ಬೆಳಗಾವಿ-13**ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವರಾದ ವಿ ಸೋಮಣ್ಣ ಅವರ ಬೆಳಗಾವಿ ಪ್ರವಾಸದ ವಿವರ (ಸೆಪ್ಟೆಂಬರ್ 15 ಸೋಮವಾರ)
ಕೇಂದ್ರ ಸರ್ಕಾರದ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವರಾದ ಶ್ರೀ ವಿ ಸೋಮಣ್ಣ ಅವರು ಸೆಪ್ಟೆಂಬರ್ 15 ರಂದು ಸೋಮವಾರ ಹುಬ್ಬಳ್ಳಿಯಿಂದ ವಿಶೇಷ ರೈಲ್ವೆ ಮೂಲಕ 1.15pm ಮಧ್ಯಾಹ್ನ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಪರಿಶೀಲನೆ ನಡೆಸುವರು. ನಂತರ ಮಧ್ಯಾಹ್ನ 3.00pm ಗಂಟೆಗೆ ರೈಲ್ವೆ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸುವರು 4.15pm ಗಂಟೆಗೆ ಬೆಳಗಾವಿಯಿಂದ ರಸ್ತೆ ಮೂಲಕ ಖಾನಾಪೂರಕ್ಕೆ ತೆರಳಿ ಸಾಯಂಕಾಲ 5.00pm ಗಂಟೆಗೆ ಖಾನಾಪೂರದಲ್ಲಿ ರೈಲ್ವೆ ಇಲಾಖೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು ನಂತರ ಖಾನಾಪೂರದಿಂದ 6.00pm ಗಂಟೆಗೆ ರಸ್ತೆ ಮೂಲಕ ತೆರಳಿ 6.45pm ಗಂಟೆಗೆ ಬೆಳಗಾವಿ ಹತ್ತಿರದ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವರು 7.50pm ಗಂಟೆಗೆ ವಿಮಾನದ ಮೂಲಕ ಬೆಂಗಳೂರಿಗೆ ತೆರಳುವರು ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
