29 Nov 2026, 08:05:06 AM|
Gold₹12607/gGold24K ₹12,607/g - 22K ₹11,556/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Districts Belagavi | Politics News

ದೇಶ, ಸಂವಿಧಾನಕ್ಕೆ ಅವಮಾನ ಮಾಡುವುದೇ ಕಾಂಗ್ರೆಸ್‌ನ ಚಾಳಿ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್. 

ದೇಶ, ಸಂವಿಧಾನಕ್ಕೆ ಅವಮಾನ ಮಾಡುವುದೇ ಕಾಂಗ್ರೆಸ್‌ನ ಚಾಳಿ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್. 

ಬೆಳಗಾವಿ-28: ದೇಶ ಹಾಗೂ ಸಂವಿಧಾನಕ್ಕೆ ಅವಮಾನ ಮಾಡುವುದೇ ಕಾಂಗ್ರೆಸ್‌ನ ಕೆಲಸವಾಗಿದೆ. 1947ರಿಂದಲೂ ಅವರು ಇದನ್ನೇ ಮಾಡಿಕೊಂಡು ಬಂದಿದ್ದಾರೆ. ರಾಹುಲ್ ಗಾಂಧಿ ಪ್ರತಿದಿನ ಸುಳ್ಳು ಹೇಳುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶನಿವಾರ 'ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ತೊಲಗಿಸಿ' ಅಭಿಯಾನದಡಿ ಆಯೋಜಿಸಲಾಗಿದ್ದ 'ಪ್ರಬುದ್ಧರೊಂದಿಗೆ ಸಂವಾದ' ಕಾರ್ಯಕ್ರಮದಲ್ಲಿ  ಮಾತನಾಡಿದರು ಅವರು,
"ಮರಾಠಿ ಮತ್ತು ಕನ್ನಡ ಭಾಷೆಗಳು ಬೇರೆಯಾದರೂ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳು ಬೇರೆಯಾದರೂ ನಾವೆಲ್ಲರೂ ಒಂದೇ. ನಮ್ಮಲ್ಲಿ ಯಾವುದೇ ಭೇದಭಾವವಿಲ್ಲ" ಎನ್ನುವ ಮೂಲಕ ಭಾಷಾ ಸೌಹಾರ್ದತೆಯ ಸಂದೇಶಗಳನ್ನು ಸಾರಿದ ಫಡ್ನವಿಸ್, ರಾಷ್ಟ್ರ ರಾಜಕಾರಣದ ಕುರಿತು ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.
*ಗಲಭೆ ಸೃಷ್ಟಿಸುವ ಹುನ್ನಾರ:*
ದೇಶದಲ್ಲಿ ರಾಹುಲ್ ಗಾಂಧಿ ಹಾಗೂ ಕೆಲವು 'ಜೆನ್-ಝೀ' (Gen-Z) ಗುಂಪುಗಳು ಸೇರಿ ದೇಶವನ್ನು ಹಾಳು ಮಾಡುವ ಕೆಲಸ ಮಾಡುತ್ತಿವೆ. ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಂತೆ ಭಾರತದಲ್ಲೂ ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆ ದೇಶಗಳ ಇಂದಿನ ಪರಿಸ್ಥಿತಿ ಏನಾಗಿದೆ ಎಂಬುದನ್ನು ಗಮನಿಸಬೇಕೆಂದರು.  ಹೊರದೇಶದವರನ್ನು ಕರೆಸಿ ಸಾಮಾಜಿಕ ಜಾಲತಾಣಗಳ ಮೂಲಕ ದೇಶದ ಬಗ್ಗೆ ತಪ್ಪು ತಿಳುವಳಿಕೆ ಹರಡುವ ಪ್ರಯತ್ನ ನಡೆಯುತ್ತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

*ವಿಶ್ವದ ಎರಡನೇ ಆರ್ಥಿಕ ಶಕ್ತಿಯಾಗಲಿದೆ ಭಾರತ:*
ರಾಹುಲ್ ಗಾಂಧಿ ಕೆಂಪು ಪುಸ್ತಕವೊಂದನ್ನು ಕೈಯಲ್ಲಿ ಹಿಡಿದು ತಿರುಗಾಡುತ್ತಿದ್ದಾರೆ. ಆ ಪುಸ್ತಕದಲ್ಲಿ ಏನಿದೆ ಎಂಬುದೇ ಅವರಿಗೆ ತಿಳಿದಿಲ್ಲ. ಈ ಮೂಲಕ ಅವರು ಸಂವಿಧಾನಕ್ಕೂ ಮತ್ತು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೂ ಅವಮಾನ ಮಾಡುತ್ತಿದ್ದಾರೆ. ಇಂಥವರು ದೇಶಕ್ಕೆ ಬೇಕೇ?" ಎಂದು ಪ್ರಶ್ನಿಸಿದರು.
ವಿಶ್ವಬ್ಯಾಂಕ್ ವರದಿಯಂತೆ ಭಾರತವು ಕಳೆದ 12 ವರ್ಷಗಳಲ್ಲಿ ಬಡತನ ನಿರ್ಮೂಲನೆಯಲ್ಲಿ ದೊಡ್ಡ ಸಾಧನೆ ಮಾಡಿದ್ದು, ಬಡತನದ ಪ್ರಮಾಣ ಶೇ. 2.07ಕ್ಕೆ ಇಳಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ಏಷ್ಯಾದಲ್ಲಿ ಮತ್ತು ವಿಶ್ವದ ಅರ್ಥವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ. ಸದ್ಯ ಮೂರನೇ ಸ್ಥಾನದಲ್ಲಿರುವ ಭಾರತ, ಮುಂಬರುವ ದಿನಗಳಲ್ಲಿ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ಇದನ್ನು ಸಹಿಸಲಾಗದೆ ವಿರೋಧಿಗಳಿಗೆ ಹೊಟ್ಟೆಕಿಚ್ಚು ಶುರುವಾಗಿದೆ" ಎಂದು ತಿರುಗೇಟು ನೀಡಿದರು.

*ದೇಶ ರಕ್ಷಣೆಗೆ ನಾವೆಲ್ಲ ಒಂದಾಗಬೇಕು - ಡಾ. ಅಶ್ವತ್ಥನಾರಾಯಣ:*
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಕೆಲವು ಸಂಘಟಕರು ದೇಶದಲ್ಲಿ ಗೊಂದಲ ಹಾಗೂ ಅರಾಜಕತೆ ಸೃಷ್ಟಿಸಿ, ದೇಶವನ್ನು ಒಡೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಇಂತಹ ಶಕ್ತಿಗಳನ್ನು ಮೆಟ್ಟಿ ನಿಲ್ಲುವ ತಾಕತ್ತು ನಮ್ಮ ದೇಶಕ್ಕಿದೆ. ಮಹಾರಾಷ್ಟ್ರವನ್ನು ಸಮರ್ಥವಾಗಿ ರಕ್ಷಿಸುತ್ತಿರುವ ದೇವೇಂದ್ರ ಫಡ್ನವಿಸ್ ಅವರಂತೆ, ನಾವೆಲ್ಲರೂ ಸೇರಿ ದುಷ್ಟ ಶಕ್ತಿಗಳಿಂದ ದೇಶವನ್ನು ಕಾಪಾಡಬೇಕಿದೆ ಎಂದರು.
ಇದಕ್ಕೂ ಮುನ್ನ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ, ಸಸಿಗೆ ನೀರೆರೆಯುವ ಮೂಲಕ ಹಾಗೂ ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ವೇಳೆ ಸಂಸದ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಶಾಸಕ ಅನಿಲ್ ಬೆನಕೆ, ಸಂಜಯ್ ಪಾಟೀಲ್, ಮೇಯರ್ ಪ್ರೀತಿ ಕಾಮಕರ, ಉಪಮೇಯರ್ ಹಣಮಂತ ಕೊಂಗಾಲಿ, ಡಾ. ಪ್ರಭಾಕರ್ ಕೋರೆ ಸೇರಿದಂತೆ ಹಲವು ಮುಖಂಡರು ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Author
Vishwanath Desai
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*ಬಡಸ್ ಕೆ.ಎಚ್. ಗ್ರಾಮದ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ 20 ಲಕ್ಷ ರೂ. ಅನುದಾನ: ಚನ್ನರಾಜ ಹಟ್ಟಿಹೊಳಿ ಅವರಿಂದ ಚೆಕ್ ವಿತರಣೆ*ಮಂಡೋಳಿ-ಖಾದರವಾಡಿ ಗ್ರಾಮಗಳಿಗೆ ₹2.50 ಕೋಟಿ ವೆಚ್ಚದಲ್ಲಿ ಸಂಪರ್ಕ ರಸ್ತೆ ನಿರ್ಮಾಣ*ಆಟೋಕ್ಯಾಡ್ ತಂತ್ರಜ್ಞಾನ ಮತ್ತು ವಿನ್ಯಾಸ ಕ್ಷೇತ್ರದ ಹೊಸ ಸಾಧ್ಯತೆಗಳ ಅನಾವರಣ: ನ. 30ರಂದು ‘AutoCAD ELEVATE 360’*ಸರ್ಕಾರದ ಆರೋಗ್ಯ ಯೋಜನೆಗಳಡಿ ಮರಾಠಾ ಮಂಡಳ ದಂತ ಕಾಲೇಜು ಮಹತ್ವದ ಸಾಧನೆ ಅಧ್ಯಕ್ಷೆ ಡಾ. ರಾಜಶ್ರೀ ನಾಗರಾಜುದೇಶ, ಸಂವಿಧಾನಕ್ಕೆ ಅವಮಾನ ಮಾಡುವುದೇ ಕಾಂಗ್ರೆಸ್‌ನ ಚಾಳಿ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್. ಮಾಜಿ ಶಾಸಕರಿಗೆ ಲಕ್ಷಾಂತರ ರೂ. ಸೌಲಭ್ಯ; ಜನಸಾಮಾನ್ಯರ ಬೇಡಿಕೆಗಳಿಗೆ ಆರ್ಥಿಕ ಹೊರೆ ನೆಪ: ಭೀಮಪ್ಪ ಗಡಾದ ಆಕ್ರೋಶ.‌ಫಡ್ನವೀಸ್  ಇಂದು ಬೆಳಗಾವಿಗೆಅಮಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೂತನ ಸದಸ್ಯರ ಅವಿರೋಧ ಆಯ್ಕೆಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದಿಂದ ಗುಡ್ಡಾಪುರಕ್ಕೆ 25ನೇ ವರ್ಷದ ಪಾದಯಾತ್ರೆ *ಲಿಂಗಾಯತರ ಮೇಲಿನ ಸರ್ಕಾರದ ದೌರ್ಜನ್ಯ ದಿನ 2ನೇ ವರ್ಷದ ನೋವಿನ ನೆನಪಿನಲ್ಲಿ ಸೂರ್ಯ ಹುಟ್ಟುದಾಗಿನಿಂದ - ಸೂರ್ಯ ಮುಳುಗುವವರೆಗೂ  ಉಪವಾಸ ಸತ್ಯಾಗ್ರಹ*