ಬೆಳಗಾವಿ-23 : ಗ್ರಾಮೀಣ ಭಾಗಗಳಲ್ಲಿ ಹಿಂದೂ ಹಬ್ಬಗಳನ್ನು ವಿಷೇಶವಾಗಿ ಆಚರಣೆ ಮಾಡಲಾಗುತ್ತದೆ. ಎತ್ತು, ಎಮ್ಮೆ, ಕೋಣಗಳ ಓಟ ಆಯೋಜಿಸುವುದು ಸರ್ವೆ ಸಾಮಾನ್ಯವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಹಲವು ದಶಕಗಳಿಂದ
ದೀಪಾವಳಿ ಹಬ್ಬದ ಗುಡಿ ಪಾಡವಾ ದಿನ ಎಮ್ಮೆಗಳನ್ನು ಬೆದರಿಸುವ ವಿಶಿಷ್ಟ ಆಚರಣೆಯಾಗಿ ಮಾಡಿಕೊಂಡು ಬರುತ್ತಿದ್ದಾರೆ. ನಗರದ ಗೌಳಿ ಗಲ್ಲಿ, ಹಾಗೂ ಚವ್ಹಾಟ ಗಲ್ಲಿಯಲ್ಲಿ ಎಮ್ಮೆಗಳಿಗೆ ಮದುವಣಗಿತ್ತಿಯಂತೆ ಸಿಂಗಾರಗೊಳ್ಳಿಸಿ ಅವುಗಳನ್ನು ಓಡಿಸಿದ ದೃಶ್ಯ ನೋಡುಗರ ಮೈಜುಮ್ಮೆನ್ನುವಂತೆ ಮಾಡಿದೆ. ಎಮ್ಮೆಗಳ ಜೊತೆಗಿನ ಯುವಕರ ಸಾಹಸ ಮೈನವಿರೇಳಿಸಿದ್ದು, ಎಮ್ಮೆಗಳ ವೈಯಾರ, ಶೃಂಗಾರಕ್ಕೆ ಜನ ಫುಲ್ ಫಿದಾ ಆದರು.

ಎಮ್ಮೆ ರೈತರ ಪಾಲಿನ ನಿಜವಾದ ಲಕ್ಷ್ಮೀ ದೇವಿ. ವರ್ಷಪೂರ್ತಿ ಎಮ್ಮೆಗಳನ್ನು ಚೆನ್ನಾಗಿ ಮೇಯಿಸಿ, ಹಾಲು ಕರೆದು ಮಾರಾಟ ಮಾಡಿ ಬದುಕು ಕಟ್ಟಿಕೊಳ್ಳಲುತ್ತಿರುವ ಇಲ್ಲಿನ ಗೌಳಿ ಜನಾಂಗವು.
ದೀಪಾವಳಿ ಬಂತೆಂದರೆ ಎಮ್ಮೆಗಳನ್ನು ಮುದುವನಗಿತ್ತಿಯಂದೆ ಸಿಂಗರಿಸಲಾಗುತ್ತದೆ. ಈ ರೀತಿಯ ದೀಪಾವಳಿ ಹಬ್ಬವನ್ನು ತಮ್ಮ ಪೂರ್ವಜರ ಕಾಲದಿಂದಲೂ ಆಚರಣೆ ಮಾಡೊಕೊಂಡು ಬರುತ್ತಿದ್ದಾರೆ.
ದೀಪಾವಳಿ ಹಬ್ಬದ ಒಂದು ವಾರದ ಮುಚ್ಚಿತವಾಗಿಯೇ ಎಮ್ಮೆ, ಎತ್ತುಗಳಿಗೆ ಸಿಂಗಾರ ಮಾಡುವ ಕೆಲಸದಲ್ಲಿ ಗೌಳಿ ಜನತೆಯ ಯುವಕರು ಬೀಜಿಯಾಗಿರುತ್ತಾರೆ. ಎಮ್ಮೆಗಳಿಗೂ ಸ್ಟೈಲಿಶ್ ಆಗಿ ಹೇರ್ ಕಟಿಂಗ್ ಮಾಡಿಸುತ್ತಾರೆ. ಮೈಗೆ ಬಣ್ಣದ ಚಿತ್ರಗಳನ್ನು ಬಿಡಿಸಿ, ನೋಡುಗರ ಕಣ್ಣುಗಳಿಗೆ ಕುಕ್ಕೂವಂತೆ ಸಿಂಗಾರ ಮಾಡಿ, ಮುಖಕ್ಕೆ ಮುಖವಾಡ, ಕವಡಿಯಿಂದ ತಯಾರಿಸಿದ್ದ ಸರ, ಗೆಜ್ಜೆ, ಗಂಟೆ, ಹಂಗಡ ಕಟ್ಟಿ, ಬಣ್ಣ ಬಳಿದಿದ್ದ ಕೋಡುಗಳಿಗೆ ನವಿಲು ಗರಿ, ಬೆಳ್ಳಿಯ ಕಳಸ ಕೂಡ ಧರಿಸಿದ್ದು ಎಲ್ಲರ ಗಮನ ಸೆಳೆಯಿತು.
ಬೈಕ್ಗಳ ಸೈಲೆನ್ಸರ್ ತೆಗೆದು ಕರ್ಕಶ ಶಬ್ಧ ಮಾಡುತ್ತಾ ಕೆಲ ಯುವಕರು ವೇಗವಾಗಿ ಬೈಕ್ ಓಡಿಸಿದರೆ, ಎಮ್ಮೆಗಳು ಅವರ ಹಿಂದೆ ಓಡಿ ಬರುತ್ತಿದ್ದ ದೃಶ್ಯ ನೋಡುಗರ ಮೈನವಿರೇಳಿಸುವಂತೆ ಮಾಡಿತು. ಇನ್ನು ಕೆಲ ಯುವಕರು ಎಮ್ಮೆಗಳ ಮುಖಕ್ಕೆ ಕಂಬಳಿ ನೆವರಿಸುತ್ತಿದ್ದರು. ಇದರಿಂದ ಅವು ಮತ್ತಷ್ಟು ಕೋಪಗೊಂಡು ಓಡುತ್ತಿದ್ದವು. ಎಮ್ಮೆಗಳ ರೋಷಾವೇಷದ ಈ ದೃಶ್ಯಗಳನ್ನು ಮಕ್ಕಳು, ಯುವಕ-ಯುವತಿಯರು, ಮಹಿಳೆಯರು ಸಖತ್ ಎಂಜಾಯ್ ಮಾಡಿದರು.
ಎಮ್ಮೆಗಳು ಓಡುವುದನ್ನು ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಆದರೆ, ಎಮ್ಮೆಗಳು ಯಾವೊಬ್ಬರ ಮೇಲೂ ದಾಳಿ ಮಾಡಲಿಲ್ಲ. ಯಾಕೆಂದರೆ ಎಮ್ಮೆಗಳು ತನ್ನ ಮಾಲೀಕನ ಅಣತಿಯಂತೆ ಓಡಾಡುತ್ತವೆ. ಇಷ್ಟು ವರ್ಷಗಳಲ್ಲಿ ಯಾರಿಗೂ ಸಣ್ಣ ಗಾಯ ಗೋಳಿಸಿರುವ ಉದಾಹರಣೆಯು ಇಲ್ಲ ಎನ್ನುತ್ತಾರೆ ಸ್ಥಳೀಯರು.

ನಾವೆಲ್ಲಾ ಹೇಗೆ ಹೊಸ ಬಟ್ಟೆ ಧರಿಸಿ ದೀಪಾವಳಿ ಆಚರಿಸುತ್ತೇವೋ, ಅದೇ ರೀತಿ ಎಮ್ಮೆಗಳಿಗೂ ಈ ದಿನ ರೈತಾಪಿ ವರ್ಗ ಸುಂದರವಾಗಿ ಅಲಂಕರಿಸಿ ಸಂತಸ ಪಡುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಭಾರತೀಯ ಸಂಸ್ಕೃತಿ ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿದ್ದಾರೆ.
ಮನೆಯ ಅರ್ಧ ಖರ್ಚನ್ನು ಒಂದು ಎಮ್ಮೆ ನಿಭಾಯಿಸುತ್ತದೆ. ಎಮ್ಮೆ ಮತ್ತು ರೈತರಿಗೂ ಅವಿನಾಭಾವ ಸಂಬಂಧವಿದೆ.
ಬಿಜೆಪಿ ಮಾಜಿ ಶಾಸಕ ಅನಿಲ ಬೆನಕೆ.
ಪ್ರತಿ ವರ್ಷ ದೀಪಾವಳಿ ಹಬ್ಬದ ಒಂದು ವಾರದ ಮೊಚ್ಚೆಯೇ ಎಮ್ಮೆಗಳಿಗೆ ಅಲಂಕಾರ ಮಾಡುವುದಕ್ಕೆ ಪ್ರಾರಂಭ ಮಾಡುತ್ತೇವೆ. ದೀಪಾವಳಿಯ ಗುಡಿವಾಡವಾ ದಿನದಂದು ಎಮ್ಮೆಗಳ ಓಡಿಸುವುತ್ತೇವೆ. ಯಾವ ಎಮ್ಮೆಯು ಹೆಚ್ಚು ಸಿಂಗಾರಕೊಂಡಿರುತ್ತೆ ಹಾಗೂ ಹೆಚ್ಚು ಪ್ರದರ್ಶನ ಮಾಡುತ್ತೆ ಹಂತಹ ಎಮ್ಮೆಗೆ ಬಹುಮಾನ ನೀಡುತ್ತೇವೆ. ಈ ಸಂಪ್ರದಾಯವನ್ನು ಹಲವಾರು ವರ್ಷಗಳಿಂದ ಮಾಡಿಕೊಂಡು ಬತುತ್ತಿದ್ದೇವೆ.
