ಮೈಸೂರು-18: ರೈತನ ಮೇಲೆ ದಾಳಿ ಮಾಡಿದ್ದ ಹುಲಿ ಸೆರೆ. ಸರಗೂರು ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಸೆರೆ.
ಬಂಡೀಪುರ ಅರಣ್ಯ ವ್ಯಾಪ್ತಿಯ ಯಡಿಯಾಲ ವಲಯದಲ್ಲಿ ಸೆರೆ.
ಸಾಕಾನೆಗಳ ಸಹಾಯದಿಂದ ಅರವಳಿಕೆ ಮದ್ದು ನೀಡಿ ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ.
ಹುಲಿ ಸೆರೆ ಕಾರ್ಯಾಚರಣೆ ವೇಳೆ ರೈತನ ಮೇಲೆ ದಾಳಿ ಮಾಡಿದ್ದ ವ್ಯಾಘ್ರ.
ನೆನ್ನೆಯಿಂದ ಮತ್ತೆ ಹುಲಿ ಸೆರೆ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ.
ಇಂದು ಹುಲಿ ಸೆರೆಹಿಡಿಯುವಲ್ಲಿ ಅರಣ್ಯ ಯಶಸ್ವಿ.
ಹುಲಿ ಸೆರೆಯಿಂದ ನಿಟ್ಟಿಸಿರು ಬಿಟ್ಟ ಗ್ರಾಮಸ್ಥರು.
