ಬೆಳಗಾವಿ-07-ಬೆಳಗಾವಿವಕುವೆಂಪು ನಗರದಲ್ಲಿ ಅಜೋ ಶಾಶ್ವತೋ ಪುರಾಣ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ವಾರದ ಸತ್ಸಂಗ ಕಾರ್ಯಕ್ರಮ ದಿನಾಂಕ 7,9,2025ರಂದು
ವಸಂತಕ್ಕಾ ಗಡ್ಕರಿಯವರು ಶರಣ ಸಿದ್ದರಾಮರ ವಚನ ವಿಶ್ಲೇಷಣೆ ಮಾಡಿದರು ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಘನವೆಂಬೆನೆ ಇವು ಯಾವುವೂ ಘನವಲ್ಲ ಯಾಕೆಂದರೆ ಇವು ಒಂದೊಂದರಿಂದ ಜನ್ಮವನ್ನು ಪಡೆದಿವೆ ನಿವ್ಯಾರಿಂದ ಜನಿತವಾದಿರಯ್ಯ ಕಪಿಲಸಿದ್ಧ ಮಲ್ಲಿಕಾರ್ಜನಯ್ಯ , ಯಾವುದಕ್ಕೆ ಹುಟ್ಟು ಇಲ್ಲವೂ ಯಾವುದಕ್ಕೆ ಸಾವು ಇಲ್ಲವೂ ಅದು ಘನ ಅಂದರೆ ಆ ಪರಮಾತ್ಮ ಕಂಡು ಕಾಣದಂತೆ ಸೃಷ್ಟಿಯನ್ನು ಗೋಚರಿಸಿ ತಾನು ಅಗೋಚರನಾಗಿರುವ ಪರಮಾತ್ಮನೆ ಘನ ಎಂದು ಹೇಳಿದರು.ಅಜೋ ಶಾಶ್ವತೋ ಪುರಾಣ ಅಂದರೆ ಹುಟ್ಟು ಸಾವಿಲ್ಲದ ಶಾಶ್ವತವಾಗಿ ಸದಾ ಇರುವುದು ಅತ್ಯಂತ ಹಳೆಯದಾದದು ಏನೂ ಇಲ್ಲದಂದು ಇದ್ದದ್ದು ಘನವೆಂದು ತಮ್ಮ ವಚನ ವಿಶ್ಲೇಷಣೆಯಲ್ಲಿ ಹೇಳಿದರು ಇಂದು ವಿಶೇಷ ಅತಿಥಿಯಾಗಿ ಶಾಯಿದ ಅಕ್ತಾರ ಕೆ ,ಎ ,ಎಸ್, ಸಹಾಯಕ ನಿರ್ದೇಶಕರು ಸಹಕಾರಿ ಸಂಘ ಬೈಲಹೊಂಗಲ ಇವರು ಆಗಮಿಸಿದ್ದರು , ಇವರು ಗುಲಬುರ್ಗಾದ ಶರಣ ಬಸಪ್ಪಾ ಅಪ್ಪಾ ಕಾಲೇಜು ವಿದ್ಯಾರ್ಥಿನಿಯಾಗಿದ್ದು ಬಸವಣ್ಣನವರ ಮತ್ತು ಅಕ್ಕಮಹಾದೇವಿಯ ವಚನಗಳು ತಮ್ಮ ಮೇಲೆ ಪ್ರಭಾವ ಬೀರಿವೆ ತಮ್ಮ ಜೀವನದಲ್ಲಿ ಮತ್ತು ವೃತ್ತಿಯಲ್ಲಿ ವಚನಗಳು ಮಾರ್ಗದರ್ಶನವಾಗಿವೇ ತಾವು ಅಪ್ಪಟ ದೇಶಪ್ರೇಮಿಯಾಗಿದ್ದು ಹುಟ್ಟಿ ಬೆಳೆದಿದ್ದು ಶರಣರ ನಾಡದರೆ ನನ್ನ ಕರ್ಮಭೂಮಿ ಕಿತ್ತೂರು ಚನ್ನಮ್ಮನ ನಾಡು ಇದು ನನ್ನ ಸೌಭಾಗ್ಯ ಎಂದು ಹೆಮ್ಮೆಯಿಂದ ಹೇಳಿದರು. ಅಲ್ಲದೆ ಮನುಷ್ಯನಕ್ಕಿಂತ ಮಾವಿಯತೆ ದೊಡ್ಡದು ಧರ್ಮಕ್ಕಿಂತ ದಯೇ ದೊಡ್ಡದು ಎಲ್ಲರೂ ಸೇವಾ ಮನೋಭಾವ ಹೊಂದಿರಬೇಕು ನಮ್ಮಿಂದಾದ ಸಹಾಯವನ್ನು ಮಾಡುತ್ತಿರಬೇಕು ಆಗ ನಮ್ಮ ವ್ಯಕ್ತಿತ್ವವ ಬೆಳೆಯಲು ಸಾದ್ಯ ವಚನಗಳನ್ನು ಓದಿ ಅರ್ಥೈಸಿಕೊಳ್ಳುವುದುಮತ್ತು ಅಳವಡಿಸಿಕೊಳ್ಳುವುದು ಬಹಳ ಮಹತ್ವದಾಗಿದ್ದು ಈ ಸಂಸ್ಕಾರವನ್ನು ಮಕ್ಕಳಿಗೂ ಕೊಡಬೇಕು ಎಂದು ತಮ್ಮ ಅತಿಥಿ ಭಾಷಣದಲ್ಲಿ ಹೇಳಿದರು.
ಇಂದಿನ ವಚನ ಪ್ರಾರ್ಥನೆ ಶೋಭಾ ಶಿವಳ್ಳಿ ತ್ರಿವೇಣಿ ಪಾಟಿಲ, ಲಲಿತಾ ರುದ್ರಗೌಡರ ನಡೆಸಿಕೊಟ್ಟರು ಪ್ರಸಾದ ವ್ಯವಸ್ಥೆಯನ್ನು ಸುನಿತಾ ನಂದೆಣ್ಣವರ ಮತ್ತು ಲಲಿತಾ ರುದ್ರಗೌಡರವರು ಮಾಡಿದ್ದರು ನಿರೂಪಣೆ ಶರಣ ಕಟ್ಟಿಮನಿಯವರು ಮಾಡಿದರು ಅಧ್ಯಕ್ಷರು ಎಸ್ ಜೀ ಸಿದ್ನಾಳರು ಕಾರ್ಯದರ್ಶಿ ಶಂಕರ ಶೆಟ್ಟಿ ಅವರು ಹಾಗೂ ಸಂಘದ ಶರಣ ಶರಣಿಯರು ಹಾಜರಿದ್ದರು.
