ಬೆಳಗಾವಿ-15: : ಕರ್ನಾಟಕ ರಾಜ್ಯಮಟ್ಟ ಕುರುಬರ ಸಂಘ ಮತ್ತು ಕುರುಬ ಸಮುದಾಯದ ಹಲವಾರು ಸಂಘಟನೆಗಳು ಸೇರಿ, ಕರ್ನಾಟಕ ಕುರುಬ ಸಮುದಾಯದ ಅಭಿವೃದ್ಧಿಗಾಗಿ ಹಲವು ಬೇಡಿಕೆಗಳನ್ನು ಆಗ್ರಹಿಸಿ ಡಿ.18 ರಂದು ಸುವಣಸೌಧದ ಪಕ್ಕದಲ್ಲಿರುವ ಪ್ರತಿಭಟನಾ ಸ್ಥಳದಲ್ಲಿ ಹೋರಾಟ ನಡೆಸಲಿದ್ದಾರೆ.
ಸೋಮವಾರ ಕುರುಬ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇಸುವಂತೆ ಆಗ್ರಹಸಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿರುವ ಕೆಲ ಜಿಲ್ಲೆಗಳಾದ ಬೀದರ್ ಕಲಬುರ್ಗಿ, ಯಾದಗಿರಿ ಭಾಗದ ಗೊಂಡ ಕುರುಬ ರಾಜಗೊಂಡ ಮೈಸೂರು ಭಾಗದ ಬೆಟ್ಟ ಕುರುಬ ಕಾಡ ಕುರುಬ, ಹಾಗೂ ಕೊಡಗು ಜಿಲ್ಲೆಯ ಕುರುಬರಿಗೆ ಮಾತ್ರ ಎಲ್ಲ ಮೀಸಲಾತಿ ನೀಡುತ್ತಿದ್ದಾರೆ. ಉಳಿದ ಕುರುಬ ಸಮುದಾಯಕ್ಕೆ, ತಾರತಮ್ಯ ಮಾಡುತ್ತಿರುವುದನ್ನು ಖಂಡಿಸಿ ಸರಕಾರದ ವಿರುದ್ದ ಪ್ರತಿಭಟಿಸಿದರು.
ಕುರುಬ ಸಮಾಜದ ಅಭಿವೃದ್ಧಿಗಾಗಿ ಕುರುಬರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ ಮುಂಬರುವ ಬಜೆಟ್ ನಲ್ಲಿ 1000 ಹಣ ಬಿಡುಗಡೆ ಮಾಡಬೇಕು, ಕುರುಬರ ಕುಲದೇವರು ಜಗದ್ಗುರು ಶ್ರೀ ರೇವಣ್ಣಸಿದ್ದೇಶ್ವರ ಪಂಚಪೀಠವನ್ನು ಸ್ಥಾಪಿಸಿ ಆರಂಭಿಕವಾಗಿ, ಸ್ವಲ್ಪ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.
ಕರ್ನಾಟಕ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿರುವ ಗೊರವಯಗಳು ಒಗ್ಗಯ್ಯರು ಡೊಳ್ಳನ ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ತಿಂಗಳಿಗೆ 10 ಸಾವಿರ ರೂ ಮಾಶಾಸನ ನೀಡಬೇಕು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಯಂತಿಯನ್ನು ಗ್ರಾಮ ಪಂಚಾಯತಿಯಿಂದ ಜಿಲ್ಲಾ ಪಂಚಾಯತಿ ವರೆಗೂ ಆರಚಣೆ ಆದೇಶಿಸಬೇಕು, ಹಾಗೂ ಅಲೆಮಾರಿ ಕುರಿಗಾರದ ಮಕ್ಕಳಿಗೆ ಪ್ರತಿ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಶ್ರೀಕನಕ ವಸಹಿ ಶಾಲೆಗಳನ್ನು ಪ್ರಾರಂಭಿಸಬೇಕು. ಮತ್ತು ಬೆಳಗಾವಿ ನಗರದಲ್ಲಿರುವ ಭಕ್ತ ಕನಕದಾಸರ ವೃತ್ತದಲ್ಲಿ ಭಕ್ತ ಕವಕದಾಸರ ಮೂರ್ತಿ ಪ್ರತಿಷ್ಠಾಪನೆ ಮಾಡವಂತೆ ಸರಕಾರರಕ್ಕೆ ಒತ್ತಾಯಿಸಿ ಡಿ.18 ರಂದು ಸುವರ್ಣಸೌಧದ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕುರುಬ ಸಮಾದ ರಾಜ್ಯಾಧ್ಯಕ್ಷ ಪ್ರಭುದೇವ ದೊಡ್ಮನಿ ಆಗ್ರಹಿಸಿದರು.
ಕುರುಬ ಸಮಾಜ ಸಂಘಟನೆಯ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರು, ಕಾರ್ಯದರ್ಶಿಗಳು, ಕಾರ್ಯಕರ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
