ಬೆಳಗಾವಿ-18:ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಕನ್ನಡ ಭವನ ಬೆಳಗಾವಿ ಇವರ ಸಹಯೋಗದಲ್ಲಿ ಇಂದಿನಿಂದ ಮೂರು ದಿನ ಆಯ್ದ ನಾಟಕಗಳ ಪ್ರದರ್ಶನ ಆರಂಭವಾಯಿತು.
ಅಕ್ಟೋಬರ್ 18,19,20ರಂದು ಮೂರು ದಿನ ನಗರದ ನೆಹರು ನಗರ ರಾಮದೇವ ಹೊಟೆಲ್ ಬಳಿ ಕನ್ನಡ ಭವನದಲ್ಲಿ ನಡೆಯಲಿದೆ.
ಕರ್ನಾಟಕ ನಾಟಕ ಅಕಾಡೆಮಿ ಸಹ ಸಂಚಾಲಕ ಬಾಬಾಸಾಹೇಬ ಕಾಂಬಳೆ, ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ಎನ್. ನಮ್ರತಾ, ತೇಜೊಮಯ ಸಂಘದ ಸಂಚಾಲಕ ಅರವಿಂದ ಪಾಟೀಲ, ಕನ್ನಡಭವನ ಕಾರ್ಯದರ್ಶಿ ಯ. ರು. ಪಾಟೀಲ ಹಾಗೂ ಪ್ರೇಕ್ಷಕರು ಇತರರು ಉಪಸ್ಥಿತರಿದ್ದರು.
