಾರತೀಯ ಸಂವಿಧಾನವು ದೇಶದ ಜನರ ಹಕ್ಕುಗಳ ರಕ್ಷಣೆಗೆ ಪೂರಕವಾಗಿದೆ. ವಕೀಲ ಸಂಘಟನೆಗಳಲ್ಲಿ ಕಾನೂನು ಉಲ್ಲಂಘಿಸಿ ನಿಯಮಗಳನ್ನು ಕೈಗೊಳ್ಳಬಾರದು. ಯಾವುದಾದರೂ ಲೋಪಗಳಾಗಿದ್ದರೇ, ಅವುಗಳನ್ನು ತಿದ್ದುಕೊಳ್ಳಲು ಅವಕಾಶ ನೀಡಬೇಕು. ಆದರೇ, ಮುಂದಿನ ದಿನಗಳಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಬಾರದು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆಡಳಿತತಾತ್ಮಕ ನ್ಯಾಯಮೂರ್ತಿಗಳಾದ ಮುದಗಲ್ ಅವರು 22 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದ್ದಾರೆ.
ಕ್ಯಾಂಟಿನ್ ಮತ್ತು 20 ಕೋಟಿಯಲ್ಲಿ ವಕೀಲರಿಗೆ ಛೇಂಬರ್ಗಳನ್ನು ನಿರ್ಮಿಸಲಾಗುವುದು. ಹಿರಿಯರು ಮತ್ತು ಯುವ ಮಿತ್ರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿವರ್ಹಿಸುವುದೆಂದು ಹೇಳಿದರು.
ಈ ವೇಳೆ ವೈ.ಕೆ. ದೀವಟೆ, ಸುಮೀತ್ ಕುಮಾರ್ ಅಗಸಗಿ, ಬಸವರಾಜ್ ಮುಗಳಿ, ವಿಜಯ ಪಾಟೀಲ, ಶೀತಲ್ ರಾಮಶೆಟ್ಟಿ, ಅಶ್ವಿನಿ ಹವಾಲ್ದಾರ್, ವಿನಾಯಕ್ ನಿಂಗನೂರೆ, ಈರಪ್ಪಾ ಪೂಜಾರಿ, ಸುರೇಶ್ ನಾಗನೂರಿ, ಅನೀಲ್ ಪಾಟೀಲ, ಸೇರಿದಂತೆ ಬಾರ್ ಅಸೋಸಿಯೇಷನ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.
