11/12/2025
IMG-20251109-WA0006

ಬೆಳಗಾವಿ-09 : ರಾಜ್ಯ ಸರಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪಡೆದಿರುವ ರಂಗಸೃಷ್ಟಿಯ ಪದಾಧಿಕಾರಿಗಳನ್ನು ಭಾನುವಾರ ಸನ್ಮಾನಿಸಲಾಯಿತು.

ಟಿಳಕವಾಡಿಯ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಂಗಸೃಷ್ಟಿಯ ಸದಸ್ಯರು ಹಾಗೂ ಕಲಾವಿದರ ಬಳಗದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಿವೃತ್ತ ಎಂಜಿನಿಯರ್ ರಮೇಶ ಜಂಗಲ್, ಸಾಹಿತಿ, ನಿರ್ದೇಶಕ ಶಿರೀಷ್ ಜೋಶಿ, ಹಿರಿಯ ಸಾಹಿತಿ ರಾಮಕೃಷ್ಣ ಮರಾಠೆ ಹಾಗೂ ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಕುರಿತು ಸಾಹಿತಿ ಪಿ.ಜೆ.ಕೆಂಪಣ್ಣವರ್ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಸಾಮಾಜಿಕ ಮುಂದಾಳು ಶೈಲಜಾ ಭಿಂಗೆ ಸೇರಿದಂತೆ ರಂಗಸೃಷ್ಟಿಯ ಎಲ್ಲ ಪದಾಧಿಕಾರಿಗಳು, ಕಲಾವಿದರು ಹಾಜರಿದ್ದರು.

error: Content is protected !!