11/12/2025
IMG-20251008-WA0004

ಬೆಳಗಾವಿ-08 : ಸಕಲ ಮರಾಠಿ ಸಮಾಜ ಬೆಳಗಾವಿ ವತಿಯಿಂದ ಕ್ರೀಡಾ ರಾಜಕೀಯ ಶೈಕ್ಷಣಿಕ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮರಾಠಿ ಸಮುದಾಯದ ಪ್ರತಿಭೆಗಳಿಗೆ ಸಕಲ ಮರಾಠಿ ಸಮಾಜದ ವತಿಯಿಂದ ಸನ್ಮಾನ ಮಾಡುತ್ತಿದ್ದು, ಬರುವ ದಿನಗಳಲ್ಲಿಯೂ ಕೂಡಾ ಸಾಧಕರ ಪ್ರತಿಭೆಗೆ ನಮ್ಮ ಪ್ರೋತ್ಸಾಹ ಇದ್ದೇ ಇರುತ್ತದೆ ಎಂದು ಬಿಜೆಪಿಯ ಪ್ರಮುಖರು ಹಾಗೂ ಸಕಲ ಮರಾಠಾ ಸಮಾಜದ ಸದಸ್ಯರಾದ ಕಿರಣ ಜಾಧವ ಅವರು ಹೇಳಿದ್ದಾರೆ.

ರವಿವಾರ ದಿನಾಂಕ 05/10/2025ರಂದು ನಗರದ ಜತ್ತಿ ಮಠದಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಏರ್ಪಡಿಸಿ ಮಾತನಾಡಿದ ಅವರು, ಮರಾಠಾ ಸಮುದಾಯದಲ್ಲಿ ಹಲವಾರು ಸಾಧಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ, ಅಂತಹ ಮರಾಠಾ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು ನಮ್ಮ “ಸಕಲ ಮರಾಠಾ ಸಮಾಜ ಬೆಳಗಾವಿಯ” ಕರ್ತವ್ಯವಾಗಿದೆ, ಆದ ಕಾರಣ ಇಂದು ಸಮುದಾಯದ ಕೆಲ ಸಾಧಕರಿಗೆ ಸನ್ಮಾನ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಸಕಲ ಮರಾಠಾ ಸಮಾಜ ಬೆಳಗಾವಿಯಲ್ಲಿ ಪ್ರತ್ಯೇಕವಾದ ಕ್ರೀಡಾ ವಿಭಾಗವನ್ನು ರಚಿಸಿದ್ದೇವೆ, ಈ ಹಿಂದೆ ಮರಾಠಿ ಸಮುದಾಯದ ಏಳಿಗೆಗಾಗಿ ಹಲವಾರು ಕಾರ್ಯಗಳನ್ನು ನಮ್ಮ ಸಮಾಜ ಮಾಡುತ್ತಾ ಬಂದಿದ್ದು, ಈಗ ಕ್ರೀಡಾ ಸಾಧಕರಿಗೆ ಒಂದು ಒಳ್ಳೆಯ ವೇದಿಕೆ ಕಲ್ಪಿಸಿ ಕೊಡಲು, ಅದರ ಜೊತೆಗೆ ಬರುವ ದಿನಗಳಲ್ಲಿ ಕರ್ನಾಟಕದಲ್ಲಿ ದೇಶದಲ್ಲಿ ಬೆಳಗಾವಿಯ ಹೆಸರು ಬೆಳಗಿಸಲಿ, ಈಗಾಗಲೇ ಕೆಲ ಪ್ರತಿಭೆಗಳು ಆ ಸಾಧನೆ ಮಾಡಿದ್ದಾರೆ ಅವರಿಗೆ ನಮ್ಮ ಅಭಿನಂದನೆಗಳು ಎಂದಿದ್ದಾರೆ.

ಮರಾಠಾ ಸಮುದಾಯದ ಕೆಲ ಕ್ರೀಡಾ ಪಟುಗಳಿಗೆ ಹಾಗೂ ಬೇರೆ ಕ್ಷೇತ್ರಗಳ ಸಾಧಕರು ಅತೀ ಪರಿಶ್ರಮದಿಂದ ತಮ್ಮ ಕಾರ್ಯ ಮಾಡುತ್ತಾರೆ, ಆದರೆ ಅವರ ಪರಿಶ್ರಮಕ್ಕೆ ಆರ್ಥಿಕ ಅನುಕೂಲವೂ ಬೇಕಾಗಿರುತ್ತದೆ, ಅದಕ್ಕಾಗಿ ನಾನು ನಮ್ಮ ಸಮಾಜಕ್ಕೆ ಮನವಿ ಮಾಡುವೆ, ಬರುವ ದಿನಗಳಲ್ಲಿ ಕ್ರೀಡಾ ಹಾಗೂ ಇತರ ಸಾಧಕರಿಗೆ ನಮ್ಮ ಸಕಲ ಮರಾಠಾ ಸಮಾಜದ ಕ್ರೀಡಾ ಕಮಿಟಿಯಿಂದ ಆದಷ್ಟು ಅನುಕೂಲ ಮಾಡಿಕೊಡೋಣ ಎಂದಿದ್ದಾರೆ.

ಆದಕಾರಣ ಇಂದು ನಮ್ಮ ಸಕಲ ಮರಾಠಾ ಸಮಾಜದಲ್ಲಿ ಪ್ರತ್ಯೇಕ ಕ್ರೀಡಾ ವಿಭಾಗವನ್ನು ನಿರ್ಮಿಸಿ, ಅದರಿಂದ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ, ನಮ್ಮ ಸಮುದಾಯದ ಸಾಧಕರಿಗೆ ಒಂದು ಉತ್ತಮ ವೇದಿಕೆ ಕಲ್ಪಿಸಿಕೊಡೋಣ ಎನ್ನುತ ಸನ್ಮಾನ ಸಭೆಗೆ ಆಗಮಿಸಿದ ಎಲ್ಲಾ ಗಣ್ಯರಿಗೂ ಹಾಗೂ ಜನರಿಗೂ ಧನ್ಯವಾದ ತಿಳಿಸಿದ್ದಾರೆ.

ಇದೇ ವೇಳೆ ಮೈಸೂರು ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ದಸರಾ ಕಂಠೀರವ ಕೇಸರಿ ಎಂದು ವಿಜೇತರಾದ ತನಿಷ್ ಪಾಟೀಲ, ಕಾಡಾ ಅಧ್ಯಕ್ಷರಾಗಿ ಆಯ್ಕೆ ಆದ ಯುವರಾಜ ಕದಮ, ಪೊಲೀಸ್ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಶ್ರುತಿ ಪಾಟೀಲ್, ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಗೋಲ್ಡ್ ಮೆಡಲ್ ಪಡೆದ ಪ್ರೇಮ ಜಾಧವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮುದಾಯದ ಇತರ ಸಾಧಕರಿಗೆ ಸಕಲ ಮರಾಠಾ ಸಮಾಜದ ವತಿಯಿಂದ ಗೌರವದ ಸರ್ಕಾರವನ್ನು ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ಕಿರಣ್ ಜಾಧವ ಅಮರ್ ಎಳ್ಳೂರ್ ಕರ್ ಪ್ರಕಾಶ ಬೀಳಗೊಜಿ ಸುನಿಲ್ ಜಾಧವ ರೇಷ್ಮಾ ಪಾಟೀಲ ಪ್ರವೀಣ್ ಪಾಟೀಲ ಮಾಧುರಿ ಜಾಧವ ಶರಧ ಪಾಟೀಲ ನಿಖಿಲ್ ಮೂರ್ಖಟ್ ಪ್ರಶಾಂತ್ ಪಾಟೀಲ ಹಾಗೂ ಹಲವರು ಪಾಲ್ಗೊಂಡಿದ್ದರು.

error: Content is protected !!