ಎಐಪಿಸಿ ರಜತ ಮಹೋತ್ಸವ ವರ್ಷಾಚರಣೆ ಸಂಭ್ರಮ ಗೌಹಾತಿ ಅಸ್ಸಾಂ. ಅಖಿಲ ಭಾರತ ಕವಯತ್ರಿಯರ 25 ನೇ ಸಮ್ಮೇಳನ ಉತ್ತರ ಈಶಾನ್ಯ ರಾಜ್ಯ ಅಸ್ಸಾಂನ ಗೌಹಾತಿಯಲ್ಲಿ ಇದೇ ನವೆಂಬರ್ 21-22-23 ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.ಬೆಳಗಾವಿಯಿಂದ 25 ಎಐಪಿಸಿ ಕವಯತ್ರಿಯರು ಭಾಗವಹಿಸುತ್ತಿರುವುದು ವಿಶೇಷ. ಮೂರುದಿನಗಳ ಸಮ್ಮೇಳನದಲ್ಲಿ ಸಂಶೋಧನಾ ಪ್ರಬಂಧ ಮಂಡನೆ, ಬಹುಭಾಷಾ ಕವಿಗೋಷ್ಠಿ, ಕನ್ನಡ ಭಾಷಾ ಕವಿಗೋಷ್ಠಿ,80 ಕ್ಕಿಂತ ಹೆಚ್ಚು ಪ್ರಶಸ್ತಿಗಳು ಮತ್ತು ಸಹೋದರಿ ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಅಸ್ಸಾಂ ರಾಜ್ಯದ ರಾಜ್ಯಪಾಲರು , ಮುಖ್ಯಮಂತ್ರಿಗಳು ಹಾಗು ಇತರೆ ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದು,ದೇಶದ ಮೂಲೆ ಮೂಲೆಗಳಿಂದ ಎಲ್ಲಾ ರಾಜ್ಯದ ಎಏಪಿಸಿ ಸಹೋದರಿಯರು ಈ ಅಪರೂಪದ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.ಬೆಳಗಾವಿಯಿಂದ ಎಐಪಿಸಿಯ ರಾಷ್ಟ್ರೀಯ ಉಪಾಧ್ಯಕ್ಷೆ ಜ್ಯೋತಿ ಬದಾಮಿ, ಸಮಿತಿ ಸದಸ್ಯೆ ಶೈಲಜಾ ಕುಲಕರ್ಣಿ, ರಾಜನಂದಾ ಗಾರ್ಗಿ,ಹಿರಿಯ ಸದಸ್ಯೆ ಸುನಂದಾ ಮುಳೆ, ಶಕುಂತಲಾ ಬಾಳೆಕುಂದ್ರಿ,ಸುಧಾ ಪಾಟೀಲ, ಜ್ಯೋತಿ ಕತ್ತಿ, ಹೀರಾ ಚೌಗುಲೆ , ಗಿರಿಜಾ ಮುಳುಗುಂದ,ಜ್ಯೋತಿ ಮಾಳಿ,ಲಲಿತಾ ಪರ್ವತರಾವ್,ಲಲಿತಾ ಪರ್ವತರಾವ್, ಪ್ರೇಮಾ ಪಾನಶೆಟ್ಟಿ ಹಾಗು ಮುಂತಾದವರು ಬೆಳಗಾವಿ ಎಐಪಿಸಿ ಸದಸ್ಯೆ ಯರು ಗೌಹಾತಿ ಸಮ್ಮೇಳನದಲ್ಲಿ ಭಾಗವಹಿಸಲು ಉತ್ಸಾಹದಿಂದ ಪ್ರಯಾಣ ಬೆಳೆಸುತ್ತಿದ್ದಾರೆ.ಸಮ್ಮೇಳನದಲ್ಲಿ ತಮ್ಮ ಸಾಹಿತ್ಯ, ಸಾಂಸ್ಕೃತಿಕ ಕಲೆ, ನೃತ್ಯ,ಸಂಗೀತ , ಕಾವ್ಯ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.ಅವರ ಪ್ರಯಣ ಸುಖಕರವಾಗಿರಲಿ ಎಂದು ಎಐಪಿಸಿ ಸದಸ್ಯರು ಹಾರೈಸಿದ್ದಾರೆ.
