ಮಂಗಳಮುಖಿಯರಿಗೆ ಬಾಗಿನದೊಂದಿಗೆ ನವರಾತ್ರಿ.
Pahi Vibes (foundation)ಫೌಂಡೇಶನ್ ವತಿಯಿಂದ ನಗರದ ಕಿಲ್ಲಾ ದುರ್ಗಾದೇವಿ ಮಂದಿರದಲ್ಲಿ ನವರಾತ್ರಿ ಉತ್ಸವದ ನಿಮಿತ್ತ ದೇವಿ ಆರಾಧನೆಯ ಈ ಮಹಾಪರ್ವದಲ್ಲಿ ಮಂಗಳಮುಖಿಯರಿಗೆ ವಿಶೇಷ ಗೌರವ ನೀಡುವ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು.
ಪಾರಂಪರಿಕವಾಗಿ, ಸಂದರ್ಭದಲ್ಲಿ ಶಕ್ತಿ ಆರಾಧನೆಯ ಮಂಗಳಮುಖಿಯರನ್ನು ದೇವಿಯ ರೂಪದ ಪ್ರತೀಕವಾಗಿ ಕಾಣಲಾಗುತ್ತದೆ. ತಾಯಿ ಶಕ್ತಿಯ ಕರುಣೆ ಮತ್ತು ಆಶೀರ್ವಾದ ಪಡೆಯಲು ಅವರಿಗೆ ಪೂಜೆ ಮಾಡುವ ಪದ್ಧತಿ ಕಡೆಗಳಲ್ಲಿ ವಾಡಿಕೆಯಾಗಿದೆ. ದೇವಸ್ಥಾನಗಳಲ್ಲಿ ಅಥವಾ ಮನೆಮಠಗಳಲ್ಲಿ ಆಯೋಜಿಸಲಾದ ನವರಾತ್ರಿ ಪೂಜಾ ಕಾರ್ಯಕ್ರಮಗಳಲ್ಲಿ ಮಂಗಳಮುಖಿಯರಿಗೆ ಆಹ್ವಾನ ನೀಡಿ, ಅವರ ಪಾದ ತೊಳೆದು ಗೌರವಿಸಲಾಗುವುದರಿಂದ ಪಾಹಿ ವೈಬ್ ಫೌಂಡೇಷನ್‌ನಿಂದ ವಿನೂತನ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಬಾಗಿನ ಪಡೆದ ಮಂಗಳಮುಖಿಯರೊಂದಿಗೆ ಫೌಂಡೇಷನ್ ತಂಡ
ನವರಾತ್ರಿಯ ದಿನಗಳಲ್ಲಿ ಮಂಗಳಮುಖಿಯರಿಗೆ ವಸ್ತ್ರ, ದಕ್ಷಿಣೆ ಮತ್ತು ಆಹಾರ ಸಮರ್ಪಿಸುವ ಮೂಲಕ ದೇವಿಯ ಆಶೀರ್ವಾದ ಪಡೆದಂತಾಗುತ್ತದೆ. ಸಾಮಾಜಿಕ ಕಳಕಳಿಯಿಂದ ಎಲ್ಲರಿಗೂ ಒಳ್ಳೆಯದಾಗಲಿ, ದೇಶ ಸಮೃದ್ಧವಾಗಲಿ, ಎಲ್ಲೆಡೆ ಶಾಂತಿ ನೆಮ್ಮದಿ ಹರಡಲಿ ಎಂಬ ಸಂದೇಶದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಪಾಹಿ ವೈಬ್‌ನ
ಸ್ಥಾಪಕಿ ರಕ್ಷಾ ಉಪಾಧ್ಯೆ ಹೇಳಿದರು.
ನವರಾತ್ರಿಗೆ ಸಂಬಂಧಿಸಿದ ನವರಂಗ್‌ನ ಬಣ್ಣದ ಸೀರೆಗಳನ್ನು ಒಂಬತ್ತು ಮಂಗಳಮುಖಿಗಳಿಗೆ ಬಾಗಿನ ರೂಪದಲ್ಲಿ ನೀಡಿ ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ನಿರ್ದೇಶಕಿ ಪದ್ಮಜಾ ಗರ್ಗಟ್ಟಿ, ಸದಸ್ಯರಾದ ಭೂವಿಕಾ ಹೊಸಟ್ಟಿ, ರಾಘವೇಂದ್ರ ನಾಯ್ಡು, ಕಿರಣ್ ನರಗುಂದ ಕರ್ ಮತ್ತು ಮೇಘಾ ದುಡಮಿ ಪಾಲ್ಗೊಂಡಿದ್ದರು.
