ರಾಮದುರ್ಗ-17:ರಾಮದುರ್ಗದ ಪ್ರತಿಷ್ಠಿತ ಫತ್ತೇಪುರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೂರ್ಯನ ಬಿಸಿಲಿನಿಂದ ವಿದ್ಯುತ್ ಉತ್ಪಾದನಾ ಘಟಕ ಕಾರ್ಯಾರಂಭಗೊಂಡಿತು.

8 ಕಿಲೋ ವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಘಟಕವು ದಿನಕ್ಕೆ 32 ರಿಂದ 36 ಯುನಿಟ್ ಅಂದರೆ ತಿಂಗಳಿಗೆ 1,000 ಯುನಿಟ್ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುತ್ತದಲ್ಲದೇ, ಹೆಚ್ಚುವರಿ ವಿದ್ಯುಚ್ಛಕ್ತಿಯನ್ನು ಕೆ.ಇ.ಬಿ.ಗೆ ರವಾನಿಸಿ ತಿಂಗಳಿಗೆ 1,500 ರಿಂದ 2,000 ವರೆಗೆ ಆದಾಯ ತರಬಲ್ಲ ಈ ಘಟಕದಲ್ಲಿ 3 ಫೇಜ್ ವಿದ್ಯುಚ್ಛಕ್ತಿ ಉತ್ಪಾದಿಸಬಲ್ಲ ಸೋಲಾರ ಇನ್ವರ್ಟರ್ ಅಳವಡಿಸಿರುವುದು ವೈಶಿಷ್ಟ್ಯವಾಗಿದೆ.
ಟಾಪ್ಕಾನ್, ಬೈಫೇಸಿಯಲ್ ತಂತ್ರಜ್ಞಾನಾಧರಿತ ಸೋಲಾರ ಫಲಕಗಳನ್ನು ಅಳವಡಿಸಿರುವುದರಿಂದ ಹೆಚ್ಚಿನ ಕಾರ್ಯಕ್ಷಮತೆಯನ್ನು ನಿರೀಕ್ಷಿಸಲಾಗಿದೆ.
ಹಾಟ್ ಡಿಪ್ಪಡ್, ಹೈರೈಜ್ಡ ಸ್ಟ್ರಕ್ಚರ್ ಅಳವಡಿಸಿರುವುದು ಇನ್ನೊಂದು ವಿಶೇಷತೆಯಾಗಿದ್ದು 25 ವರ್ಷಗಳ ದೀರ್ಘಾವಧಿಗೆ ನಿರಂತರ ಸೇವೆ ದೊರೆಯುತ್ತದೆ.
ಸಿಡಿಲು ನಿರೋಧಕ, ಏಸಿ ಹಾಗೂ ಡಿಸಿ ಅರ್ಥಿಂಗ್ ಅಳವಡಿಸಿ ಸಂಪೂರ್ಣ ಸುರಕ್ಷತೆಯನ್ನು ಖಚಿತ ಪಡಿಸಲಾಗಿದೆ.
ಶ್ರೀ ಶ್ರೀಧರ ಫತ್ತಪೂರ, ಪ್ರೋ. ವಡವಡಗಿ ಸರ್, ಪ್ರಾಚಾರ್ಯ ಮೋಹಿತೆ ಸರ್, ಹಾಗೂ ಪ್ರೊ. ಜಾನಗೌಡರರವರ ಸಹಕಾರದಿಂದ ಶ್ರೀ ಭಾಲಚಂದ್ರ ಜಾಬಶೆಟ್ಟಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗ್ರೀನಲ್ಯಾಂಡ ಬಯೋಟೆಕ್ ರಾಮದುರ್ಗ ಮತ್ತು ತಂಡ ಈ ಕಾರ್ಯವನ್ನು ಅಚ್ಚುಕಟ್ಟಾಗಿ ಅಳವಡಿಸಿದ್ದಾರೆ.
ವಿವರಗಳಿಗೆ ಸಂಪರ್ಕಿಸಿರಿ:
ಭಾಲಚಂದ್ರ ಜಾಬಶೆಟ್ಟಿ ರಾಮದುರ್ಗ
9741888365
