ಬೆಳಗಾವಿ-28: ಒಂದೇ ಕುಟುಂಬದ ಐವರು ಗ್ಯಾಸ್(ಸಿಲಿಂಡರ)ಸ್ಫೋಟ ಗೊಂಡು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಬಸವನ ಗಲ್ಲಿಯ ಖಡೇಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದಿದೆ.
ಸ್ಫೋಟದಲ್ಲಿ ಗಾಯಗೊಂಡವರ ಹೆಸರು ಲಲಿತಾ ಭಟ್ (ವಯಸ್ಸು 48), ಮೋಹನ್ ಭಟ್ (ವಯಸ್ಸು 56), ಕಮಲಾಕ್ಷಿ ಭಟ್ (ವಯಸ್ಸು 80), ಹೇಮಂತ್ ಭಟ್ (ವಯಸ್ಸು 27), ಗೋಪಿಕೃಷ್ಣ ಭಟ್ (ವಯಸ್ಸು 84). ಎಲ್ಲಾ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ(ಜಿಲ್ಲಾ ಆಸ್ಪತ್ರೆ) ಬೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.