*ಕನ್ನಡದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸಿದ ಶ್ರೇಯಸ್ಸು ಭೈರಪ್ಪನವರದ್ದು – ಪ್ರೊ. ಇಂಚಲ*
ಬೆಳಗಾವಿ-28 -ಭೈರಪ್ಪನವರಂಥ ಪ್ರಾಮಾಣಿಕ ಬರೆಹಗಾರರನ್ನು ನಾನು ಕಂಡಿಲ್ಲ.ಇವರ ಕೃತಿಗಳು ದೇಶ, ವಿದೇಶ ಭಾಷೆಗಳಿಗೂ ಅನುವಾದಗೊಂಡಿವೆ. ಕನ್ನಡದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೇರಿಸಿದ ಶ್ರೆಯಸ್ಸ ಭೈರಪ್ಪನವರದ್ದು.
ಚೆನ್ನಮ್ಮ ವೃತ್ತದ ಬಳಿಯಿರುವ ಕನ್ಮಡ ಸಾಹಿತ್ಯ ಭವನದಲ್ಲಿ ದಿ. ೨೭ ಶನಿವಾರದಂದು ಕಾದಂಬರಿಕಾರ ಭೈರಪ್ಪ ಮತ್ತು ಉದ್ಯಮಿ ಸುಧಾಕರ ಶಾನಬಾಗ ಇವರಿಗೆ ಶ್ರದ್ಧಾಂಜಲಿ ಸಭೆಯನ್ನು ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ, ಬೆಳಗಾವಿ ಜಿಲ್ಲಾ ಚು.ಸಾ.ಪ. ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲ ಹಮ್ಕಿಕೊಂಡಿದ್ದರು. ಸಭೆಯ ಅಧ್ಯಕ್ಷೆಯನ್ನು ವಹಿಸಿಕೊಂಡಿದ್ದ ಪ್ರೊ. ಇಂಚಲ ಅವರು ಮೇಲಿನಂತೆ ಹೇಳಿದರು.
ಭೈರಪ್ಪನವರ ಶರೀರ ಭೂಮಿಯ ಮಡಿಲಲ್ಲಿ ಹೋದರೂ ಸಹ ಅವರ ವ್ಯಕ್ತಿತ್ವ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೆ ಉಳಿದು ಕೊಂಡಿದೆ. ಅವರ ಸಾಹಿತ್ಯ ನಿರಂತರವಾಗಿ ಸೂರ್ಯ ಚಂದ್ರರಿರುವವರೆಗೂ ಉಳಿಯುತ್ತದೆ ಎಂದು ಹಿರಿಯ ಕವಿ, ನಿವೃತ್ತ ಪ್ರಾಚಾರ್ಯ ಪ್ರೊ. ಎಂ. ಎಸ್ ಇಂಚಲ ಹೇಳಿದರು.
ಗುಂಡೇನಟ್ಪಿ ಮಧುಕರ, ಡಾ. ಪಿ.ಜಿ. ಕೆಂಪಣ್ಣವರ, ಶಿರೀಷ ಜೋಶಿ, ರಾಮಚಂದ್ರ ಕಟ್ಟಿ, ಆರ್ ವಿ ಭಟ್, ಅರವಿಂದ ಹುನಗುಂದ, ಎಸ್. ವಿ. ದೀಕ್ಷೀತ, , ಪಾರ್ವತಿ ಪಿಟಗಿ, ರವಿ ಕೊಟಾರಗಸ್ತಿ, ಸುನಿತಾ ಪಾಟೀಲ, ದೀಪಿಕಾ ಚಾಟೆ. ಹೇಮಾ ಸೊನೊಳ್ಳಿ, , ಪಾಂಡುರಂಗ ಮಾರಿಹಾಳ, ಪ್ರೊ. ಜಯಂತ ಕಿತ್ತೂರ, ಬಿ.ಕೆ. ಕುಲಕರ್ಣಿ, ನೀಲಗಂಗಾ ಚರಂತಿಮಠ ಮಾತನಾಡಿ ಭೈರಪ್ಪನವರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ ಎಂದು ಹೇಳಿದರು. ಭೈರಪ್ಪನವರೊಂದಿಗಿನ ಒಡನಾಡವನ್ಮು ಹಂಚಿಕೊಂಡರು. ಜಯಂತ ಜೋಶಿ ಭೈರಪ್ಪನವರ ಕುರಿತಾದ ಕವನ ವಾಚನ ಮಾಡಿದರು.
ದಿ. ಸುಧಾಕರ ಶಾನಬಾಗ ಅವರ ಕುರಿತು ಮಾತನಾಡುತ್ತ ಇವರು ತುಂಬ ಕಡು ಬಡತನದಿಂದ ಮೇಲೆ ಬಂದವರು.ಇವರು ಸಾಮಾಜಿಕ, ಶಿಕ್ಷಣ ಕ್ಷೇತ್ತಕ್ಕೆ ಅಪಾರ ಸೇವೆಯನ್ನು ಸಲ್ಲಿಸಿದ್ದರು. ಬಡವರ ಕುರಿತು ತುಂಬ ಅಂತಕರಣ, ಪ್ರೀತಿಯನ್ನು ಹೊಂದಿದ್ದರು ಎಂದು ಹೇಳಿದರು.
ಇಬ್ಬರ ಅಗಲಿಕೆ ತುಂಬ ನೋವನ್ನುಂಟು ಮಾಡಿದೆ ಎಂದು ಹೇಳಿದರು. ಎಮ್. ಬಿ. ಹೊಸಳ್ಳಿ ನಿರೂಪಿಸಿದರು.
