ಬೆಳಗಾವಿ-28:ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ವಾರದ ಸತ್ಸಂಗದ ಕಾರ್ಯಕ್ರಮದಲ್ಲಿ ದಿನಾಂಕ 28,09,2025ರಂದು ಮಹಾದೇವ ಕೊರೆಯವರು ಸರ್ವಜ್ಞನ ತ್ರಿಪದಿಗಳಲ್ಲಿ ಬಸವಣ್ಣನವರ ಕುರಿತು ಹೇಳುತ್ತಾ ಬಸವನೇ ಜಗದಾದಿ ಬಸವನೇ ಜಗದೀಶ ಬಸವನೇ ಜಗದ ಗುರು ಎಂದು ಬಸವಣ್ಣನವರು ಅಂದಿನ ಶರಣರಿಗೆ ಅಕ್ಷರ ಜ್ಞಾನವನ್ನು ಕೊಡುವ ಪ್ರಯತ್ನ ಪಟ್ಟರು ಶರಣರ ವಚನಗಳು ಮುಖಾಂತರ ಸಾಹಿತ್ಯ ನಿರ್ಮಾಣವಾಯಿತು ಹೀಗಾಗಿ ಅಕ್ಷರ ಕ್ರಾಂತಿಯನ್ನು ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಮಾಡಿದರು ಎಂದು ಹೇಳುತ್ತಾ ಬಸವಣ್ಣನವರ ವಚನವನ್ನು ವಿಶ್ಲೇಷಣೆಯನ್ನು ಮಾಡುತ್ತಾ ಗುರು ಕರುಣಿಸದೆ ಬಿಟ್ಟಿತ್ತು ಮಾಯೆ ಎಂದು ಗುರುವಿನ ಮಾರ್ಗದರ್ಶನ ವಿಲ್ಲದೆ ಈ ಮಾಯಾ ಪ್ರಪಂಚವನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಹೇಳಿದರು . ಲಲಿತಾ ರುದ್ರಗೌಡರ, ವಿಜಯಲಕ್ಷ್ಮಿ ಅಮ್ಮಣಗಿ ವಚನ ವಿಶ್ಲೇಷಣೆ ಮಾಡಿದರು, ಸುನಿತಾ ನಂದೆಣ್ಣವರ ಮತ್ತು ನಾಗರತ್ನಾ ಪಾಟಿಲ ವಚನ ಗಾಯನ ಮಾಡಿದರು , ಶಂಕರ ಶೆಟ್ಟಿ,ರುದ್ರಗೌಡರು ಮತ್ತು ಅಧ್ಯಕ್ಷರು ಎಸ್ ಜೀ ಸಿದ್ನಾಳರು ಮಾತನಾಡಿದರು ನಿರೂಪಣೆ ಶರಣ ಕಟ್ಟಿಮನಿಯವರು ಮಾಡಿದರು, ಸುನಿತಾ ನಂದೆಣ್ಣವರ ಮತ್ತು ಲಲಿತಾ ರುದ್ರಗೌಡರ ಪ್ರಾರ್ಥನೆ ನಡೆಸಿಕೊಟ್ಟರು ಶರಣ ಶರಣೆಯರು ಪಾಲ್ಗೊಂಡಿದ್ದರು.
