ದೇಶದ ಅಭಿವೃದ್ಧಿಗೆ ಹೊಸ ಸಂಶೋಧನೆ ಅತ್ಯಗತ್ಯ: ಡಿಸಿಪಿ ನಾರಾಯಣ ಭರಮಣಿ
ಬೆಳಗಾವಿ-12: ದೇಶದ ಅಭಿವೃದ್ಧಿಗೆ ಸಂಶೋಧನೆ ಅತ್ಯಗತ್ಯವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಹೊಸ- ಹೊಸ ಸಂಶೋಧನೆಗಳ ಕಡೆಗೆ ಸಾಗಿದಾಗ ಮಾತ್ರ ಉದೋಗ ಗಳನ್ನು ಸೃಷ್ಟಿಯಾಗುತ್ತವೆ. ಜೊತೆಗೆ ನಮ್ಮ ದೇಶವು ಮತ್ತಷ್ಟು ಬಲಿಷ್ಠವಾಗಿ ಬೆಳೆಯಲು ಅನುಕೂಲವಾಗುತ್ತದೆ ಎಂದು ಬೆಳಗಾವಿಯ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತರಾದ ನಾರಾಯಣ. ವಿ. ಭರಮಣಿ ಅವರು ಹೇಳಿದರು.
ನಗರದ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ರಿಸರ್ಚ್ (ಜೆಸಿಇಆರ್) ಉದ್ಯಮಬಾಗ ಕ್ಯಾಂಪಸ್‌ನ , ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ
ಎರಡು ದಿನಗಳ ಕಾಲ ಆಯೋಜಿಸಲಾದ “ಸವಿಷ್ಕಾರ್ ” ರಾಷ್ಟ್ರೀಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶೈಕ್ಷ ಣಿಕ ಸಂಶೋಧನಾ ಕ್ಷೇತ್ರವು ಹಲವು ಸಮಸ್ಯೆಗಳಿಂದ ಹಿಂದೆ ಉಳಿಯುತ್ತಿದೆ. ಯುವಕರು ಅದಕ್ಕೆ ಚೇತರಿಕೆಯ ನೀಡಬೇಕು. ಅದು ನಿಮ್ಮ ಕೈಯಲ್ಲಿದೆ. ನಿಮ್ಮ ಹೊಸ ಸಂಶೋದನೆ ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿ, ಮತ್ತು ಸುಧಾರಿತ ಜೀವನ ಮಟ್ಟವನ್ನು ಸಾಧಿಸಲು ಸಂಶೋಧನೆ ಸಹಾಯ ಮಾಡುತ್ತದೆ. ಕೃತಕ ಬುದ್ಧಿಮತ್ತೆ, ಜೈವಿಕ ತಂತ್ರಜ್ಞಾನ, ಇಂಧನ ಭದ್ರತೆ, ಅಂತರಿಕ್ಷ ತಂತ್ರಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆಯು ದೇಶದ ಅಭಿವೃದ್ಧಿಗೆ ಕೊಡುಗೆ ಆಗಬೇಕು ಎಂದು ಹೇಳಿದರು.
ನೀವು ಯಶಸ್ವಿನ ಕಡೆಗೆ ಸಾಗಬೇಕಾದರೆ ಇಂಜಿನಿಯರಿಂಗ್ ವಿಷಯದಲ್ಲಿ ನಿಮ್ಮ ಆಯ್ಕೆಯು ನೇರವಾಗಿಬೇಕು. ಅದೇ ಮುಂದಿನ ದಿನಗಳಲ್ಲಿ ಸಂಶೋಧನೆಗೆ ಬಹಳಷ್ಟು ಸಹಕಾರಿಯಾಗುತ್ತದೆ. ಸಂಶೋಧನಾ ಕ್ಷೇತ್ರದಲ್ಲಿ ಜೈನ್ ಇಂಜಿನಿಯರಿಂಗ್ ಕಾಲೇಜ್ ರಾಷ್ಟ್ರೀಯ- ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಹೆಸರು ಮಾಡಲಿ ಎಂದು ಹಾರೈಸಿದರು.
ಜೆಸಿಇಆರ್‌ನ ಪ್ರಾಚಾರ್ಯ ಮತ್ತು ನಿರ್ದೇಶಕರಾದ ಡಾ. ಎಸ್.ವ್ಹಿ. ಗೋರಬಾಳ ಅವರು ಮಾತನಾಡಿ, ಈಗಿನ ಸ್ಪರ್ಧಾತ್ಮಕ ಹಾಗೂ ವೈಜ್ಞಾನಿಕ ಯುಗದಲ್ಲಿ ಹೊಸ ಸಂಶೋಧನೆಗಳು ನಡೆಯುತ್ತಿವೆ. ಭಾರತವು ಶಕ್ತಿಶಾಲಿಯಾಗಿ ಬೆಳೆಯಬೇಕಾದರೆ ಎಲ್ಲಾ ಕ್ಷೇತ್ರಕ್ಕೂ ಹೊಸ ಸಂಶೋದನೆ ಒಂದೇ ದಾರಿ. ಹೀಗಾಗಿ ವಿದ್ಯಾರ್ಥಿಗಳು ದೇಶದ ಅಭಿವೃದ್ಧಿ ಗುರಿಯಾಗಿಟ್ಟುಕೊಂಡು ಹೊಸ ಹೊಸ ಸಂಶೋಧನೆಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಸಬೇಕಿದೆ ಎಂದು ತಿಳಿಸಿದರು.
ಭಾರತ ಸಂಪದ್ಭರಿತ ದೇಶ. ನಮ್ಮಲ್ಲಿ ನೈಸರ್ಗಿಕ ಹಾಗೂ ಮಾನವ ಸಂಪನ್ಮೂಲ ನಮ್ಮಲ್ಲಿ ಅಗಾಧವಾಗಿದೆ. ಅದಕ್ಕೆ ಮುಖ್ಯವಾದ ಸಂಶೋಧಗಳನ್ನು ಕಂಡು ಹಿಡಿದಾಗ ದೇಶದ ಪ್ರಗತಿಗೆ ಮತ್ತಷ್ಟು ಸಹಕಾರಿ ಎನ್ನುತ್ತ. ಜೈನ್ ಕಾಲೇಜ್ ವಿದ್ಯಾರ್ಥಿಗಳು ರಾಷ್ಟ್ರೀಯ ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು ಹಲವಾರು ಪ್ರಶಸ್ತಿಗೆ ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಶೋದನಾ ಸ್ಪರ್ಧೆಯಲ್ಲಿ ಬಾಗಿಯಾಗಿ ಕಾಲೇಜ ಕೀರ್ತಿ ಹೆಚ್ಚಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಸಿಇಆರ್‌ನ ಪ್ರಾಚಾರ್ಯ ಮತ್ತು ನಿರ್ದೇಶಕರಾದ ಡಾ. ಎಸ್.ವ್ಹಿ. ಗೋರಬಾಳ, ಜೈನ್ ಗ್ರುಪ್ ನಿರ್ದೇಶಕರಾದ ಆರ್. ದಾರವಾಡಕರ್ ಅವರು ಅಧ್ಯಕ್ಷತೆ ವಹಿಸಿದರು. ಡಾ. ಪ್ರಕಾಶ ಸೋನವಾಲಕರ, ಕಾರ್ತೀಕ್ ರಾಮದುರ್ಗ, ರಾಘವೇಂದ್ರ ಕಟಗಲ್ಲ, ರಾಹುಲ್ ಬನ್ನೂರ್, ಸಾಕ್ಷಿ ಹತ್ತಿ, ಸಂಭವ ಕೊಚರಿ ಹಾಗೂ ಕಾಲೇಜ್ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

r5z8vb