ಬೆಳಗಾವಿ-28 : ನ.೧ ರಂದು ಕರ್ನಾಟಕ ರಾಜ್ಯೋತ್ಸವ ದಿನದಂದು ನಗರದ ಛತ್ರಪತಿ ಶಿವಾಜಿ ಮಹಾರಾಜರ ಉದ್ಯಾನದಿಂದ ಮೆರವಣಿಗೆಗೆ ಅವಕಾಶ ನೀಡಬೇಕೆಂದು ಕರವೇ ಪೊಲೀಸ್ ಆಯುಕ್ತರಿಗೆ ಮನವಿ ನಲ್ಲಿಸಿದರು.

ಮಂಗಳವಾರ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪೊಲೀಸ್ ಆಯುಕ್ತರ ಕಛೇರಿಗೆ ಬೇಟಿ ನೀಡಿ ಆಯುಕ್ತರಾದ ಭೂಷಣ ಗುಲಾಬರಾವ್ ಬೊರಸೆ ಅವರೊಂದಿಗೆ ರಾಜ್ಯೋತ್ಸವ ಬಗ್ಗೆ ಚರ್ಚಿಸಲಾಯಿತು.
ಈ ಬಾರಿ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ನ.೧ ರಂದು ಛತ್ರಪತಿ ಶಿವಾಜಿ ಮಹಾರಾಜರ ಉದ್ಯಾನದಲ್ಲಿ ಶಿವಾಜಿ ಮಹಾರಾಜರ ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಮೂಲಕ ರಾಜ್ಯೋತ್ಸವದ ಮೆರವಣಿಗೆ ಪ್ರಾರಂಭಿಸಬೇಕೆಂದು ಕನ್ನಡಪರ ಸಂಘಟನೆಗಳು ಅಭಿಪ್ರಾಯ ವ್ಯಕ್ತಪಡಿಸಿವೆ, ಅದೇ ಮಾರ್ಗವಾಗಿ ಮೆರವಣಿಗೆ ಪ್ರಾರಂಭವಾಗಿ, ಶನಿಮಂದಿರ ನ್ಯೂಕ್ಲಿಯಸ್ಮಾಲ್, ಮಾರ್ಗದ ಮೂಲಕ ತೆರಳಿ ಚನ್ನಮ್ಮ ವೃತ್ತಕ್ಕೆ ಸೇರಲಿದೆ. ರಾಜ್ಯೋತ್ಸವ ಮೆರವಣಿಗೆ ನಡೆಸಲು ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಹಟ್ಟಿ, ಸಂಘಟನೆಯ ಕಾರ್ಯದರ್ಶಿಗಳು ಸಹ ಸಂಚಾಲಕರು, ಕಾರ್ಯಕರ್ತರು, ಮತ್ತಿತ್ತರರು ಹಾಜರಿದ್ದರು.
