ಮೂಡಲಗಿ-17 : ಮುಸ್ಲಿಂ ಸಮಾಜ ಒಗ್ಗಟ್ಟಿಗೆ ಹೆಸರಾಗಿದ್ದು, ಯಾವುದೇ ಕಾರಣಕ್ಕೂ ನಮ್ಮಲ್ಲಿ ಭಿನ್ನಾಭಿಪ್ರಾಯ ಬೇಡ. ಮಸೀದಿ ಲೆಕ್ಕಪತ್ರದ ಬಗ್ಗೆ ಕೆಲವರಿಗೆ ಗೊಂದಲ ಉಂಟಾಗಿದ್ದು, ಗೊಂದಲಕ್ಕೆ ತೆರೆ ಎಳಿಯೋಣ ಎಂದು ಬಿಟಿಟಿ ಕಮೀಯ ಪ್ರಭಾರಿ ಅಧ್ಯಕ್ಷ ಮಲ್ಲಿಕಜಾನ್ ಕಳ್ಳಿಮನಿ ಹೇಳಿದರು.
ಸೋಮವಾರದಂದು ಪಟ್ಟಣದ ಜುಮ್ಮಾ ಮಸೀದಿ ಮುಂದೆ ಬಿಟಿಟಿ ಕಮೀಟಿ ಆಯೋಜಿಸಿದ ಕಮೀಟಿಯ ಲೆಕ್ಕಪತ್ರ ಬಗ್ಗೆ ವಿವರಣೆ ನೀಡಲು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು,ಜುಮ್ಮಾ ಮಸೀದಿ ಕಟ್ಟಡ ನಿರ್ಮಾಣಕ್ಕಾಗಿ ಸನ್ 2019-20ನೇ ಸಾಲಿನಲ್ಲಿ ಕಮೀಟಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪಟ್ಟಣದ ಮುಸ್ಲಿಂ ಸಮಾಜದ ಜನರಿಂದ 85.84ಲಕ್ಷ ರೂ,ಗಳನ್ನು ದೇಣಿಗೆ ಸಂಗ್ರಹಿಸಲು ತೀರ್ಮಾನಿಸಲಾಗಿತ್ತು. ಆ ಪ್ರಕಾರ 31ಮೇ 2025ರ ಅಂತ್ಯಕ್ಕೆ 67.85ಲಕ್ಷ ರೂ,ಗಳು ಸಂದಾಯವಾಗಿದ್ದು, ಇನ್ನುಳಿದ 29.03ಲಕ್ಷ ರೂ, ಗಳು ಸಂದಾಯವಾಗಬೇಕು. ಹಾಗೂ ಇತರೆ ರೂಪದಲ್ಲಿ ಸಂಗ್ರಹವಾದ 24.54ಲಕ್ಷ ರೂ, ಗಳು ಸೇರಿದಂತೆ ಒಟ್ಟು 92.40ಲಕ್ಷ ರೂ, ಸಮುದಾಯವಾಗಿದ್ದು, ಅದರಲ್ಲಿ ಕಟ್ಟಡಕ್ಕಾಗಿ 91.05ಲಕ್ಷ ರೂ,ಗಳು ಬಳಸಲಾಗಿದ್ದು, 1.35ಲಕ್ಷ ರೂ,ಗಳು ಬ್ಯಾಂಕ್ ಖಾತೆಯಲ್ಲಿ ಜಮಾ ಇದೆ ಇನ್ನೊಂದು ಬ್ಯಾಂಕ್ ಖಾತೆಯಲ್ಲಿ 90 ಸಾವಿರ ಇದ್ದು ಒಟ್ಟು 2.25ಲಕ್ಷ ರೂ, ಉಳಿದಿದೆ ಎಂದರು.
ಇನ್ನು ಕಮೀಟಿ ಅದಿನದಲ್ಲಿ ಇನ್ನೊಂದು ಲೆಕ್ಕಪತ್ರ ವಿಭಾಗವಿದ್ದು, ಕೆಲಸ ಮಾಡುವ ಮೌಲಾನಗಳಿಗೆ ಹಾಗೂ ಇತರೆ ಸಿಬ್ಬಂದಿಗಳಿಗೆ ಮಸೀದಿಯ ಇತರೆ ಖರ್ಚು ವೆಚ್ಚಗಳಿಗೆ ಸನ್ 24-25ನೇ ಸಾಲಿನ ಮಾರ್ಚ್ ಅಂತಕ್ಕೆ ಒಟ್ಟು 5.68ಲಕ್ಷ ರೂ,ಗಳು ಸಂದಾಯವಾಗಿದ್ದು, 5.51ಲಕ್ಷ ರೂ,ಗಳನ್ನು ಸಂಬಳ ನೀಡಲಾಗಿದ್ದು, 17 ಸಾವಿರ ರೂ,ಗಳು, ಕಮೀಟಿಯ ಬಳಿ ಉಳಿದಿದ್ದು, ವಾರ್ಷಿಕ ಸರ್ವ ಸಾಧರಣ ಸಭೆಯನ್ನ ಕರೆಯಬೇಕೆಂದರೆ ಅದು ನ್ಯಾಯಾಲಯದ ಹಂತದಲ್ಲಿ ಇರುವುದರಿಂದ ವಿಳಂಬವಾಗಿದ್ದು, ಶೀಘ್ರವಾಗಿ ಅದನ್ನು ಪರಿಹರಿಸಿ ಸರ್ವ ಸಾಧರಣ ಸಭೆಯನ್ನು ಆಯೋಜಿಸಲಾಗುವುದೆಂದು ಹೇಳಿದರು.
ಕಮೀಟಿಯ ಲೆಕ್ಕಪತ್ರದ ವಿವರಣೆಗಾಗಿ ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹ ನಡೆಸಿದ ಮೈನುದ್ದಿನ ಪಟೇಲ ಹಾಗೂ ಸಾರ್ವಜನಿಕರಿಗೆ ದಾಖಲೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಪಿಎಸ್ಐ ಬಿ ಎಚ್ ಕುಂಬಾರ, ಬಿಟಿಟಿ ಕಮೀಟಿ ಕಾರ್ಯದರ್ಶಿ ಮದಾರ ಮುಗಟಖಾನ್, ಮುಖಂಡರಾದ ಅಮೀರಸಾಬ್ ಥರಥರಿ, ಹಸನಸಾಬ್ ಮುಗಟಖಾನ್, ಇಮ್ಮಾಹುಸೇನ ತಾಂಬೋಳಿ, ಹಾಜಿಸಾಬ್ ಪೀರಜಾದೆ, ಯಾಕೋಸಾಬ್ ತಾಂಬೋಳಿ, ರಶಿದ್ ಪಠಾನ್, ಗಪಾರ್ ಬಳಿಗಾರ ಹಾಗೂ ಕಮೀಟಿ ಸದಸ್ಯರು, ಪೊಲೀಸ್ ಸಿಬ್ಬಂದಿಗಳು ಮತ್ತು ಅನೇಕರು ಹಾಜರಿದ್ದರು.
