09/12/2025
IMG_20251003_211423

5 ವರ್ಷ ನಾನೇ ಸಿ ಎಮ್ ಎಂದು ಹೇಳುವದೇ ಸಿ ಎಮ್ ಸಾಧನೆ: ಆರ್ ಅಶೋಕ

ನೇಸರಗಿ-03. ರಾಜ್ಯದ ಮುಖ್ಯಮಂತ್ರಿ 5 ವರ್ಷ ನಾನೇ ಮುಖ್ಯಮಂತ್ರಿ ಎಂಬ ಮಾತನ್ನು ಹೇಳುವದೇ ಅವರ ಸಾಧನೆ ಆಗಿದೆ. ನಾಳೆ ಬೆಳಗಾವಿಗೆ ಬಂದು ರಿಬ್ಬನ್ ಕಟ್ ಮಾಡಿ ಬಿರಿಯಾನಿ ತಿಂದು ಹೋಗುವದು ಅಷ್ಟೇ ಅವರ ಕೆಲಸ ಅಧಿಕಾರಿಗಳು ಸ್ವಾಗತಿಸಿ ಐ ಬಿ ಗೆ ಕರಕೊಂಡು ಹೋಗಿ ಸಮಾರಂಭ ಮಾಡಿ ಬೀಳ್ಕೊಡುಗೆ ಮಾಡುವದಷ್ಟೇ ಅವರ ಕೆಲಸ ಆಗಿದೆ. ಇಲ್ಲಿಯವರೆಗೂ ಜಿಲ್ಲಾಧಿಕಾರಿಗಳು, ಜಿಲ್ಲಾ ಮಂತ್ರಿಗಳು ಬೆಳೆ ಸಮೀಕ್ಷೆ ಮಾಡಿಲ್ಲ, ರೈತರ ಗೋಳು ಕೇಳ್ಲಿಲ್ಲ, ಅದಕ್ಕಾಗಿ ಈ ಭಾಗದ ರೈತರ ಬೆಳೆ ಹಾನಿ ವೀಕ್ಷಣೆಗೆ ನಾವು ಬಂದಿಗೂ ಈಗ ಜಿಲ್ಲಾಧಿಕಾರಿಗಳು, ತಹಶೀಲ್ದಾರ, ಅಧಿಕಾರಿಗಳು ಬಂದಿದ್ದು, ರೈತರ 80% ಬೆಳೆ ಹಾನಿ ಅಗಿದ್ದು, ಅತಿಯಾದ ಮಳೆ, ಕಳಪೆ ಬೀಜ, ಕೀಟ ಭಾದೆಯಿಂದ ಹಾಳಾಗಿದ್ದು ಕೂಡಲೇ ಸರ್ಕಾರ ಎಚ್ಚೆತ್ತು ರೈತರಿಗೆ ಪರಿಹಾರ ನೀಡಬೇಕು. ಇಂದಿನಿಂದಲೇ ನಾವು ಬೆಳೆ ಪರಿಹಾರ ನೀಡಲು ಅಗ್ರಹಿಸುತ್ತೇವೆ ಎಂದು ರಾಜ್ಯ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ ಹೇಳಿದರು.
ಅವರು ಶುಕ್ರವಾರದಂದು ನೇಸರಗಿ, ಮದನಬಾವಿ, ಮುರಕೀಬಾವಿ, ನಾಗನೂರ ಗ್ರಾಮಗಳ

ಹೊಲಗಳಿಗೆ ಬೇಟಿ ನೀಡಿ, ಬೆಳೆ ಹಾನಿ ವೀಕ್ಷಣೆ ಮಾಡಿ ಮಾತನಾಡಿ ಕೇಂದ್ರ ಸರ್ಕಾರ ಎನ್ ಡಿ ಆರ್ ಎಫ್ ಮೂಲಕ ಪರಿಹಾರ ದೇಶದ ಎಲ್ಲ ರಾಜ್ಯಗಳಿಗೆ ನೀಡಿದೆ ಆದರೆ ಸರ್ಕಾರ ರೈತರಿಗೆ ಯಾವ ಪರಿಹಾರವನ್ನು ನೀಡಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ರೈತರಿಗೆ 25 ಸಾವಿರ ರೂಪಾಯಿಗಳನ್ನು ನೀಡಿದ್ದೇವೆ. ತಕ್ಷಣ ಮುಖ್ಯಮಂತ್ರಿ ಅವರು ಬೆಳೆ ವೀಕ್ಷಣೆ ಮಾಡಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು, ನಮ್ಮ ಅಧಿಕಾರ ಅವಧಿಯಲ್ಲಿ 3 ಲಕ್ಷ ಕೋಟಿ ಬಜೆಟ್ ಇತ್ತು ಈಗ 4 ಲಕ್ಷ ಕೋಟಿ ಇದೆ ಆದರೂ ರೈತರಿಗೆ ಪರಿಹಾರ ನೀಡುತ್ತಿಲ್ಲ. ಅತಿಯಾದ ಮಳೆಯಿಂದ ಮನೆಗಳು ನೀರಿನಿಂದ ಮುಳುಗಿದರು ನಯಾ ಪೈಸೆ ಪರಿಹಾರ ನೀಡುತ್ತಿಲ್ಲ.ಕೂಡಲೇ ಸರ್ಕಾರ ರೈತರಿಗೆ ಪರಿಹಾರ ನೀಡಬೇಕು ಎಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ವಿಧಾನ ಪರಿಷತ ಸದಸ್ಯ ಸಿ ಟಿ ರವಿ ಮಾತನಾಡಿ ರೈತರು ಒಬ್ಬೊಬ್ಬರಾಗಿ ತಮ್ಮ ಬೆಳೆಗಳಿಗೆ ಆದ ತೊಂದರೆ ಹೇಳಲು ವಿನಂತಿಸಿದರು. ಆಗ ರೈತರು ಮಾತನಾಡಿ ಕಳೆದ ವರ್ಷದ ಇಳುವರಿಯಲ್ಲಿ 80% ಬೆಳೆ ಹಾನಿಯಾಗಿದ್ದು ಏಕರಿಗೆ 2 ಕ್ವಿಂಟಲ್ ಮಾತ್ರ ಸೋಯಾಬಿನ್ ಬಂದಿದ್ದು, ಕಟ್ಟಾವು ಸಮಯದಲ್ಲಿ ಅತಿಯಾದ ಮಳೆ, ಕೀಟ ಭಾದೆ, ಕಳಪೆ ಬೀಜದಿಂದ ನಮ್ಮ ಬಾಳು ತೊಂದರೆ ಅಗಿದ್ದು ಇಂತಹ ಸಂದರ್ಭದಲ್ಲಿ ಯಾವ ಅಧಿಕಾರಿಗಳು, ಜಿಲ್ಲಾ ಮಂತ್ರಿಗಳು ಸಮೀಕ್ಷೆ,ವೀಕ್ಷಣೆಗೆ ಬಂದಿಲ್ಲಾ ಎಂದರು.
ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿನಗಿ,ಜಿಲ್ಲಾಧಿಕಾರಿ ಮೊಹಮ್ಮದ ರೋಷನ, ಎಮ್ ಎಲ್ ಸಿ ರವಿಕುಮಾರ, ಶಾಸಕರಾದ ಸಿದ್ದು ಸವದಿ, ಅಭಯ ಪಾಟೀಲ,ಶಶಿಕಲಾ ಜೊಲ್ಲೆ, ದುರ್ಯೋಧನ ಐಹೋಳೆ, ಮಾಜಿ ಶಾಸಕರು, ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ, ಸಂಜಯ್ ಪಾಟೀಲ್, ರಾಯಬಾಗ್ ಶಾಸಕರಾದ ದುರ್ಯೋಧನ ಐಹೊಳೆ. ಜಗದೀಶ ಮೆಟಗುಡ, ಡಾ. ವಿ ಆಯ ಪಾಟೀಲ,ಮಾಜಿ ಎಮ್ ಎಲ್ ಸಿ ಮಹಾಂತೇಶ ಕವಟಗಿಮಠ, ಡಾ. ರವಿ ಪಾಟೀಲ, ಬೆಳಗಾವಿ ಮಹಾನಗರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾಂತೇಶ ವಕ್ಕುಂದ,ಉದ್ಯಮಿ ವಿಜಯ ಮೆಟಗುಡ. ಶ್ರೀಕರ್ ಕುಲಕರ್ಣಿ,ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಶುಭಾಷ ಪಾಟೀಲ, ಹಿರಿಯ ಮುಖಂಡ ಎಮ್ ಬಿ ಜಿರಲಿ, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಖಜಾಂಚಿ ಮಹಾಂತೇಶ್ ಕೂಲಿನವರ,ಬೈಲಹೊಂಗಲ ಬಿಜೆಪಿ ಮಂಡಳ ಅಧ್ಯಕ್ಷ ಶುಭಾಷ ತುರಮರಿ, ಶ್ರೀಮತಿ ಲಕ್ಷ್ಮೀ ಇನಾಮದಾರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಮೆಟಗುಡ,

ಸಂತೋಷ್ ಹಡಪದ, ನೇಸರಗಿ ಗ್ರಾ ಪಂ ಅಧ್ಯಕ್ಷ ವೀರಭದ್ರ ಚೋಬಾರಿ, ತೇಜಪ್ಪಗೌಡ ಪಾಟೀಲ, ಸಂಜು ಪಾಟೀಲ, ಮಲ್ಲಿಕಾರ್ಜುನ್ ಸೋಮಣ್ಣವರ, ಮಲ್ಲಪ್ಪ ಮಾಳನ್ನವರ ಸೇರಿದಂತೆ ನೇಸರಗಿ ಭಾಗದ ಹಲವಾರು ರೈತ ಬಾಂಧವರು ಹಾಜರಿದ್ದರು.

error: Content is protected !!