12/12/2025
IMG_20250712_212030

ನೇಸರಗಿ-12:1999 ರಲ್ಲಿ ಭಾರತ ಪಾಕಿಸ್ತಾನ ಕಾರ್ಗಿಲ್ ಯುದ್ಧದಲ್ಲಿ ನಾವು ಜಯಶಾಲಿ ಆದರೂ ನಮ್ಮ ದೇಶದ ಅನೇಕ ಸೈನಿಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ, ದೇಶ ರಕ್ಷಣೆ ಮಾಡಿ ಹುತಾತ್ಮರಾದರು ಅವರ ನೆನಪಿಗಾಗಿ 26 ಕಾರ್ಗಿಲ್ ವಿಜಯ ಉತ್ಸವ ಪ್ರಯುಕ್ತ ಹುತಾತ್ಮ ಯೋಧರ ಮನೆ ಮನೆಗೆ ತೆರಳಿ, ಅವರ ಪುತ್ತಳಿಗೆ ಸೇನೆಯ ಅಧಿಕಾರಿಗಳಿಂದ ವಿಶಿಷ್ಟ ಗೌರವ ಸಲ್ಲಿಸುವ ಭಾರತೀಯ ಸೇನೆಯ ಯೋಜನೆ ಕಾರ್ಯ ಶ್ಲಾಘನೀಯ ಎಂದು ನಿವೃತ್ತ ಸೈನಿಕ ಹಾಗೂ ನಿವೃತ್ತ ಪಿ ಎಸ್ ಐ ವಾಯ್ ಎಲ್ ಶೀಗಿಹಳ್ಳಿ ಹೇಳಿದರು.
ಅವರು ಸಮೀಪದ ಮೇಕಲಮರಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ 26 ನೇ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಹುತಾತ್ಮ ಯೋಧ ದಿ. ಯಶವಂತ ಕೋಲಕಾರ ಅವರ ಮೂರ್ತಿಗೆ ವಿಶೇಷ ಪೂಜೆ ನೆರವೇರಿಸಿ ಮಾತನಾಡಿದರು.
ರೈತ ಮುಖಂಡ, ಪತ್ರಕರ್ತ ಮಹಾಂತೇಶ ಹಿರೇಮಠ ಮಾತನಾಡಿ ಕಾರ್ಗಿಲ್ ಹುತಾತ್ಮರಿಗೆ ಗೌರವ ಸಲ್ಲಿಸುವದು ಎಲ್ಲ ಭಾರತೀಯರ ಕರ್ತವ್ಯ ಅಗಿದ್ದು ಮಡಿಕೇರಿಯ ಜನರಲ ಕರಿಯಪ್ಪ ಅವರಂತ ಶ್ರೇಷ್ಠ ಸೇನಾ ಹೋರಾಟಗಾರರನ್ನು ನೆನೆಸುವ ಕಾರ್ಯ ಭಾರತೀಯ ಸೇನೆ ಮಾಡಿದ್ದು ಹೆಮ್ಮೆಯ ಕಾರ್ಯ ಹಾಗೂ ಹುತಾತ್ಮರಾದ ಕಾರ್ಗಿಲ್ ಯೋಧರ ಕುಟುಂಬದ ಜೊತೆ ಭಾರತೀಯ ಸೇನೆ ಹಾಗೂ ಇಡೀ ಭಾರತ ದೇಶವೇ ಇದ್ದು ಹುತಾತ್ಮ ಕುಟುಂಬದ ನೆರವಿಗೆ ಸದಾ ನಾವೆಲ್ಲರೂ ಕೈಜೋಡಿಸಬೇಕು ಎಂದರು.
ಈ ಕಾರ್ಗಿಲ್ ವಿಜಯ ಉತ್ಸವದಲ್ಲಿ ಮಾಜಿ ಜಿ ಪಂ ಸದಸ್ಯ ಹಾಗೂ ನೇಸರಗಿ ಬ್ಲಾಕ್ ಕಾಂಗೇಸ್ ಅಧ್ಯಕ್ಷ ನಿಂಗಪ್ಪ ಅರಿಕೇರಿ ಹಾಗೂ ಹೈದರಾಬಾದ ರಿಜಿಮೆಂಟಿನ ಸೇನೆಯ ಅಧಿಕಾರಿಗಳಾದ ನಾಯಕ ಸುಬೇದಾರ ತಿಲಕ್ ಸಿ ಎಲ್, ಆರ್ ಎಚ್ ಎಮ್ ರಾಜೇಶ, ಹವಾಲ್ದಾರ ಲಕ್ಷ್ಮಣ, ಹವಾಲ್ದಾರ ಸಾಯೋಜ, ಹವಾಲ್ದಾರ ಸಂದೀಪ ಅವರುಗಳು ಹುತಾತ್ಮ ಯೋಧ ದಿ. ಯಶವಂತ ಕೋಲಕಾರ ಅವರ ಪುತ್ತಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಹುತಾತ್ಮ ಹೋಧರ ಪತ್ನಿ ಶ್ರೀಮತಿ ಸಾವಿತ್ರಿದೇವಿ ಯಶವಂತ ಕೋಲಕಾರ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷ ಶ್ರೀಮತಿ ಭಾರತಿ ತಿಗಡಿ, ಉಪಾಧ್ಯಕ್ಷ ಕಾಶಿಮ್ ಜಮಾದಾರ, ನೇಸರಗಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ ಸೋಮಣ್ಣವರ, ಮಂಜುನಾಥ ಹುಲಮನಿ, ಬಾಬು ಹೊಸಮನಿ, ಶಂಕರ ಬಡಿಗೇರ, ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು, ನೇಸರಗಿ, ಇಂಚಲ, ಯರಗಟ್ಟಿ ಸೇರಿದಂತೆ ಅನೇಕ ಮಾಜಿ ಸೈನಿಕರ ಸಂಘದ ಸದಸ್ಯರು, ನಿವೃತ್ತ ಹಾಗೂ ಕಾರ್ಯ ನಿರತ ಸೈನಿಕರು, ಅವರ ಕುಟುಂಬಸ್ಥರು, ಮೇಕಲಮರಡಿ ಗ್ರಾಮದ ಹಿರಿಯರು, ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

error: Content is protected !!