27 Nov 2026, 06:58:21 AM|
Gold₹12128/gGold24K ₹12,128/g - 22K ₹11,107/gTap for full details
Press ID & Credential Portal
Apply / Verify  ➔
LIVE TV State NewsLocalCrimeNationalInternationalPoliticsBusinessEditorialEducationTechnologyEntertainmentSportsHealthFeatureTraveling
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News | Districts Belagavi | Politics News

ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಮಗ್ರ ಕಾರ್ಯಯೋಜನೆ ರೂಪಿಸಲು ಸರ್ಕಾರಕ್ಕೆ ಆಗ್ರಹ

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪ್ರತ್ಯೇಕ ಆದ್ಯತೆ ಅಗತ್ಯ: ಮಹಾಂತೇಶ ಕವಟಗಿಮಠ

ಬೆಳಗಾವಿ-26: ರಾಜ್ಯದ ಅಭಿವೃದ್ಧಿಯಲ್ಲಿ ಉತ್ತರ ಮತ್ತು ದಕ್ಷಿಣ ಕರ್ನಾಟಕದ ನಡುವೆ ತೀವ್ರ ಪ್ರಾದೇಶಿಕ ಅಸಮತೋಲನವಿದ್ದು, ಇದನ್ನು ನಿವಾರಿಸಲು ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪ್ರತ್ಯೇಕ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್ತಿನ ಮಾಜಿ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಆಗ್ರಹಿಸಿದರು.
ಗುರುವಾರ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣವಾಗಿ ಏಳು ದಶಕಗಳು ಕಳೆದರೂ ಉತ್ತರ ಕರ್ನಾಟಕದ ಹಿಂದುಳಿದಿರುವಿಕೆ ನಿವಾರಣೆಯಾಗಿಲ್ಲ. ರಾಜ್ಯದ ಶೇ.42ರಷ್ಟು ಜನಸಂಖ್ಯೆ ಹಾಗೂ ಶೇ.53ರಷ್ಟು ಭೌಗೋಳಿಕ ವಿಸ್ತೀರ್ಣ ಹೊಂದಿರುವ ಈ ಭಾಗ ರಾಜ್ಯದ ಒಟ್ಟು ಆರ್ಥಿಕ ಉತ್ಪನ್ನಕ್ಕೆ ಕೇವಲ ಶೇ.20ರಷ್ಟು ಕೊಡುಗೆ ನೀಡುತ್ತಿದೆ. ಬಡತನ ಮತ್ತು ನಿರುದ್ಯೋಗವೂ ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 
ನಂಜುಂಡಪ್ಪ ಸಮಿತಿ ಗುರುತಿಸಿದ್ದ 114 ಹಿಂದುಳಿದ ತಾಲೂಕುಗಳ ಪೈಕಿ 85 ತಾಲೂಕುಗಳು ಉತ್ತರ ಕರ್ನಾಟಕದಲ್ಲಿವೆ. ಆದರೆ ಸಮಿತಿಯ ಶಿಫಾರಸುಗಳು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಸುವರ್ಣಸೌಧದಲ್ಲಿ ಅಧಿವೇಶನ ನಡೆಸುವುದಷ್ಟೇ ಸಾಲದು. ಅಧಿವೇಶನದ ಬಳಿಕ ಸಚಿವ ಸಂಪುಟ ಸಭೆ ನಡೆಸಿ ಈ ಭಾಗದ ಅಭಿವೃದ್ಧಿಗೆ ಕೈಗೊಂಡ ಕ್ರಮಗಳ ಕುರಿತು ವರದಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.  
ಕೃಷ್ಣಾ ಮೇಲ್ದಂಡೆ, ಮಹದಾಯಿ ಸೇರಿದಂತೆ ಬಾಕಿ ಇರುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಕೈಗಾರಿಕೆಗಳಿಗೆ ವಿಶೇಷ ಸಬ್ಸಿಡಿ, ತೆರಿಗೆ ವಿನಾಯಿತಿ ನೀಡಬೇಕು. ಖಾಲಿ ಇರುವ 30 ಸಾವಿರ ಶಿಕ್ಷಕರ ಹಾಗೂ 5 ಸಾವಿರ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಬೇಕು. ಹುಬ್ಬಳ್ಳಿ-ಧಾರವಾಡಕ್ಕೆ ಮೆಟ್ರೋ, ರಾಯಚೂರು ಮತ್ತು ವಿಜಯಪುರಕ್ಕೆ ವಿಮಾನ ನಿಲ್ದಾಣ ಹಾಗೂ ಗದಗ-ವಾಡಿ ರೈಲು ಮಾರ್ಗಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕಕ್ಕೆ 371(ಜೆ) ಆಶಯದಂತೆ ಅನುದಾನ ಒದಗಿಸುವುದರ ಜತೆಗೆ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು. ಅಭಿವೃದ್ಧಿ ಮಂಡಳಿಗೆ ವಾರ್ಷಿಕ ₹5,000 ಕೋಟಿ ಅನುದಾನ ನೀಡಬೇಕು. ಬೆಳಗಾವಿ ಅಥವಾ ಹುಬ್ಬಳ್ಳಿಯಲ್ಲಿ ಜಯದೇವ ಮತ್ತು ಕಿದ್ವಾಯಿ ಮಾದರಿಯ ಆಸ್ಪತ್ರೆಗಳನ್ನು ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.
ವಿಜಯಪುರದ ದ್ರಾಕ್ಷಿ, ಬೆಳಗಾವಿಯ ಕಬ್ಬು, ರಾಯಚೂರಿನ ಭತ್ತ, ಕಲಬುರಗಿಯ ತೊಗರಿ ಹಾಗೂ ಬಳ್ಳಾರಿಯ ಕಬ್ಬಿಣದ ಅದಿರಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸಬೇಕು. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿ ವಲಸೆ ತಡೆಯಬೇಕು. 'ಒಂದು ರಾಜ್ಯ, ಒಂದೇ ಅಭಿವೃದ್ಧಿ' ಎಂಬ ಆಶಯ ಕಾರ್ಯರೂಪಕ್ಕೆ ಬಂದಾಗ ಮಾತ್ರ ಸಮಗ್ರ ಕರ್ನಾಟಕದ ಅಭಿವೃದ್ಧಿ ಸಾಧ್ಯ ಎಂದು ಕವಟಗಿಮಠ ಪ್ರತಿಪಾದಿಸಿದ್ದಾರೆ.
ಈ ವೇಳೆ ನ್ಯಾಯವಾದಿ ಎಂಬಿ ಜರಳಿ, ಡಾ. ರವಿ ಪಾಟೀಲ, ಜಿಲ್ಲಾ ಅಧ್ಯಕ್ಷ ಸುಭಾಸ್ ಪಾಟೀಲ, ಉಜ್ವಲಾ ಬಡವಾನಾಛೇ ಸೇರಿದಂತೆ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Author
Vishwanath Desai
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
Comments (0)
Comments appear after approval.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
*ಲಿಂಗಾಯತರ ಮೇಲಿನ ಸರ್ಕಾರದ ದೌರ್ಜನ್ಯ ದಿನ 2ನೇ ವರ್ಷದ ನೋವಿನ ನೆನಪಿನಲ್ಲಿ ಸೂರ್ಯ ಹುಟ್ಟುದಾಗಿನಿಂದ - ಸೂರ್ಯ ಮುಳುಗುವವರೆಗೂ  ಉಪವಾಸ ಸತ್ಯಾಗ್ರಹ*ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಮಗ್ರ ಕಾರ್ಯಯೋಜನೆ ರೂಪಿಸಲು ಸರ್ಕಾರಕ್ಕೆ ಆಗ್ರಹಹೆಚ್ಚಿನ ಬಡ್ಡಿ ಆಮಿಷ: ತಾಯಿ-ಮಗನಿಂದ 133 ಕೋಟಿ ರೂ. ವಂಚನೆಬೆಳಗಾವಿಯಲ್ಲಿ ಸಂವಿಧಾನ ಸಮರ್ಪಣಾ ದಿನ ಆಚರಣೆ; ಅಂಬೇಡ್ಕರ್ ಉದ್ಯಾನದಲ್ಲಿ ಸಂವಿಧಾನ ಪ್ರತಿಜ್ಞೆ*ಕರ್ನಾಟಕದ ಮರಾಠಾ ಸಮುದಾಯದ ಏಕತೆಗೆ ಸಕಲ್ ಮರಾಠಾ ಸಮಾಜದ ಮಹತ್ವದ ನಿರ್ಧಾರ*ಮೌಲ್ಯಗಳ ಭಂಡಾರ ಸ ರಾ ಸುಳಕೂಡೆಯವರ 'ಸರಳ ಶತಕ 'ವಿದ್ಯಾರ್ಥಿಗಳ ಮೂರು ಪುಸ್ತಕ ಬಿಡುಗಡೆ ಬೆಳಗಾವಿಯಲ್ಲಿ ನಾಳೆ ‘ಸಂವಿಧಾನ ಸಮರ್ಪಣಾ ದಿನ’; ಡಾ. ಬಿ.ಆರ್. ಅಂಬೇಡ್ಕರ್ ಉದ್ಯಾನದಲ್ಲಿ ವಿವಿಧ ಕಾರ್ಯಕ್ರಮಗಿಟಾರ್ ನುಡಿಸಿ ಹಾಡು ಹಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್; ಉದ್ಯಮಿಗಳ ಮನಗೆದ್ದ ಆತ್ಮೀಯ ಮಾತುಗಳು!ನೂತನ ಸಮುದಾಯ ಭವನವನ್ನು ಉದ್ಘಾಟನೆ