ಲಿಂ, ಅಪ್ಪಾಸಾಹೇಬ ಕಮತೆಯವರ ಸ್ಮರಣಾರ್ಥ
ಬೆಳಗಾವಿ ದಿನಾಂಕ 9,11,2025 ರಂದು
ಲಿಂಗಕೈ, ಅಪ್ಪಾಸಾಹೇಬ ಕಮತೆಯವರ ಸ್ಮರಣಾರ್ಥವಾಗಿ ವಾರದ ಸತ್ಸಂಗದ ಕಾರ್ಯಕ್ರಮ ನೆರವೇರಿತು
ಕಂಗಳು ತುಂಬಿದ ಬಳಿಕ ನೋಡಲಿಲ್ಲ
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ
ಮನವು ತುಂಬಿದ ಬಳಿಕ ನೆನೆಯಲಿಲ್ಲ
ನಮ್ಮ ಮಹಾಂತ ಕೊಡಲಸಂಗಮ
ದೇವನ
ಎಂಬಂತೆ ಶರಣ ಅಪ್ಪಾಸಾಹೇಬ ಕಮತೆಯವರು ಒಬ್ಬ ಪರಿಪೂರ್ಣ ಶರಣರಾಗಿದ್ದರು ಇವರು ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕರಾಗಿದ್ದರು, ಇವರು ಪೋಲಿಸ್ ಆಡಳಿತ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು ಇದು ಇವರ ಎರಡನೇ ಪುಣ್ಯ ಸ್ಮರಣೆಯಾಗಿದ್ದು ಸೌಮ್ಯ ಸ್ವಭಾವದ ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು ಹಿರಿ, ಕಿರಿಯರನ್ನದೆ ಎಲ್ಲರೋಡನೆ ಸಮಾನ ಮನಸ್ಸಿನಿಂದ ಬೇರೆಯುತ್ತಿದ್ದರು ಎಲ್ಲರನ್ನು ಹಾಸ್ಯ ಚಟಾಕೆಯಿಂದ ನಗೆಸುತ್ತ ಸದಾ ನಗು ನಗುತ್ತಾ ಇರಬೇಕೆಂದು ಬಯುಸುತ್ತಿದ್ದರು ಏನೇ ಕಷ್ಟ ಬಂದರೂ ಸದಾ ನಗುತ್ತಾ ಬಾಳಿದ ಅಪ್ಪಾಸಾಹೇಬ ಕಮತೆಯವರು ನಮಗೆಲ್ಲ ಮಾದರಿ ಎಂದು ಅಧ್ಯಕ್ಷರು ಎಸ್ ಜಿ ಸಿದ್ನಾಳರು ಅವರನ್ನು ಸ್ಮರಿಸಿಕೊಂಡರು.
ಶರಣೆ ಸುನಿತಾ ನಂದೆಣ್ಣವರ ಅವರು ಅಪ್ಪಾಸಾಹೇಬ ಕಮತೆಯವರು ಅಂತಃಕರಣವುಳ್ಳ
ವ್ಯಕ್ತಯಾಗಿದ್ದರು ತಮಗೆ ಉಪನ್ಯಾಸ ನೀಡಲು ಅವಕಾಶ ಕೊಟ್ಟು ತಮ್ಮನ್ನು ಪ್ರೂತ್ಸಾಹಿಸುವ ಕೆಲಸವನ್ನು ಮಾಡಿದರು ಎಲ್ಲರಿಗೂ ಮೊದಲು ತಾವೇ ವಿನಯದಿಂದ ಶರಣಾರ್ಥಿಗಳನ್ನು ಹೇಳುತ್ತಿದ್ದರು ತಾವೇ ಮೊದಲು ಮಾತನಾಡಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಹೀಗಾಗಿ ಎಲ್ಲರ ಹೃದಯದಲ್ಲಿ ಅವರು ನೆಲೆಸಿದ್ದಾರೆ ಎಂದು ನೆನಸಿಕೊಂಡರು.ಹಾಗೆ ಇವತ್ತಿನ ಉಪನ್ಯಾಸ ಅಲ್ಲಮರ ಗುರು ಅನಿಮಿಷರ ಕುರಿತು ಹೇಳುತ್ತಾ ಅನಿಮಿಷರು ಚಾಲುಕ್ಯ ರಾಜನಾದ ತ್ರೈಲೋಕ್ಯ ಚೋಡಾಮಣಿ ಮತ್ತು ಮಹರ್ಲೊಕಿ ಅವರ ಉದರದಲ್ಲಿ ಜನಿಸಿದ ಪುತ್ರ ವಸುದೀಶ ಹನ್ನೆರಡನೇ ಶತಮಾನದಲ್ಲಿ,ಬಸವಣ್ಣವರ ಪ್ರಭಾವಕ್ಕೆ ಒಳಗಾಗಿ ಅವರಿಂದ ಲಿಂಗ ದೀಕ್ಷೆ ಪಡೆದು ರಾಜ್ಯ ತೊರೆದು ಗೊಗ್ಗಯ್ಯನ ತೋಟದ ಗುಹೆಯೊಂದರಲ್ಲಿ ಲಿಂಗಾಂಗ ಸಾಮರಸ್ಯದಲ್ಲಿ ನಿರತರಾದರು ಗುರುವನ್ನು ಅರಸುತ್ತಾ ಬಂದ ಅಲ್ಲಮರು ಅರೆಗಣ್ಣಿನಿಂದ ಲಿಂಗವನ್ನು ನೋಡುತ್ತಾ ದೃಷ್ಟಿ, ಮನಸ್ಸು, ಮತ್ತು ಪ್ರಾಣವನ್ನು ಲಿಂಗದಲ್ಲಿ ಬೆರೆಸಿದ ಪೂಜ್ಯರನ್ನು ನೋಡಿ ಮಾತನಾಡಿಸಿದಾಗ ಅವರಿಂದ ಏನೂ ಉತ್ತರಬಾರದಿದ್ದಾಗ ಆ ಲಿಂಗವನ್ನು ತೆಗೆದು ಕೊಂಡುರು ಆಗ ಅವರಲ್ಲಾದ ಅದ್ಭುತವಾದ ಶಕ್ತಿ ಸಂಚಾರ ಅವರನ್ನು ಆವರಿಸಿ ಮೈ ರೋಮಾಂಚನ ಗೊಂಡು ಇವರು ನನ್ನ ಅನಿಮಿಷ ಗುರುಗಳು ಎಂದು ಕರೆದರು. ಅನಿಮಿಷರ ಜೀವನ ಚರಿತ್ರೆಯನ್ನು ಸವಿವರವಾಗಿ ತಿಳಿಸಿದರು
ಶಂಕರ ಶೆಟ್ಟಿ, ದುಂಡಪ್ಪಾ ಸಂಕೇಶ್ವರ, ಮಹಾದೇವ ಕೊರೆ , ಕಟ್ಟಿಮನಿಯವರು ಹಾಗೂ ವಿಜಯಾ ಅಮ್ಮಣಿಗಿ ಅವರು ಅಪ್ಪಾಸಾಹೇಬ ಕಮತೆಯವರ ತಮ್ಮ ಜೊತೆಗೆ ಆದ ಅವರ ಅನುಭವಗಳು ಹಂಚಿಕೊಂಡರು.ಲಲಿತಾ ರುದ್ರಗೌಡರ, ತ್ರಿವೇಣಿ ಪಾಟಿಲ್ ಶೋಭಾ ಶಿವಳ್ಳಿ ವಚನ ಪ್ರಾರ್ಥನೆ ಮತ್ತು ವಚನ ಗಾಯನ ಮಾಡಿದರು ಕಟ್ಟಿಮನಿಯವರು ನಿರೂಪಣೆ ಮಾಡಿದರು, ಅಪ್ಪಾಸಾಹೇಬ ಕಮತೆಯವರ ಧರ್ಮ ಪತ್ನಿಯಾದ ಶರಣೆ ಶೋಭಾ ಕಮತೆ ಮತ್ತು ಅವರ ಪುತ್ರ ಡಾ, ಕಮತೆಯವರು ಪ್ರಸಾದದ ವ್ಯವಸ್ಥೆ ಮಾಡಿದ್ದರು ಎಲ್ಲ ಶರಣ ಶರಣೆಯರು ಹಾಜರಿದ್ದರು.
