12/12/2025
IMG-20250714-WA0021

ಬೆಳಗಾವಿ-14: ಬೆಳಗಾವಿ ಜಿಲ್ಲೆಯ ಅಗಸಗಿ ಗ್ರಾಮದ ರೈತರಿಗೆ ಸುಮಾರು 24 ವರ್ಷಗಳ ಹಿಂದೆ ಪಡೆದ ಸಾಲವನ್ನು ಈಗ ತುಂಬಬೇಕು ಅಂತಾ ಒತ್ತಾಯ ಮಾಡತ್ತಿದ್ದು, ರೈತರಿಗೆ ಸಾಲವನ್ನು ತುಂಬಲು ಆಗದೇ ಇರುವುದರಿಂದ ರೈತರಿಗೆ ಸಾಲವನ್ನು ತುಂಬುವಂತೆ ಕಿರುಕುಳ ನೀಡಬಾರದು ಹಾಗೂ ನ್ಯಾಯಾಲಯದಲ್ಲಿ ರೈತರ ಮೇಲೆ ಹಾಕಿರುವ ನಾವೆಗಳನ್ನು ಹಿಂಪಡೆಯುವಂತೆ ಸೋಮವಾರ ಡಿಸಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಬೆಳಗಾವಿ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಯಿತು.

ರೈತರಿಗೆ ಯಮಕನಮರಡಿ ಅರ್ಬನ್ ಕೊ. ಆಹ್. ಕ್ರೆಡಿಟ್ ಸೊಸೈಟಿ ಲಿ, ಎದುರು 2001 ರಲ್ಲಿ ಎಮ್ಮೆಗಳನ್ನು ಖರೀದಿ ಮಾಡಲು ರೂ. 12,000 ಸಾಲವನ್ನು ನೀಡಿರುತ್ತಾರೆ. ಸೊಸೈಟಿ ನಿಯಮದ ಪ್ರಕಾರ ರೈತರು ಕಂತನ್ನು ಸಹ ತುಂಬಿದ್ದು, ಕೆಲವು ರೈತರಿಗೆ ತುಂಬಿದ ಬಗ್ಗೆ ರಸೀದಿಯನ್ನು ಸಹ ನೀಡಿರುವುದಿಲ್ಲ.

2004ರಲ್ಲಿ ರೈತರು ಸಾಲವನ್ನು ತುಂಬದೇ ಇರುವಾಗ ಟ್ರಕ್ ಗಳ ಮೂಲಕ ಎಮ್ಮೆಗಳನ್ನು ತುಂಬಿಕೊಂಡು ಹೋಗಿದ್ದು, ರೈತ ಸಂಘದ ವತಿಯಿಂದ ಅವುಗಳನ್ನು ಬಿಡಿಸಿಕೊಂಡು ಬಂದಿರುತ್ತಾರೆ. ಆ ಎಮ್ಮೆಗಳ ಮೇಲೆ ಇನ್ಸೂರೆನ್ಸ್ ಸಹ ಮಾಡಿಸಿದ್ದು, ಇತ್ತೀಚಿನ ದಿನದಲ್ಲಿ ಒಂದು ಎಮ್ಮೆಯೂ ಕೂಡ ಜೀವಂತವಾಗಿ ಇರುವುದಿಲ್ಲ. ಆದರೆ ಈಗ ಸೊಸೈಟಿಯವರು ಎಮ್ಮೆಗಳ ಸಾಲ ಪಡೆದ ರೈತರಿಗೆ ಸಾಲವನ್ನು ತುಂಬುವಂತೆ ಕಿರುಕುಳ ನೀಡುತ್ತಿದ್ದು,
ಸದರಿ ಸಾಲ ಪಡೆದ ರೈತರು ಸಾಲದ ಕೆಲ ಕಂತಗಳನ್ನು ತುಂಬಿದ್ದರೂ ಸಹ ಈಗ ನ್ಯಾಯಾಲಯದಲ್ಲಿ ಇದರ ಮೇಲೆ ಬಾದೆಯನ್ನು ಕೂಡ ಹಾಕಿರುತ್ತಾರೆ. ಸದರಿ ಸಾಲವನ್ನು ರೈತರು ತುಂಬದ ರೀತಿಯಲ್ಲಿ ರೈತರಿಗೆ ಕಿರುಕುಳ ನೀಡದಂತೆ ಹಾಗೂ ನ್ಯಾಯಾಲಯದಲ್ಲಿ ರೈತರ ಮೇಲೆ ಹಾಕಿರುವ ನಾವೆಗಳನ್ನು ಹಿಂಪಡೆಯಲು ಹಾಗೂ ಸದರಿ ಸೊಸೈಟಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಲಾಯಿತು.

ಈ ಪ್ರತಿಭಟನೆ ಯಲ್ಲಿ ಜಿಲ್ಲಾ ಅಧ್ಯಕ್ಷರಾದ ಬಸವರಾಜ ರು. ಮೊಕಾಶಿ, ರಾಜ್ಯ ಮಹಿಳಾ ಸಂಚಾಲಕರಾದ ಪಾರ್ವತಿ ಈ. ಕಳಸಣ್ಣವರ, ಗೌರವ ಅಧ್ಯಕ್ಷರಾದ ಕಲಗೌಡ ಬಾ. ಪಾಟೀಲ, ತಾಲೂಕಾ ಅಧ್ಯಕ್ಷರಾದ ಬಸವರಾಜ ಕೆ. ಪಾಟೀಲ, ತಾಲೂಕಾ ಉಪಾಧ್ಯಕ್ಷರಾದ ವೈಜು ಲ. ಲೂಮ್ಯಾಚೆ, ಗ್ರಾಮ ಘಟಕ ಅಧ್ಯಕ್ಷರಾದ ಅದ್ಭುತ ಕೆ. ಮುಚ್ಚಾದರ, ರೈತರ ಮುಖಂಡರುಗಳಾದ ಪರಶುರಾಮ ಸ. ರೇಡೇಕರ, ಮಾರುತಿ ಪ. ಬುರ್ಲಿ ಹಾಗೂ ಅನೇಕ ಮುಖಂಡರುಗಳು ಉಪಸ್ಥಿತರಿದ್ದರು.

error: Content is protected !!