11/12/2025
IMG-20250614-WA0007

ಮೂಡಲಗಿ-14:ಸಮೀಪದ ಕಂಕಣವಾಡಿ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಗನೂರಿನ ಸಮರ್ಥ ಶಾಲಾ ವಾಹನ ಚಾಲಕನ ನಿರ್ಲಕ್ಷ್ಯದಿಂದಾಗಿ ನಾಲ್ಕು ವರ್ಷದ ಹಸುಳೆಯೊಂದು ಮೃತಪಟ್ಟಿದ್ದು ಈ ಘಟನೆಯ ಮುಂಚೆಯೇ ಮೃತ ಬಾಲಕನ ದೊಡ್ಡಪ್ಪ ಶಾಲೆಯ ಆಡಳಿತ ಮಂಡಳಿಯವರಿಗೆ ಚಾಲಕನ ನಿರ್ಲಕ್ಷ್ಯದ ಬಗ್ಗೆ ಎಚ್ಚರಿಸುತ್ತ ಬಂದಿದ್ದರೂ ಯಾವುದೇ ಪ್ರಯೋಜನವಾಗದೇ ಬಾಲಕನ ಬಲಿಯಾಗಿದೆ ಎಂಬ ಆಘಾತಕಾರಿ ಅಂಶ ಬಹಿರಂಗವಾಗಿದೆ.

ಈ ಸಂಗತಿಯನ್ನು ಪತ್ರಿಕೆಯೊಡನೆ ಹೇಳಿಕೊಂಡ ಸಂಬಂಧದಲ್ಲಿ ದೊಡ್ಡಪ್ಪನಾಗುವ ಈರಪ್ಪ ದುಂಡಪ್ಪ ಮುಗಳಖೋಡ ಅವರು ದುರ್ಘಟನೆ ನಡೆದ ದಿನ ಮಧ್ಯಾಹ್ನವೆ ಶಾಲೆಗೆ ಹೋಗಿ ವಾಹನ ಚಾಲಕನ ನಿರ್ಲಕ್ಷ್ಯದ ಬಗ್ಗೆ ದೂರು ಹೇಳಿದ್ದಲ್ಲದೆ ಮಕ್ಕಳನ್ನು ರಸ್ತೆಯ ಆಚೆ ಬದಿ ಬಿಡಬೇಡಿ ಎಂದೂ ಕೂಡ ಹೇಳಿದ್ದರಂತೆ.

ಸಮರ್ಥ ಶಾಲೆಯಿಂದ ಪ್ರತಿದಿನ ಬೇರೆಯದೇ ವಾಹನ ಬರುತ್ತಿತ್ತು ಎಂದು ಹೇಳಿದರಲ್ಲದೆ ಹಲವಾರು ದಿನಗಳಿಂದ ಖುದ್ದು ಶಾಲೆಗೆ ಭೇಟಿ ನೀಡಿ ತಮ್ಮ ಮಕ್ಕಳನ್ನು ಶಾಲೆಯಿಂದ ಮನೆಗೆ ಬಿಡುವಾಗ ಚಾಲಕನು ಹೆದ್ದಾರಿಯ ಆ ಕಡೆಯೇ ಬಿಡುತ್ತಾನೆ ಕೈಹಿಡಿದು ರಸ್ತೆ ದಾಟಿಸುತ್ತಿಲ್ಲ ಎಂದು ಹಲವು ಸಲ ದೂರು ನೀಡಿದ್ದರೂ ಶಾಲೆಯವರು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ. ಅವರು ಸುಸಜ್ಜಿತ ಶಾಲಾ ವಾಹನ ಹಾಗೂ ದಕ್ಷ ಚಾಲಕನನ್ನು ಹಚ್ಚಿದ್ದರೆ ತಮ್ಮ ಹಸುಳೆ ಇಂದು ಜೀವಂತವಾಗಿರುತ್ತಿತ್ತು ಎಂದು ಕಣ್ಣೀರು ಹಾಕಿದರು.

error: Content is protected !!