ಬೆಳಗಾವಿ-09: ಕಬ್ಬಿನ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಗುರ್ಲಾಪುರದಲ್ಲಿ, ಒಂಬತ್ತು ದಿನಗಳ ಕಾಲ ನಿರಂತರ ಅಹೋರಾತ್ರಿ ಹೋರಾಟ ಮಾಡಿದ ರೈತರಿಗೆ ಜಯ ಸಿಕ್ಕಿರುವುದರಿಂದ ಕರವೇ ಕಾರ್ಯಕರ್ತರಿಂದ ಸಂಭ್ರಮಾಚರಣೆ.
ಶನಿವಾರ ನಗರದ ಚನ್ನಮ್ಮ ವೃತ್ತದಲ್ಲಿ ಕರವೇ ನಾರಾಯಣಗೌಡ ಬಣದ ಜಿಲಾಧ್ಯಕ್ಷ ದೀಪಕ್ ಗುಡ್ಡಗನಟ್ಟಿ ನೇತ್ರತ್ವದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ರೈತಾಪಿ ವರ್ಗ ಕಳೆದ ಒಂಬತ್ತು ದಿನಗಳಿಂದ ಪ್ರತಿ ಟನ್ ಗೆ 3500 ರೂ ನೀಡುವಂತೆ ಆಗ್ರಹಸಿ
ನಿರಂತರವಾಗಿ ಅಹೋರಾತ್ರಿ ಹೋರಾಟ ನಡೆಸಲಾಗಿತ್ತು. ರೈತ ಹೋರಾಟದ ಬಿಸಿ ಸರಕಾರಕ್ಕೆ ಮುಟ್ಟಿರುವುದರಿಂದ ಸರಕಾರದ ಪ್ರತಿನಿಧಿ ಸಕ್ಕರೆ ಸಚಿವ ಶಿವಾನಂದ ಪಾಟೀಲ ಗುರ್ಲಾಪುರದಲ್ಲಿ ಪ್ರತಿಭಟನಾ ನಿರತ ರೈತರನ್ನು ಬೇಟಿ ಮಾಡಿ ಸಭೆ ಮಾಡಲಾಗಿತ್ತು, ರೈತರ ಬೇಟಿಕೆಯನ್ನು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಬೆಂಬಲ ಬೆಲೆ ನಿಗದಿ ಮಾಡಲಾಗುವುದು ಎಂದು ಕಾಲಾವಕಾಶ ಕೇಳಿದ್ದರು. ಅದರ ಪ್ರಕಾರ ಮುಖ್ಯಮಂತ್ರಿಗಳ ನೇತ್ರತ್ವದಲ್ಲಿ ಕಾರ್ಖಾನೆಗಳ ಮಾಲಿಕರೊಂದಿಗೆ ಸಭೆ ನಡೆಸಿ,ಪ್ರತಿ ಟನ್ ಕಬ್ಬಿಗೆ 3300 ದರ ನಿಗದಿ ಮಾಡಿರುವುದರಿಂದ ರೈತರ ಹೋರಾಟಕ್ಕೆ ಜಯ ಸಿಕ್ಕಿದೆ, ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಸಂಭ್ರಮಾಚರಣೆಮಾಡಲಾಯಿತು.
ಈ ವೇಳೆ ಕರವೇ ಜಿಲ್ಲಾ ಅಧ್ಯಕ್ಷ ದೀಪಕ್ ಗುಡಗನಟ್ಟಿ, ಸುರೇಶ್ ಗವನ್ನವರ,ಗಣೇಶ ರೋಕಡೆ, ರಮೇಶ ಯರಗಣ್ಣವರ ಪದಾಧಿಕಾರಿಗಳು, ಕಾರ್ಯಕ್ರಕರ್ತರು, ಸೇರಿದಂತೆ ಮತ್ತಿತ್ತರರು ಹಾಜರಿದ್ದರು.
