11/12/2025
IMG-20250817-WA0001

ನೇಸರಗಿ-17:ಗ್ರಾಮೀಣ ಮಟ್ಟದ ಕ್ರಷಿ ಸಹಕಾರಿ ಸಂಘಗಳ ನೂತನ ಕಟ್ಟಡ ನಿರ್ಮಾಣದಿಂದ ಇಲ್ಲಿನ ರೈತರಿಗೆ, ಕೃಷಿ ಉತ್ತೇಜನಕ್ಕೆ, ಗ್ರಾಮಗಳ ಅಭಿವೃದ್ಧಿಗೆ ಸಹಕರಿಯಾಗುತ್ತದೆ ಎಂದು ಮಾಜಿ ಶಾಸಕರು ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಹೇಳಿದರು.
ಅವರು ಸಮೀಪದ ಸುತಗಟ್ಟಿ ಗ್ರಾಮದಲ್ಲಿ ರವಿವಾರದಂದು  ವಿವಿಧೋದ್ದೇಶ ಗ್ರಾಮೀಣ ಕೃಷಿ ಸಹಕಾರಿ ಸಂಘದ ನೂತನ ಕಟ್ಟಡ ಹಾಗೂ ಗೋದಾಮು ಕಾಮಗಾರಿಯ ಕಾಮಗಾರಿಗೆ ಭೂಮಿಪೂಜೆ ಪ್ರಯುಕ್ತ ಗುದ್ದಲಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಮದ್ಯಪಾನ ಸಂಯಮ ಮಂಡಳಿಯ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ತುಬಾಕಿ, ಸಂಘದ ಅಧ್ಯಕ್ಷರಾದ ಆರ್ ಸಿ. ಪಾಟೀಲ, ಉಪಾಧ್ಯಕ್ಷರಾದ ಶಂಕರಗೌಡ ಪಾಟೀಲ , ಮುಖಂಡರಾದ ಚನ್ನಬಸಯ್ಯ ಮಠಪತಿ, ಸುರೇಶ ಲಕ್ಕುಂಡಿ, ಪ್ರತ್ವಿರಾಜಗೌಡ ಪಾಟೀಲ, ಬಸವರಾಜ ತುಬಾಕಿ,ಸಾಗರ ತುಬಾಕಿ, ಶಿವರುದ್ರಪ್ಪ ಕಲ್ಲೂರ, ಚನ್ನಬಸಪ್ಪ ತುಬಾಕಿ, ಅಶೋಕ ದೇಯಣ್ಣವರ, ತಾಲೂಕಾ ಬ್ಯಾಂಕ ನಿರೀಕ್ಷಕರಾದ ವಿ ಬಿ. ಗಿರಣವರ, ನಿರೀಕ್ಷಕ ಸುರೇಶ ಮತ್ತಿಕೊಪ್ಪ, ಗ್ರಾಮಸ್ಥರು, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಹಾಜರಿದ್ದರು.

error: Content is protected !!