ಬೆಳಗಾವಿ-10: ಬೆಳಗಾವಿ ನಗರದ ಜೈನ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಸಂಶೋಧನಾ (ಜೆಸಿಇಆರ್) ಕಾಲೇಜ ಕ್ಯಾಂಪಸ್‌ನ ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಇದೇ ನವೆಂಬರ್ 12 , 13 ರಂದು ಎರಡು ದಿನಗಳ ಕಾಲ ರಾಷ್ಟ್ರೀಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಸವಿಷ್ಕಾರ್ ಉತ್ಸವವನ್ನು ಆಯೋಜಿಸಲಾಗಿದೆ ಎಂದು ಜೆಸಿಇಆರ್‌ನ ಪ್ರಾಚಾರ್ಯ ಮತ್ತು ನಿರ್ದೇಶಕರಾದ ಡಾ. ಎಸ್.ವಿ. ಗೋರಬಾಳ ಅವರು ಹೇಳಿದರು.
ನಗರದ ಉದ್ಯಮಬಾಗ ಜೈನ್ ಇಂಜಿನಿಯರಿಂಗ್ ಅಂಡ್ ರಿಸರ್ಚ್ ಕಾಲೇಜನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಈ ಕಾಲೇಜನಲ್ಲಿ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ಈ ಉತ್ಸವಕ್ಕೆ ದೇಶದ ವಿವಿಧ ಕಾಲೇಜ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ. ತಮ್ಮ ತಾಂತ್ರಿಕ ಪರಿಣತಿ, ಸೃಜನಶೀಲತೆ ಮತ್ತು ಸಾಂಸ್ಕೃತಿಕ ಪ್ರತಿಭೆಯುಳ್ಳ ವಿದ್ಯಾರ್ಥಿಗಳಿಂದ 30 ಕ್ಕೂ ಹೆಚ್ಚು ಮನಮೋಹಕ
ಕಾರ್ಯಕ್ರಮಗಳು ನಡೆಯಲಿವೆ.
ಈ ಸಮಾರಂಭವನ್ನು ಬೆಳಗಾವಿಯ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತರಾದ ಎನ್.ವಿ. ಭರಮಣಿ ಉದ್ಘಾಟಿಸಲಿದ್ದಾರೆ. ಜೆಸಿಇಆರ್‌ನ ಪ್ರಾಂಶುಪಾಲರು ಮತ್ತು ನಿರ್ದೇಶಕರಾದ ಡಾ. ಎಸ್.ವಿ. ಗೋರಬಾಳ ಅಧ್ಯಕ್ಷತೆ ವಹಿಸಲಿದ್ದಾರೆ.
ಸವಿಷ್ಕಾರ್ 2025ರ ರೋಬೋ ರೇಸ್, ಕೋಡ್ ಬ್ರೇಕ್ ಮತ್ತು ಪೇಪರ್ ಪ್ರಜಂಟೇಶನ್ ನಂತಹ ವೈವಿಧ್ಯಮಯ ತಾಂತ್ರಿಕ ಸ್ಪರ್ಧೆ, ಕ್ರೀಡಾಭಿಮಾನಿಗಳಾಗಿ ಕ್ರಿಕೆಟ್ ಸೇರಿದಂತೆ ಟ್ರೆಜ್‌ರ ಹಂಟ್, ಮಾಕ್ ಸಿಐಡಿ ಮತ್ತು ಕಾರ್ಪೊರೇಟ್ ಕಾರ್ನೀವಲ್ ಜರುಗಲಿವೆ. ತಾಂತ್ರಿಕೇತರ ಕಾರ್ಯಕ್ರಮಗಳನ್ನು ನಡೆಯಲಿವೆ. ಉತ್ಸವದಲ್ಲಿ ರ್ಯಾಂಪ್ ವಾಕ್, ಸೋಲೋ ಮತ್ತು ನೃತ್ಯಗಳು ಮತ್ತು ಗಾಯನ ಸ್ಪರ್ಧೆಗಳು ಜರುಗಲಿವೆ.
ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಾಲೇಜ ತಂಡವೂ ಜನರಲ್ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಮುಡಿಗೇರಿಕೊಳ್ಳಲಿದ್ದಾರೆ ಎಂದು ಹೇಳಿದರು.
ಈ ಭಾಗದ ವಿದ್ಯಾರ್ಥಿಗಳಿಗೆ ಉನ್ನತ್ ಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಇಂಜಿನಿಯರಿಂಗ್ ಕಾಲೇಜ ಜೊತೆ ಎಂ.ಬಿ.ಎ ಕಾಲೇಜ್ ಪ್ರಾರಂಭಿಸಲಾಗಿದೆ ಎಂದು ಡಾ. ಎಸ್.ವಿ. ಗೋರಬಾಳ
ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೊ. ಪ್ರಕಾಶ ಸೋವಾಲ್ಕರ್
ಕಾರ್ತೀಕ್ ರಾಮದುರ್ಗ, ರಾಘವೇಂದ್ರ ಕಟಗಲ್ಲ, ಹಾಗೂ ಇತರರು ಉಪಸ್ಥಿತರಿದ್ದರು.
