12/12/2025
IMG-20250714-WA0017

ಬೆಳಗಾವಿ-14:ಬೆಳಗಾವಿ ಯಲ್ಲಿ ಸೋಮವಾರ ಪ್ರತಿಭಟನೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ, ಅರೇ ಅಲೆಮಾರಿ ಅಧ್ಯಕ್ಷರಾದ ಜಿ. ಪಲ್ಲವಿ ಹಾಗೂ ಇವರ ಆಪ್ತ ಸಹಾಯಕರಾದ ಆನಂದಕುಮಾರ ಏಕಲವ್ಯ ಇವರುಗಳು 07 ಜನ ಮುಖಂಡರುಗಳ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸಿ ಕೂಡಲೇ ವಜಾ ಮಾಡುವಂತೆ ಮನವಿ ಮಾಡಲಾಯಿತು.

ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯದ ಚನ್ನದಾಸರ, ಹೊಲೆಯದಾಸರ್ ಮತ್ತು ಮಾಲದಾಸರ್ ಜನ ಸೇವಾ ಸಮಿತಿ ಬೆಳಗಾವಿ ಜಿಲ್ಲಾ ಘಟಕದಿಂದ ಮಾಜಿ ಸಚಿವರಾದ ಹೆಚ್. ಆಂಜನೇಯ ಇವರ ನೇತೃತ್ವದಲ್ಲಿ ಜು. 05 ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ 49 ಅಲೆಮಾರಿ ಮುಖಂಡರ ಸಭೆಯಲ್ಲಿ 49 ಸಮುದಾಯಗಳ ಕೆಲ ಮುಖಂಡರ ಮೇಲೆ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪಲ್ಲವಿ ಅವರು 49 ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯಗಳ 07 ಜನ ಮುಖಂಡರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ, ಅರೇ ಅಲೆಮಾರಿ ಅಧ್ಯಕ್ಷರಾದ ಜಿ. ಪಲ್ಲವಿ ಮೇಲೆ ಅಲ್ಲೆ ಮಾಡಿ ಆಶ್ಲೀಲ ಶಬ್ದಗಳನ್ನು ಬಳಸಿ ಅವ್ಯಾಚ ಶಬ್ದಗಳಿಂದ ಬೈದು ನಿಂದಿಸಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿರುವುದಾಗಿ ಸುಳ್ಳು ಆರೋಪದ ದೂರು ನೀಡಿದ್ದಾರೆ.

ಸುಳ್ಳು ಆರೋಪಿಸಿ ಸುಳ್ಳು ದೂರು ನೀಡಿರುವ ಅಧ್ಯಕ್ಷರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ ಮತ್ತು ಇವರ ಆಪ್ತ ಸಹಾಯಕರಾದ ಆನಂದಕುಮಾರ ಏಕಲವ್ಯ ಇವರನ್ನು ಹುದ್ದೆಯಿಂದ ಅಮಾನತ್ತುಗೊಳಿಸಿ ಆದೇಶಿಸಬೇಕೆಂದು ಪರಿಶಿಷ್ಟ ಜಾತಿ, ಚನ್ನದಾಸರ, ಹೊಲೆಯದಾಸರ, ರಿ. ಮಾಲದಾಸರ್, ರಿ ಜನ ಸೇವಾ ಸಮಿತಿ (ರಿ) ಪರಿಶಿಷ್ಟ ಜಾತಿ ಅಲೆಮಾರಿ ಸಮುದಾಯದ ಬೆಳಗಾವಿ ಜಿಲ್ಲಾ ಸಮಿತಿ ವತಿಯಿಂದ ಆಗ್ರಹಿಸಲಾಹಿತು. ಒಂದು ವೇಳೆ ಆದೇಶ ಹೊರಡಿಸದೆ ಇದ್ದಲಿ ಮುಂದಿನ ದಿನಮಾನಗಳಲ್ಲಿ ಕರ್ನಾಟಕ ರಾಜ್ಯೋಧ್ಯಾoತ ಜಿಲ್ಲಾಡಳಿತ ಎದರುಗಡೆ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಯಲ್ಲಪ್ಪಾ ಹನಮಂತ ಮಾಳಗೆನ್ನವರ, ಉಪಾಧ್ಯಕ್ಷರಾದ ಸದಾಶಿವ ಅಕ್ಕೆನ್ನವರ, ಪರಶುರಾಮ ಮುರೆನ್ನವರ, ಭೀಮಪ್ಪಾ ಜೋಳನ್ನವರ, ಶಶಿಕಾಂತ ಮುರೆನ್ನವರ, ರಾಜು ಹುಲ್ಲೆನ್ನವರ, ಲಕ್ಷ್ಮಣ ಮುರೆನ್ನವರ, ಸಚಿನ ಮಾಳಗೆನ್ನವರ
ಇತರರು ಸಮಾಜ ಮುಖಂಡರುಗಳು ಉಪಸ್ಥಿತರಿದ್ದರು.

error: Content is protected !!