11/12/2025
IMG-20251118-WA0001

ಬೆಳಗಾವಿ-18:ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಿಯಿಂದ ನಡೆಸಲ್ಪಡುವ ಜ್ಯೋತಿ ಸೆಂಟ್ರಲ್ ಸ್ಕೂಲ್, ಬೆಳಗಾವಿಯಲ್ಲಿ  ಮೊಟ್ಟ ಮೊದಲ ಬಾರಿ ಪ್ರಕಟವಾಗುತ್ತಿರುವ ಶಾಲಾ ಮ್ಯಾಗಜೀನ್ ‘ಜ್ಯೋತಿರ್ಮಯಿ’ಯ ಮೊದಲ ಸಂಚಿಕೆಯ ಭವ್ಯ ಅನಾವರಣ ಉತ್ಸಾಹಭರಿತ ವಾತಾವರಣದಲ್ಲಿ ನೆರವೇರಿತು.

ವಿದ್ಯಾರ್ಥಿಗಳ ಕಲಾ, ಪ್ರತಿಭೆ ಮತ್ತು ಸಾಹಿತ್ಯಿಕ ಅಭಿವ್ಯಕ್ತಿಗೆ ವೇದಿಕೆ ಒದಗಿಸುವ ಉದ್ದೇಶದಿಂದ ಈ ಮ್ಯಾಗಜೀನ್ ಆರಂಭಿಸಲಾಗಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ವಿಶೇಷ ಉತ್ಸಾಹ ಕಂಡುಬಂದಿತು.

ಮ್ಯಾಗಜೀನ್‌ನ ಅನಾವರಣ ಶಾಲೆಯ ಸಂಸ್ಥಾಪಕರು ಹಾಗೂ ಮಾಜಿ ಅಧ್ಯಕ್ಷರಾದ ಡಾ. ಪಿ. ಡಿ. ಕಾಳೆ ಇವರ ಕೈ ಯಿಂದ ನೆರವೇರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಸಂಗೊಳ್ಳಿ ಸರ್, ಆರ್. ಕೆ. ಪಾಟೀಲ, ಆರ್. ಎಸ್. ಪಾಟೀಲ ಮತ್ತು ನಿತಿನ್ ಘೋರಪಡೆ ಪ್ರಮುಖ ಅತಿಥಿಗಳಾಗಿ ಹಾಜರಿದ್ದರು.

ಶಾಲೆಯ ಮುಖ್ಯಾಧ್ಯಾಪಕಿ ಶ್ರೀಮತಿ ಸೋನಾಲಿ ಕಂಗ್ರಾಳ್ಕರ, ಸಮಸ್ತ ಶಿಕ್ಷಕವೃಂದ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಗಣ್ಯರು ಶಾಲೆಯ ಈ ಉಪಕ್ರಮವನ್ನು ಮೆಚ್ಚಿ ಮಾತನಾಡಿದರು. ಮುಖ್ಯಾಧ್ಯಾಪಕಿ ಕಂಗ್ರಾಳ್ಕರ ಅವರು ಮ್ಯಾಗಜೀನ್‌ನ ಸಂಕಲ್ಪನೆ ಮತ್ತು ಉದ್ದೇಶಗಳನ್ನು ವಿವರಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Leave a Reply

Your email address will not be published. Required fields are marked *

error: Content is protected !!