ಬೆಳಗಾವಿ-08 : ಕಳೆದ ವರ್ಷ ರಾಜ್ಯ ಸರಕಾರ ನವೆಂಬರ್ 1ರಿಂದ ಶೇಕಡಾ 60% ರಷ್ಟು ಕನ್ನಡ ಫಲಕಗಳು ಬಳಸಬೇಕೆಂದು ಆದೇಶ ಹೊರಡಿಸಿತು.
ಆದರೆ ಬೆಳಗಾವಿ ಮಹಾನಗರ ಪಾಲಿಕೆಯು ರಾಜ್ಯ ಸರಕಾರದ ಆದೇಶ ಗಾಳಿಗೆ ತೂರಿದೆ, ಎಂಬ ಆಕ್ರೋಶವನ್ನು ವ್ಯಕ್ತಪಡಿಸಿದ ಸರ್ವೋದಯ ಸ್ವಯಂ ಸೇವಾ ಸಂಘ ಮತ್ತು ಕನ್ನಡಪರ ಸಂಘಟನೆಯ ಕಾರ್ಯಕರ್ತರು, ಮಹಾನಗರ ಪಾಲಿಕೆಯ ನಡೆ ಖಂಡಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದರು. ಮಹಾನಗರ ಪಾಲಿಕೆಯು ನಗರದ ಜನ ದಟ್ಟನೆಯ ಪ್ರದೇಶಗಳಲ್ಲಿ ಶೇಕಡಾ 60 % ರಷ್ಟು ಕನ್ನಡದ ನಾಮಫಲಕ ಅಳವಡಿಕೆ ಮಾಡಬೇಕಾಗಿತ್ತು. ನಗರಾಧ್ಯಂತ ಎಲ್ಲಿಯೂ ಶೇಕಡಾ 60% ರಷ್ಟು ಕನ್ನಡ ನಾಮಫಲಕಗಳು ಕಾಣುತ್ತಿಲ್ಲ. ಬರುವ ನವಂಬರ್ ಒಂದರ ರೊಳಗಾಗಿಯೇ ನಗರದ ಪ್ರಮುಖ ಸ್ಥಳಗಳಲ್ಲಿ ಕನ್ನಡ ಫಲಕಗಳು ಕಡ್ಡಾಯವಾಗಬೇಕೆಂದು ಪ್ರತಿಭಟನೆಯಲ್ಲಿ ಜಿಲ್ಲಾಡಳಿತದ ಮೂಲಕ ಮಹಾನಗರ
ಪಾಲಿಕೆಗೆ ಆಗ್ರಹಿಸಿದರು. ಒಂದು ವೇಳೆ ನವಂಬರ್ 1ರ ನಂತರವೂ ಶೇಕಡಾ 60% ರಷ್ಟು ಕನ್ನಡ ಫಲಕಗಳು ಕಾಣದೆ ಇದ್ದಲ್ಲಿ ಪಾಲಿಕೆಯ ವಿರುದ್ಧ ಉಗ್ರವಾಗಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
