ಬೆಳಗಾವಿ-03 : ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ಸಂಪ್ರದಾಯವನ್ನು ಆಧುನಿಕ ವಿನ್ಯಾಸಗಳೊಂದಿಗೆ ಬೆರೆಸುವ ವಿಶೇಷ ಆಭರಣಗಳ ಪ್ರದರ್ಶನ ಅ.3 ರಿಂದ ಅ. 6 ವಿಶೇಷ ಪ್ರದರ್ಶನ ಕುಂದಾನಗರಿ ಬೆಳಗಾವಿಯ ಓಪಲ್ ಹಾಲ್‌ನಲ್ಲಿರುವ ಹೋಟೆಲ್ ಇಇಎಫ್‌ಎಯಲ್ಲಿ ಏರ್ಪಡಿಸಿದ್ದು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಬಸವರಾಜ ಕಾರ್ಯಕ್ರಮ ಉದ್ಘಾಟಿಸಿದರು.
155 ವರ್ಷಗಳಿಂದ, ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಅತ್ಯುತ್ತಮ ಕಲಾತ್ಮಕತೆ, ಸಾಟಿಯಿಲ್ಲದ ಗುಣಮಟ್ಟ ಮತ್ತು ರಾಜಮನೆತನಗಳು ಮತ್ತು ಅಭಿಜ್ಞರಿಗೆ ಆಭರಣ ವಿನ್ಯಾಸಕಾರನಾಗಿ ಗುರುತಿಸಿಕೊಂಡಿದೆ.
ಈ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಬಸವರಾಜ “ಇಂತಹ ಶ್ರೀಮಂತ ಇತಿಹಾಸ ಹೊಂದಿರುವ ಬ್ರ‍್ಯಾಂಡ್ ಬೆಳಗಾವಿಗೆ ತನ್ನ ಕಲಾತ್ಮಕತೆಯನ್ನು ಹೊತ್ತುತಂದಿರುವುದನ್ನು ನೋಡುವುದೇ ಸಂತೋಷಕರವಾಗಿದೆ ಎಂದರು.
ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್‌ನ ಮಳಿಗೆಯ ಮುಖ್ಯಸ್ಥ ನಿಶಾಂತ್ ಮಾತನಾಡಿ, ‘ಆಭರಣಗಳು ಅದ್ಭುತವಾಗಿರುವುದರ ಜೊತೆಗೆ ಅರ್ಥಪೂರ್ಣವಾಗಿರಬೇಕು ಎಂದು ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಯಾವಾಗಲೂ ನಂಬಿದೆ. ಈ ಪ್ರದರ್ಶನವು ಬೆಳಗಾವಿಯ ಜನರೊಂದಿಗೆ ಸಂಪರ್ಕ ಸಾಧಿಸುವ, ನಮ್ಮ ಪರಂಪರೆಯನ್ನು ಹಂಚಿಕೊಳ್ಳುವ ಮತ್ತು ಸಿಕೆಸಿ ಸಂಗ್ರಹದಿಂದ ಹಿಡಿದು ನಮ್ಮ ಸುಸ್ಥಿರ Crash club ನಂತಹ ಹೊಸ ವಿಚಾರಗಳನ್ನು ಅವರಿಗೆ ಪರಿಚಯಿಸುವ ನಮ್ಮ ಮಾರ್ಗವಾಗಿದೆ. ಎಂದರು.
ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್‌ನ crash.club – ಇದು ಆಧುನಿಕ ಐಷಾರಾಮಿತನವನ್ನು ಮರು ವ್ಯಾಖ್ಯಾನಿಸುವ ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಿದ ವಜ್ರಗಳ ಕ್ರಾಂತಿಕಾರಿ ಸಂಗ್ರಹವಾಗಿದೆ.
ವಿನ್ಯಾಸಗೊಳಿಸಲಾದ crash.club ವಜ್ರಗಳು ವಿಜ್ಞಾನ, ಕಲಾತ್ಮಕತೆ ಮತ್ತು ಸುಸ್ಥಿರತೆಯ ಪ್ರತೀಕದಂತಿದೆ. ಪ್ರತಿಯೊಂದು ಹರಳನ್ನು ಕುಶಲಕರ್ಮಿಗಳು ಕೈಯಿಂದ ಕೆತ್ತನೆಗೊಳಿಸಿದ್ದಾರೆ ಮತ್ತು ನೈತಿಕ ಐಷಾರಾಮಿತನಕ್ಕೆ ಬ್ರ‍್ಯಾಂಡ್‌ನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಬೆಳಗಾವಿಯಲ್ಲಿನ ಈ ಪ್ರದರ್ಶನವು ಕೇವಲ ಪ್ರದರ್ಶನಕ್ಕೆ ಸೀಮಿತವಾಗಿಲ್ಲ – ಕಲಾತ್ಮಕತೆ, ಪರಂಪರೆಯ ಪ್ರದರ್ಶನ. ಇಲ್ಲಿ ಸಂದರ್ಶಕರು 155 ವರ್ಷಗಳಷ್ಟು ಹಳೆಯ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಭರಣಗಳ ಭವಿಷ್ಯವನ್ನು ಹೇಗೆ ರೂಪಿಸುತ್ತಿದೆ ಎಂಬುದನ್ನು ವೀಕ್ಷಿಸುತ್ತಾರೆ’ ಎಂದು ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್‌ನ ಪಿಆರ್ ಮುಖ್ಯಸ್ಥ ತೇಜಸ್ ಕಲ್ರಾ ಹೇಳಿದರು.
ಬೆಳಗಾವಿ ಗ್ರಾಹಕರಿಗೆ ಮಾತ್ರ ವಿಶೇಷ ಕೊಡುಗೆಗಳು ಲಭ್ಯವಿದೆ – 9% ವರೆಗೆ ರಿಯಾಯಿತಿ ಅಂದರೆ ಕೆಳಗಿನಂತೆ ಆಫರ್ ಬೆಳ್ಳಿ ಆಭರಣಗಳ ಮೇಲೆ 2% ರಿಯಾಯಿತಿ ಚಿನ್ನದ ಆಭರಣಗಳ ಮೇಲೆ 4% ರಿಯಾಯಿತಿ, ವಜ್ರದ ಆಭರಣಗಳ ಮೇಲೆ 6% ರಿಯಾಯಿತಿ ಮತ್ತು 18.69 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರದ ಆಭರಣಗಳ ಖರೀದಿಗಳ ಮೇಲೆ 9% ರಿಯಾಯಿತಿಯಿದೆ.
