ಬೆಳಗಾವಿ-18 :ಬೆಳಗಾವಿ ನಗರದ ಅಮನ್ ನಗರದಲ್ಲಿ ಸೋಮವಾರ ಕೆಟ್ಟ ಘಟನೆ ನಡೆದಿದೆ.ನಾಲ್ಕು ಜನ ಯುವಕರು ಕಾರ್ಯಕ್ರಮಕ್ಕೆ ತೆರಳಿದ್ದರು, ಕಾರ್ಯಕ್ರಮದಿಂದ ಮರಳಿ ಮನೆಗೆ ಆಗಮಿಸಿ ಚಳಿ ವಿಪರಿತ ಇದ್ದ ಕಾರಣ ರೋಮ್ ನಲ್ಲಿ ಓಲೆ ಹತ್ತಿಸಿ ಚಳಿ ಕಾಯಿಸಿಕೊಳ್ಳುತ್ತಿರುವ ವೇಳೆ, ರೋಮ್ನಲ್ಲಿ ಹೊಗೆ ತುಂಬಿಕೊಂಡಿತ್ತು, ರೋಮ್ ಕಾಲ್ ಯಾಗಿರುವ ಪರಿಣಾಮ ದಟ್ಟವಾದ ಹೊಗೆ ತುಂಬಿಕೊಂಡು ಉಸಿರು ಕಟ್ಟಿ ೨೩ ರಿಂದ ೨೪ ವರ್ಷದ ಮೂರು ಜನ ಯುವಕರು ಸಾವನಪ್ಪಿದ್ದು ಓರ್ವ ಯುವಕನ ಸ್ಥಿತಿ ಗಂಭೀರವಾಗಿರುವ ಘಟನೆ ಬೆಳಗಾವಿಯ ಅಮನ್ ನಗರದಲ್ಲಿ ನಡೆದಿದೆ.
ಮೂರು ಜನ ಸಾವನಪ್ಪಿರು ಯುವಕರನ್ನು ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಯ ಬಳಿಕ ಶವಗಳನ್ನು ಕುಟುಂಬಸ್ಥರಿಗೆ ಹತ್ತಾಂತರಿಸಲಾಗುವುದು ಎಂದು ಭೀಮ್ಸ್ ವೈದ್ಯರು ತಿಳಿಸಿದ್ದಾರೆ. ಓರ್ವ ಬಾಲಕನ ಸ್ಥಿತಿ ಗಂಭೀರವಾಗಿದೆ.
ಸಾವನಪ್ಪಿರುವ ಯುವಕರು. ರೀಹಾನ್ (೨೨) ಸರಫರಾಜ (೨೨) ಮೋಯಿನ್ (೨೩) ಶಾನವಾಜ್ ನ ಸ್ಥಿತಿ ಗಂಭೀರವಾಗಿದೆ.
ಈ ಘಟನೆ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಶಾಸಕ ಆಸೀಫ್ ಸೇಠ್ ಬೇಟಿ ನೀಡಿ ಸಾವನಪ್ಪಿರುವ ಮೂವರು ಯುವಕ ಸಾವಿನ ಬಗ್ಗೆ ಮಾಹಿತಿ ಪಡೆದುಕೊಂಡ ಬಳಿಕ, ಯುವಕರನ್ನು ಕಳೆದುಕೊಂಡ ಕುಟುಂಬಕ್ಕೆ ಶಾಸಕ ಸಾಂತ್ವಾನ ಹೇಳಿದರು. ಈ ಘಟನೆ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ತನಿಖೆ ನಡೆದಿದೆ.
