ಬೆಳಗಾವಿ-15 : ಬೆಳಗಾವಿ ಹೊರವಲಯದಲ್ಲಿರುವ ಭೂತರಾ ಮ್ನಟ್ಟಿ ಹತ್ತಿರ ದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಮೊನ್ನೆ ನ.13 ಗುರುವಾರ ರಂದು 8 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಶನಿವಾರ ಬೆಳಗ್ಗೆ ಮತ್ತೆ 20 ಕೃಷ್ಣಮೃಗಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಳಗಾವಿ ಹೊರವಲಯದ ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ ಘಟನೆ ನಡೆದಿರುವ ಸ್ಥಳಕ್ಕೆ ಹಿರಿಯ ಅರಣ್ಯ ಅಧಿಕಾರಿಗಳು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ ವೇಳೆ, ಬ್ಯಾಕ್ಟಿರಿಯಲ್ ಇಂಜೆಕ್ಷನ್ನಿಂದ ಕೃಷ್ಣಮೃಗಗಳು ಮೃತಪಟ್ಟಿವೆ. ಬೆಂಗಳೂರಿನ ಬನ್ನೇರುಘಟ್ಟದ ಪಶು ವಿಜ್ಞಾನ ಸಂಸ್ಥೆಯ ತಜ್ಞ ವೈದ್ಯರು ಬಂದು ಪರಿಶೀಲನೆ ನಡೆಸಿದ ಬಳಿಕ ಕೃಷ್ಣಮೃಗಗಳ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ.
ಗುರುವಾರ ರಂದು 8 ಕೃಷ್ಣಮೃಗಗಳು ಸಾವನ್ನಪ್ಪಿದ್ದವು. ಶನಿವಾರ ಮತ್ತೆ 20 ಮೃತಪಟ್ಟಿವೆ. ಒಟ್ಟು 28 ಜಿಂಕೆಗಳು ಸಾವನ್ನಪ್ಪಿರುವುದರಿಂದ ರಾಣಿ ಚನ್ನಮ್ಮ ಮೃಗಾಲಯದ ಅಧಿಕಾರಿಗಳಗೆ ದೊಡ್ಡ ತಲೆನೋವುಯಾಗಿದೆ. ಈ ಮೃಗಾಲಯದಲ್ಲಿ ಒಟ್ಟು 38 ಕೃಷ್ಣಮೃಗಗಳು ಇದ್ದು. ಅದರಲ್ಲಿ ಈಗ 10 ಕೃಷ್ಣಮೃಗಗಳು ಮಾತ್ರ ಉಳಿದಿವೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಎಸಿಎಫ್ ನಾಗರಾಜ ಬಾಳೇಹೊಸೂರ, ಬ್ಯಾಕ್ಟಿರಿಯಲ್ ಇಂಜೆಕ್ಷನ್ನಿಂದ ಕೃಷ್ಣಮೃಗಗಳು ಸಾವನ್ನಪ್ಪಿವೆ ಎಂದು ಮೇಲ್ನೋಟಕ್ಕೆ ವೈದ್ಯರಿಂದ ತಿಳಿದುಬಂದಿದೆ. 28ರಲ್ಲಿ 25 ಕೃಷ್ಣಮೃಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ನಿಯಮಾನುಸಾರ ಅವುಗಳ ಅಂತ್ಯಕ್ರಿಯೆ ಮುಗಿಸಲಾಗಿದೆ. ಇನ್ನುಳಿದಂತೆ 3 ಕೃಷ್ಣಮೃಗಳ ಮೃತದೇಹವನ್ನು ಮೊನ್ನೆ ಮೃತಪಟ್ಟಿದ್ದ ಕೃಷ್ಣಮೃಗಗಳ ವರದಿಯನ್ನು ಬನ್ನೇರುಘಟ್ಟಕ್ಕೆ ಕಳಿಸಲಾಗಿದೆ. ಆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಸ್ಪಷ್ಟವಾಗಲಿದೆ. ದಿನನಿತ್ಯ ನೀಡುವ ಆಹಾರವನ್ನೇ ಕೊಡುತ್ತಿದ್ದೆವು. ಹಾಗಾಗಿ, ಅದರಿಂದ ಯಾವುದೇ ಸಮಸ್ಯೆ ಆಗಿಲ್ಲ. ಇನ್ನುಳಿದ ಬೇರೆ ಪ್ರಾಣಿಗಳಿಗೂ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲ ಪ್ರಾಣಿಗಳ ಆರೋಗ್ಯ ತಪಾಸಣೆ ಮಾಡಲಾಗುವುದು. ಬನ್ನೇರುಘಟ್ಟದ ಮೃಗಾಲಯದಿಂದ ತಜ್ಞರಿಂದ ಪರೀಕ್ಷೆಯ ಬಳಿಕ ೨೮ ಕೃಷ್ಣಮೃಗಗಳ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಇನ್ನುಳಿದ 10 ಕೃಷ್ಣಮೃಗಗಳ ಆರೋಗ್ಯ ಚೆನ್ನಾಗಿದೆ. ಅವು ಚಟುವಟಿಕೆಯಿಂದ ಇವೆ ಎಂದು ತಿಳಿಸಿದರು.
