28 Nov 2026, 08:08:55 AM|
Gold₹12654/gGold24K ₹12,654/g - 22K ₹11,589/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi

ಫಡ್ನವೀಸ್  ಇಂದು ಬೆಳಗಾವಿಗೆ

ಫಡ್ನವೀಸ್  ಇಂದು ಬೆಳಗಾವಿಗೆ

ಬೆಳಗಾವಿ-28: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನವೆಂಬರ್ 28 ಇಂದು ಬೆಳಗಾವಿಗೆ ಭೇಟಿ ನೀಡಲಿದ್ದು, ನಗರದ ಪ್ರಬುದ್ಧ ನಾಗರಿಕರು ಹಾಗೂ ಸಾಮಾಜಿಕ ಕಾರ್ಯಕರ್ತರೊಂದಿಗೆ ಮಹತ್ವದ ಸಂವಾದ ನಡೆಸಲಿದ್ದಾರೆ.
ನಗರದ ಧರ್ಮನಾಥ ಭವನದಲ್ಲಿ ಮಧ್ಯಾಹ್ನ 3.30ಕ್ಕೆ ‘ಸೇವ್ ಡೆಮಾಕ್ರಸಿ ಫ್ರಮ್ ಅರಾಜಕತೆ’ (ಅರಾಜಕತೆಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಿ) ಎಂಬ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರಜಾಪ್ರಭುತ್ವದ ರಕ್ಷಣೆ, ದೇಶದ ಸುರಕ್ಷತೆ ಹಾಗೂ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಫಡ್ನವೀಸ್ ಅವರು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಶುಕ್ರವಾರ ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಅನಿಲ್ ಬೆನಕೆ, ನ್ಯಾಯವಾದಿ ಎಂ.ಜಿ ಜರಳಿ ತಿಳಿಸಿದರು. 
ಅಲ್ಲದೆ ವಿರೋಧ ಪಕ್ಷಗಳ ಅಪಪ್ರಚಾರ ಹಾಗೂ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳ ಕುರಿತು ಜನಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. 
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಕೂಡ ಪಾಲ್ಗೊಳ್ಳಲಿದ್ದಾರೆ. ಸುಮಾರು 650ರಿಂದ 700 ಮಂದಿ ಪ್ರಬುದ್ಧ ನಾಗರಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಬಿಜೆಪಿ ಮುಖಂಡ ಎಂ.ಬಿ. ಝೀರಲಿ ಹೇಳಿದರು. 
ಜಾತಿ, ಧರ್ಮ ಹಾಗೂ ಭಾಷೆಯ ಭೇದ ಮರೆತು ಬೆಳಗಾವಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ್ ಬೆನಕೆ ಮನವಿ ಮಾಡಿದ್ದಾರೆ.

Author
Vishwanath Desai
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಫಡ್ನವೀಸ್  ಇಂದು ಬೆಳಗಾವಿಗೆಅಮಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೂತನ ಸದಸ್ಯರ ಅವಿರೋಧ ಆಯ್ಕೆಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದಿಂದ ಗುಡ್ಡಾಪುರಕ್ಕೆ 25ನೇ ವರ್ಷದ ಪಾದಯಾತ್ರೆ *ಲಿಂಗಾಯತರ ಮೇಲಿನ ಸರ್ಕಾರದ ದೌರ್ಜನ್ಯ ದಿನ 2ನೇ ವರ್ಷದ ನೋವಿನ ನೆನಪಿನಲ್ಲಿ ಸೂರ್ಯ ಹುಟ್ಟುದಾಗಿನಿಂದ - ಸೂರ್ಯ ಮುಳುಗುವವರೆಗೂ  ಉಪವಾಸ ಸತ್ಯಾಗ್ರಹ*ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಮಗ್ರ ಕಾರ್ಯಯೋಜನೆ ರೂಪಿಸಲು ಸರ್ಕಾರಕ್ಕೆ ಆಗ್ರಹಹೆಚ್ಚಿನ ಬಡ್ಡಿ ಆಮಿಷ: ತಾಯಿ-ಮಗನಿಂದ 133 ಕೋಟಿ ರೂ. ವಂಚನೆಬೆಳಗಾವಿಯಲ್ಲಿ ಸಂವಿಧಾನ ಸಮರ್ಪಣಾ ದಿನ ಆಚರಣೆ; ಅಂಬೇಡ್ಕರ್ ಉದ್ಯಾನದಲ್ಲಿ ಸಂವಿಧಾನ ಪ್ರತಿಜ್ಞೆ*ಕರ್ನಾಟಕದ ಮರಾಠಾ ಸಮುದಾಯದ ಏಕತೆಗೆ ಸಕಲ್ ಮರಾಠಾ ಸಮಾಜದ ಮಹತ್ವದ ನಿರ್ಧಾರ*ಮೌಲ್ಯಗಳ ಭಂಡಾರ ಸ ರಾ ಸುಳಕೂಡೆಯವರ 'ಸರಳ ಶತಕ 'ವಿದ್ಯಾರ್ಥಿಗಳ ಮೂರು ಪುಸ್ತಕ ಬಿಡುಗಡೆ