16/03/2026
IMG-20251115-WA0004

ಬೆಳಗಾವಿ 15: ಶನಿವಾರ ಬೆಳಗಾವಿ ಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಅಧಿವೇಶನ ಸಂದರ್ಭದಲ್ಲಿ ಶಾಸಕರು ಸರ್ಕಾರ ನೀಡುವ ಭತ್ಯದ ಹಣದಲ್ಲಿಯೇ ಊಟ ಉಪಚಾರ ಪಡೆಯಬೇಕು ಸಾರ್ವಜನಿಕ ತೆರಿಗೆಯಲ್ಲಿ ಪಡೆಯುವಂತಿಲ್ಲ. ಉತ್ತರ ಕರ್ನಾಟಕದ ಹೋರಾಟ ಸಮೀತಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ  ಹೇಳಿದರು.

2024 ರ ಫೆಬ್ರವರಿ ಮತ್ತು ಜುಲೈ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆದ ಅಧಿವೇಶನಗಳ ಸಮಯದಲ್ಲಿ ಸಚಿವರುಗಳಿಗೆ ಹಾಗೂ ಸದಸ್ಯರುಗಳಿಗೆ ಸರ್ಕಾರದಿಂದಲ್ಲೇ ಉಚಿತ ಊಟ ಉಪಹಾರಗಳನ್ನು ಮತ್ತು ಕಿರುನಿದ್ರೆಯ(ರಿಕ್ಲೈನರ್) ಕುರ್ಚಿಗಳನ್ನು ನೀಡಲಾಗಿದ್ದು ಇವುಗಳ ಸಲುವಾಗಿ ವಿವಿಧ ಹೊಟೇಲುಗಳಿಗೆ ಸರ್ಕಾರದಿಂದ ಪಾವತಿಸಲಾಗಿರುವ 35.33 ಲಕ್ಷ ರೂ. ಗಳನ್ನು ಮತ್ತು 2025 ರ ಮಾರ್ಚ ತಿಂಗಳಲ್ಲಿ ನಡೆದ ಅಧಿವೇಶನಗಳ ಸಮಯದಲ್ಲಿ ಸಚಿವರು ಹಾಗೂ ಸದಸ್ಯರುಗಳ ಊಟ ಉಪಹಾರದ ಸಲುವಾಗಿ ವೆಚ್ಚ ಮಾಡಲಾಗಿರುವುದು.ಬೆಂಗಳೂರಲ್ಲಿ ನಡೆಯುವ ಅಧಿವೇಶನ ಸಮಯದಲ್ಲಿ ಕಲಾಪದಲ್ಲಿ ಭಾಗವಹಿಸುವ ಸದಸ್ಯರುಗಳಿಗೆ ಸರ್ಕಾರದಿಂದ ಉಚಿತ ಊಟ- ಉಪಚಾರ ಟೀ ಕಾಫೀಗಳನ್ನು ನೀಡಲು ನಿಯಮಾವಳಿಗಳಲ್ಲಿ
ಅವಕಾಶ ಕಲ್ಪಿಸಲಾಗಿರುವುದಿಲ್ಲವೆಂದು ವಿಧಾನಸಭೆ ಸಚಿವಾಯಲದ ಅಧಿಕಾರಿಗಳು ಲಿಖಿತವಾಗಿ ಉತ್ತರ ನೀಡಿರುವದನ್ನು ಹಾಗೂ ಲೋಕಸಭೆ ರಾಜ್ಯಸಭಗಳ ಅಧಿವೇಶನಗಳ ಸಮಯದಲ್ಲಿಯಾಗಲಿ ದೇಶದ ಯಾವದೇ ರಾಜ್ಯಗಳ ವಿಧಾನ ಸಭೆ ವಿಧಾನ ಪರಿಷತ್ತಗಳಲ್ಲಿ ಆಗಲಿ ಅಧಿವೇಶನಗಳ ಸಮಯದಲ್ಲಿ ಸದಸ್ಯರುಗಳಿಗೆ ‌ಸರ್ಕಾರದಿಂದ ಉಚಿತವಾಗಿ ಊಟ-ಉಪಚಾರಗಳನ್ನಾಗಲಿ ಟೀ ಕಾಫೀ ಹಾಗೂ ತಂಪು ಪಾನೀಯಗಳನ್ನಾಗಲೀ ಕಿರುನಿದ್ರೆಕುರ್ಚಿಗಳನ್ನಾಗಲೀ ನೀಡುತ್ತಿರುವುದಿಲ್ಲ. ಸಾರ್ವಜನಿಕ ತೆರಿಗೆಯು ರಾಜ್ಯದ ಅಭಿವೃದ್ದಿ ಕಾಮಗಾರಿಗಳ ಸಲುವಾಗಿ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಪಾತಿಸಿದ ಹಣವನ್ನು ಸದಸ್ಯರು ಊಟ-ಉಪಚಾರಗಳಂತಹ ವೆಚ್ಚಕ್ಕೆ ಬಳಕೆ ಮಾಡಲಾಗಿದೆ.

2 thoughts on “ಉತ್ತರ ಕರ್ನಾಟಕದ ಹೋರಾಟ ಸಮೀತಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಪತ್ರಿಕಾ ಗೋಷ್ಠಿ

Comments are closed.

error: Content is protected !!