11/12/2025
IMG-20250616-WA0003

ಮಾಜಿ ಕೇಂದ್ರ ಸಚಿವ ದಿ. ಬಿ.ಶಂಕರಾನಂದ್ ಅವರ ಒಡೆತನದ ಆಸ್ತಿ ಮೇಲೂ ಕನ್ನ ಹಾಕಿದ ಖದೀಮರು

ಬೆಳಗಾವಿ-16: ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಮತ್ತೊಬ್ಬರ ಆಸ್ತಿ ಮನೆ ಜಮೀನು ಮಾರಾಟ ಮಾಡುವ ಜಾಲ ಸಕ್ರೀಯವಾಗಿ ಕೆಲಸ ಮಾಡುತ್ತಿದೆ. ಕಂಡ-ಕಂಡವರ ಆಸ್ತಿಯನ್ನು ನಕಲಿ ದಾಖಲಾತಿಗಳ ಮೂಲಕ ನಾವೇ ಅದರ ಮಾಲೀಕರು ಎಂದು ಎದುರಿನವರಿಗೆ ನಂಬಿಸಿ ಮಾರಾಟ ಮಾಡುವ ಗ್ಯಾಂಗ್​​ಗಳು ಕೆಲಸ ಮಾಡುತ್ತಿವೆ. ಇದನ್ನು ತೊಡೆದು ಹಾಕಲು ಖಾಕಿ ಪಡೆ ಕೆಲಸ ಮಾಡುತ್ತಿದ್ದು, ಇದೀಗ ನಕಲಿ ದಾಖಲಾತಿ ಸೃಷ್ಟಿಸಿ ಕೇಂದ್ರದ ಮಾಜಿ ಕೇಂದ್ರ ಸಚಿವ ದಿ. ಬಿ.ಶಂಕರಾನಂದ್ ಅವರ ಒಡೆತನದ ಆಸ್ತಿಗೆ ಕನ್ನ ಹಾಕಿರುವವರ ವಿರುದ್ಧ ಪ್ರಕರಣ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು…ಜಿಲ್ಲೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮತ್ತೊಬ್ಬರ ಆಸ್ತಿಗಳನ್ನು ಮಾರಾಟ ಮಾಡುವ ದಂಧೆ ಜೋರಾಗಿ ನಡೆದಿದೆ. ಕಳೆದ ವರ್ಷಗಳಿಂದ ಬೇರೆಯವರ ಆಸ್ತಿಗಳು ತಮ್ಮದೆಂದು ನಕಲಿ ದಾಖಲೆ ಸೃಷ್ಟಿ ಮಾಡಿ ಮತ್ತೊಬ್ಬರಿಗೆ ಮಾರಾಟ ಮಾಡಿರುವ ಆಧಿಕ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಕುರಿತು ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ಕೆಲ ಪ್ರಕರಣಗಳಲ್ಲಿ ಆರೋಪಿತರ ಬಂಧನವೂ ಆಗಿದೆ. ಇಂಥಹ ನಕಲಿಗಳ ಕಣ್ಣು ಇದೀಗ ಮಾಜಿ ಕೇಂದ್ರ ಸಚಿವ ದಿ. ಬಿ.ಶಂಕರಾನಂದ್ ಅವರ ಒಡೆತನದ ಮೇಲೂ ಬಿದ್ದಿದೆ. ದಾಖಲೆಗಳನ್ನು ನಕಲಿ ಮಾಡಿ ಮತ್ತೊಬ್ಬರಿಗೆ ತಮ್ಮದೇ ಜಮೀನು ಎಂದು ಬಿಂಬಿಸಿದ್ದಾರೆ. ಸದಾಶಿವನಗರದ ಡಾ.ಜಯಶ್ರೀ ಬಿ.ಶಂಕರಾನಂದ್ ಅವರ ಒಡೆತನದ ಆಸ್ತಿಯನ್ನು ನಕಲಿ ದಾಖಲೆಗಳನ್ನು ತಯಾರಿಸಿ ಸ್ವಾಧೀನಪಡಿಸಿಕೊಳ್ಳಲು ಯತ್ನಿಸಿದ ಎಂಟು ಜನರು ಮತ್ತು ಇತರರ ವಿರುದ್ಧ ಬೆಳಗಾವಿ ಖಡೇ ಬಜಾರ ಪೊಲೀಸ್‌ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಹುಕ್ಕೇರಿ ತಾಲೂಕಿನ ಕೋಚರಿ ಗ್ರಾಮದ ಸುನೀಲ ತಳವಾರ, ಅಜಂ ನಗರದ ಆಯೂಬ್ ನೂರಹಮ್ಮದ ಪಾರ್ಥನಹಳ್ಳಿ, ರಾಜು ವರ್ಗಿಸ್, ಮಲಿಕ್ ಜಾನ್ ಮಬ್ಬಾನಿ, ಮೋಹನ ಶಿಂಧೆ,
ಸುಳೇಬಾವಿ ಗ್ರಾಮದ ಇಸ್ಮಾಯಿಲ್ ಸ್ಯಾಮ್‌ಸುದ್ದೀನ್, ಅಂದಿನ ಬೆಳಗಾವಿ ಸಬ್ ರಜಿಸ್ಟಾರ್, ಜಿಲ್ಲಾ ನೋಂದಣಿ ಅಧಿಕಾರಿ ಮೇಲೆ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ: ಡಾ.ಜಯಶ್ರೀ ಬಿ.ಶಂಕರಾನಂದ ಹೆಸರಿನಲ್ಲಿ ಜಿಲ್ಲೆಯ ಸದಾಶಿವ ನಗರದಲ್ಲಿ ಸರ್ವೆ ಸಂಖ್ಯೆ 1416 (ಪ್ಲಾಟ್ ಸಂಖ್ಯೆ 01) ನಲ್ಲಿರುವ ಸುನೀಲ ಶಿವಪ್ಪ ತಳವಾರ ಎಂಬುವವರ ನಕಲಿ ದಾಖಲೆ 5 ಗುಂಟೆ ಖಾಲಿ ಜಾಗವನ್ನು ನೂರಹಮ್ಮದ್ ಎಂಬುವರಿಗೆ ಮಾರಾಟ ಮಾಡಿದ್ದಾರೆ. ಈ ಸೃಷ್ಟಿಸಿ ನಕಲಿ ಸಹಿ ಮಾಡಿ ಜಾಗವನ್ನು 2024ರಲ್ಲಿ ಆಯೂಬ್ ಪ್ರಕರಣದಲ್ಲಿ ಅಧಿಕಾರಿಗಳು ಸೇರಿಕೊಂಡು ಆಸ್ತಿ ಕಬಳಿಸಿದ್ದಾರೆ. ಈ ಕುರಿತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ರೋಹಿಣಿ ಅಶೋಕ ಆನಂದ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಖಡೇಬಜಾರ ಠಾಣೆ ಪೊಲೀಸರು ಹೇಳಿದರು.

error: Content is protected !!